ಬೆಂಗಳೂರು: ಸೈಬರ್ ಟ್ರೋಲ್ ನಲ್ಲಿ ಬೆಂಗಳೂರು ಪೊಲೀಸರು ಕೇವಲ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಬೆಂಗಳೂರು ಸಿಟಿ ಪೋಲಿಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇನ್ನು ಮುಂದುವರೆದು ಈ ಬಂಧನ ಕಾಕತಾಳಿಯವೇ ಅಥವಾ ಉದ್ದೇಶ ಪೂರ್ವಕವೇ? ಎಂದು ಪ್ರಶ್ನಿಸಿದ್ದಾರೆ.
RW trolls are internationally recognised as vicious, malignant and offensive. Still, all arrests made by cyber crime cell in the last 6 months are only INC or JDS workers. Will @CPBlr kindly explain if this is only a coincidence? pic.twitter.com/CO8vmyLn4e
— Brijesh Kalappa (@brijeshkalappa) September 23, 2018
ಬೆಂಗಳೂರು ಸೈಬರ್ ಪೊಲೀಸರು ರಾಜ್ಯ ಬಿಜೆಪಿ ನಾಯಕರನ್ನು ಟ್ರೋಲ್ ಮಾಡಿದ ವಿಚಾರವಾಗಿ ಸಾಯಿಬಾಬಾ ಲೇಔಟ್ ನಿವಾಸಿಯಾಗಿರುವ ಕ್ಯಾಬ್ ಡ್ರೈವರ್ ರನ್ನು ಬಂಧಿಸಿದ್ದರು.ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಬ್ರಿಜೇಶ್ ಕಾಳಪ್ಪ "ಕಳೆದ ಆರು ತಿಂಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.ಆದ್ದರಿಂದ ಬೆಂಗಳೂರು ಕಮಿಷನರ್ ಅವರು ಇದು ಕಾಕತಾಳಿಯವೇ ಅಥವಾ ಉದ್ದೇಶ ಪೂರ್ವಕವೇ? ಎನ್ನುವುದನ್ನು ತಿಳಿಸಬೇಕು" ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.