ವಿದ್ಯಾರ್ಥಿಗಳಿಂದ ಬೈಕ್, ಶೌಚಾಲಯ ತೊಳೆಸಿದ ಶಿಕ್ಷಕ!

ಶಾಲಾ ಶಿಕ್ಷಕರೊಬ್ಬರು ಪಾಠ ಹೇಳಿಕೊಡುವ ಬದಲು ಬೈಕ್, ಬಿಸಿಯೂಟ ಪಾತ್ರೆ ಹಾಗೂ ಶೌಚಾಲಯವನ್ನು ತೊಳೆಯಲು ವಿಧ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ.

Last Updated : Aug 10, 2018, 07:41 PM IST
ವಿದ್ಯಾರ್ಥಿಗಳಿಂದ ಬೈಕ್, ಶೌಚಾಲಯ ತೊಳೆಸಿದ ಶಿಕ್ಷಕ! title=

ಬೆಳಗಾವಿ: ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವ ಬದಲು ಶಿಕ್ಷಕರೊಬ್ಬರು ಮಕ್ಕಳಿಂದ ಶೌಚಾಲಯ ಮತ್ತು ಬೈಕ್ ತೊಳೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಶಿಕ್ಷಕರೊಬ್ಬರು ಪಾಠ ಹೇಳಿಕೊಡುವ ಬದಲು ಬೈಕ್, ಬಿಸಿಯೂಟ ಪಾತ್ರೆ ಹಾಗೂ ಶೌಚಾಲಯವನ್ನು ತೊಳೆಯಲು ವಿಧ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ.

ಈ ಅಮಾನವೀಯ ದೃಶ್ಯವನ್ನು ಅಲ್ಲಿನ ಗ್ರಾಮಸ್ಥರು ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. 
 

Trending News