Anand Singh : 'ಕಾಂಗ್ರೆಸ್ ಪಕ್ಷ ಇಂದು ಆಕ್ಸಿಜನ್ ಮೇಲೆ ICU ನಲ್ಲಿದೆ'

2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ.  2024 ರಲ್ಲಿ ನೀವು ಹೇಳಿದ್ದೆ ಸರಿ ಅಂತ ನೀವೇ ಹೇಳ್ತೀರಿ ಎಂದು ಮಾಧ್ಯಮದವರಿಗೆ ಹೇಳಿದರು. 

Written by - Channabasava A Kashinakunti | Last Updated : Jan 27, 2022, 09:41 AM IST
  • ಕಾಂಗ್ರೆಸ್ ಪಕ್ಷಕ್ಕೆ ಹೋದ್ರೆ ಹೋದವರ ಭವಿಷ್ಯ ಕತ್ತಲೆಗೆ ಹೋದಂತೆ
  • ನನಗೆ ಯಾರೂ ಸಂಪರ್ಕದಲ್ಲಿಲ್ಲಾ ಸಚಿವ ಆನಂದ್ ಸಿಂಗ್ ಸ್ಪಷ್ಟನೆ
  • ಕೊಪ್ಪಳ ಉಸ್ತುವಾರಿ ಸಿಕ್ಕಿದ್ದು ನನಗೆ ಖುಷಿಯಾಗಿದೆ
Anand Singh : 'ಕಾಂಗ್ರೆಸ್ ಪಕ್ಷ ಇಂದು ಆಕ್ಸಿಜನ್ ಮೇಲೆ ICU ನಲ್ಲಿದೆ' title=

ವಿಜಯನಗರ : ಕಾಂಗ್ರೆಸ್ ಪಕ್ಷಕ್ಕೆ ಹೋದ್ರೆ ಹೋದವರ ಭವಿಷ್ಯ ಕತ್ತಲೆಗೆ ಹೋದಂತೆ. ಅಲ್ಲದೆ, ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ನ ಪರಿಸ್ಥಿತಿ ಯಾವ ರೀತಿಯಲ್ಲಿ ದೇಶದಲ್ಲಿ ಇದೆ ಅಂತ ಇಡಿ ಅಂತ ಎಲ್ಲರಿಗೂ ಗೊತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. 

ಹೊಸಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆನಂದ್ ಸಿಂಗ್(Anand Singh), ನನ್ನ ಸಂಪರ್ಕದಲ್ಲಿದ್ದಾರೆ ಅಂತ ಹೇಳೋ ದೊಡ್ಡ, ದೊಡ್ಡ ನಾಯಕರು ಯಾವ ಲೆಕ್ಕದ ಮೇಲೆ ಹೇಳ್ತಾರೋ ಗೊತ್ತಿಲ್ಲ. ಅವರೆಲ್ಲಾ ದೊಡ್ಡ- ದೊಡ್ಡ ನಾಯಕರು ಅವರ ಬಗ್ಗೆ ನಾನು ಟೀಕೆ ಮಾಡೋಲ್ಲ ಅಂತ ಪರೋಕ್ಷ ಟಾಂಗ್ ನೀಡಿದರು.

ಇದನ್ನೂ ಓದಿ : Padmashri Award: ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ

ಕಾಂಗ್ರೆಸ್ ನ ಸಂಪರ್ಕದಲ್ಲಿ ಬಿಜೆಪಿಯ ಶಾಸಕರು ಇದ್ದಾರೆ ಅಂತ ಹೇಳಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ. ನನಗೆ ಯಾರೂ ಸಂಪರ್ಕದಲ್ಲಿಲ್ಲಾ ಸಚಿವ ಆನಂದ್ ಸಿಂಗ್ ಎಂದು ಸ್ಪಷ್ಟ ಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಯಾರೂ ಕೂಡ ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡ್ತಾರೆ ಹೇಳಿ ನೋಡೋಣ? ಬಿಜೆಪಿ ಮುಂದೇನೂ ಬರುತ್ತದೆ, ಸುಮಾರು ವರ್ಷಗಳ ಕಾಲ ಆಳ್ವಿಕೆ ಮಾಡುತ್ತದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ.  2024 ರಲ್ಲಿ ನೀವು ಹೇಳಿದ್ದೆ ಸರಿ ಅಂತ ನೀವೇ ಹೇಳ್ತೀರಿ ಎಂದು ಮಾಧ್ಯಮದವರಿಗೆ ಹೇಳಿದರು. 

ಉಸ್ತುವಾರಿ ಬದಲಾವಣೆ ಬಗ್ಗೆ ಸಿಂಗ್ ಸ್ಪಷ್ಟನೆ ನೀಡಿದ ಸಚಿವ ಆನಂದ್ ಸಿಂಗ್, ಕೊಪ್ಪಳ ಉಸ್ತುವಾರಿ ಸಿಕ್ಕಿದ್ದು ನನಗೆ ಖುಷಿಯಾಗಿದೆ. ನನ್ನ ಸ್ನೇಹಿತ ಶ್ರೀರಾಮುಲುಗೆ(B. Sriramulu) ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಕ್ಕಿದ್ದು ನನಗೆ ಖುಷಿ ಇದೆ. 16 ವರ್ಷಗಳ ಕಾಲದ ತಪಸ್ಸು ಆತನದು. ನಾವು ಹಿಂದಿನ ದಿನ ವೀಕೆಂಡ್ ನಲ್ಲಿ ಸೇರಿದ್ದು ಕಾಕತಾಳಿಯ ಅಷ್ಟೆ, ಅದು ವೈರಲ್ ಆಗಿದೆ. ಯಾವ ಮಂತ್ರಿಗಳಿಗೆ ತವರು ಜಿಲ್ಲೆ ಕೊಟ್ಟಿಲ್ಲ. ತಾಂತ್ರಿಕವಾಗಿ ರಾಮುಲುಗ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ದಕ್ಕಿದೆ. ಎಲ್ಲೋ ಕಲುಬುರ್ಗಿ, ಬೀದರ್ ಕೊಟ್ಟಿದ್ರೆ ನನಗೆ ಸಮಸ್ಯೆಯಾಗ್ತಿತ್ತು. ಆ ಭಾಗದ ಜನರು ಕೂಡ ಖುಷಿಯಿಂದ ಇದ್ದಾರೆ ಎಂದರು.

ಇದನ್ನೂ ಓದಿ : HD Kumaraswamy: ಮಿಷನ್ 123 ಮರೆತಿದೆಯೇ ಜೆಡಿಎಸ್? ಅವಲಂಬಿ ರಾಜಕಾರಣಕ್ಕೆ ಮತ್ತೆ ಜೈ ಎನ್ನುತ್ತಾರ ಎಚ್ಡಿಕೆ?

ಕಾಂಗ್ರೆಸ್ ಪಕ್ಷ(Congress party) ಇಂದು ಆಕ್ಸಿಜನ್ ಮೇಲೆ ICU ನಲ್ಲಿದೆ.  ವಿಜಯನಗರದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯೋದಿಲ್ಲ. ಕಾಂಗ್ರೆಸ್ ಪಕ್ಷ ಇದೆ ಅಂದ್ರೆ ಹೊಸಪೇಟೆಯಲ್ಲಿ ನಗರಸಭೆ ರಚನೆ ಮಾಡಬೇಕಿತ್ತಲ್ವಾ? ನಾವು ಸ್ವತಂತ್ರ ಅಭ್ಯರ್ಥಿಗಳನ್ನು  ಕರೆದು ಅಧಿಕಾರ ಗದ್ದುಗೆ ಏರಿದ್ದೇವೆ, ಎಲ್ಲರಿಗೂ ಫ್ರೀ ಬಿಟ್ಟಿದ್ದೇವೆ. ಯಾರನ್ನೂ ನಾವು ಹೈಜಾಕ್ ಮಾಡಿಲ್ಲಾ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News