Araga Jnanendra : ತಮಿಳುನಾಡು ಸಚಿವರ ಮಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಯ

ಸಚಿವರನ್ನು(Araga Jnanendra) ಭೇಟಿಯಾಗುವ ಪೂರ್ವದಲ್ಲಿ, ಇವರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆಗಾಗಿ ಮನವಿ ಸಲ್ಲಿಸಿದ್ದರು.

Written by - Prashobh Devanahalli | Last Updated : Mar 9, 2022, 07:59 PM IST
  • ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ ಸೇಕರ್ ಪುತ್ರಿ
  • ಇಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಭೇಟಿ
  • ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ವಿನಂತಿ
Araga Jnanendra : ತಮಿಳುನಾಡು ಸಚಿವರ ಮಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಯ title=

ಬೆಂಗಳೂರು : ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ ಸೇಕರ್ ಅವರ ಪುತ್ರಿ ಜಯ ಕಲ್ಯಾಣಿ (24) ಹಾಗೂ ಅವರ ಪತಿ ಶ್ರಿ ಸತೀಶ್ ಅವರು ಇಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ವಿನಂತಿಸಿ ಕೊಂಡಿದ್ದಾರೆ.

ಸಚಿವರನ್ನು(Araga Jnanendra) ಭೇಟಿಯಾಗುವ ಪೂರ್ವದಲ್ಲಿ, ಇವರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆಗಾಗಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ : ಪ್ರಿಯಕರನೊಂದಿಗೆ ತಮಿಳುನಾಡಿನ ಮಂತ್ರಿ ಮಗಳು ಎಸ್ಕೇಪ್; ಕರ್ನಾಟಕದಲ್ಲಿ ಮದುವೆ..!

ತನ್ನನ್ನು ಎಂಬಿಬಿಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯ ಕಲ್ಯಾಣಿ(Jayakalyani) ಅವರು, ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದು, ತಮ್ಮ ಪತಿಯವರ ವಿರುದ್ದ ಸತ್ಯಕ್ಕೆ ದೂರವಾದ ದೂರು ದಾಖಲಿಸುವ ಪ್ರಯತ್ನದ ಬಗ್ಗೆ, ಅನುಮಾನವಿದ್ದು, ರಕ್ಷಣೆ ನೀಡಬೇಕೆಂದು ವಿನಂತಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News