ಕರ್ನಾಟಕ ವಿಧಾನಸಭಾ ಚುನಾವಣೆ: ಸ್ವರಾಜ್ ಇಂಡಿಯಾ ಪಕ್ಷದಿಂದ 2ನೇ ಪಟ್ಟಿ ಬಿಡುಗಡೆ

    

Last Updated : Apr 16, 2018, 12:43 PM IST
ಕರ್ನಾಟಕ ವಿಧಾನಸಭಾ ಚುನಾವಣೆ: ಸ್ವರಾಜ್ ಇಂಡಿಯಾ ಪಕ್ಷದಿಂದ 2ನೇ ಪಟ್ಟಿ ಬಿಡುಗಡೆ  title=

ಮೈಸೂರು: ಸ್ವರಾಜ್ ಇಂಡಿಯಾ ಪಕ್ಷದ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು 15 ಏಪ್ರಿಲ್ ರಂದು, ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.

ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಪಟ್ಟಿ ಬಿಡುಗಡೆ ಮಾಡಿದರು. ರಾಜ್ಯ ಜಂಟಿ-ಕಾರ್ಯದರ್ಶಿಗಳಾದ ಅಭಿರುಚಿ ಗಣೇಶ್, ಮುಖಂಡರಾದ ಬಡಗಲಪುರ ನಾಗೇಂದ್ರ, ಬಾನು ಮೋಹನ್, ಹೆಚ್ ಎ ನಂಜುಂಡಸ್ವಾಮಿ, ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಇಲ್ಲಿದೆ:

1) ಬಾನು ಮೋಹನ್
     ಕ್ಷೇತ್ರ: ಮೈಸೂರು ( ಮೈಸೂರು)

2) ಹೆಚ್ ಬಿ ಹುನುವಳ್ಳಿ ಗಂಗಾಧರಪ್ಪ
    ಕ್ಷೇತ್ರ: ಸೊರಬ (ಶಿವಮೊಗ್ಗ)

3) ಮಲ್ಲಿಕಾರ್ಜುನ್ ಕೆಂಗನಾಳ
    ಕ್ಷೇತ್ರ: ಬಸವನ ಬಾಗೇವಾಡಿ (ಬಿಜಾಪುರ)

4) ಡಾ. ದೊಡ್ಡಮಲ್ಲಯ್ಯ
    ಕ್ಷೇತ್ರ: ಚಿತ್ರದುರ್ಗ (ಚಿತ್ರದುರ್ಗ)

5) ಪರಮೇಶ್ವರ ದೂಗೂರು
    ಕ್ಷೇತ್ರ: ಸಾಗರ (ಶಿವಮೊಗ್ಗ)

Trending News