ಸುಪ್ರೀಂ ಆದೇಶ ಬೆನ್ನಲ್ಲೇ ಕಮಿಟಿಯಿಂದ ಸರ್ಕಾರಕ್ಕೆ ಡಿಮಿಲಿಟೇಷನ್ ಕರಡುಪಟ್ಟಿ ಸಲ್ಲಿಕೆ

ಬೃಹತ್ ಬೆಂಗಳೂರು ಆಡಳಿತ ಕೇಂದ್ರವಾಗಿರೋ ಬಿಬಿಎಂಪಿ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ ಎನ್ನೋದನ್ನು ಬಿಟ್ಟರೆ ಇನ್ನುಳಿದ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ವಾರ್ಡ್ ವಾರು ಮೀಸಲಿಗೆ ಸಂಬಂಧಿ ಸಿದಂತೆ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

Written by - Manjunath Hosahalli | Edited by - Chetana Devarmani | Last Updated : Jun 1, 2022, 07:11 PM IST
  • ಸುಪ್ರೀಂ ಆದೇಶ ಬೆನ್ನಲ್ಲೇ ಕಮಿಟಿಯಿಂದ ಸರ್ಕಾರಕ್ಕೆ ಡಿಲಿಮಿಟೇಶನ್ ಕರಡುಪಟ್ಟಿ ಸಲ್ಲಿಕೆ
  • ಇದಕ್ಕೆಂದೇ ರೂಪುಗೊಂಡಿರುವ ಕಮಿಟಿ ಇಂದು ತನ್ನ ವರದಿ ಸಲ್ಲಿಸಿದೆ
  • ಬಿಬಿಎಂಪಿ ಚುನಾವಣೆಯ ಬೆಳವಣಿಗೆಗಳು ಗರಿಗೆದರಿವೆ
ಸುಪ್ರೀಂ ಆದೇಶ ಬೆನ್ನಲ್ಲೇ ಕಮಿಟಿಯಿಂದ ಸರ್ಕಾರಕ್ಕೆ ಡಿಮಿಲಿಟೇಷನ್ ಕರಡುಪಟ್ಟಿ ಸಲ್ಲಿಕೆ title=
ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಆಡಳಿತ ಕೇಂದ್ರವಾಗಿರೋ ಬಿಬಿಎಂಪಿ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ ಎನ್ನೋದನ್ನು ಬಿಟ್ಟರೆ ಇನ್ನುಳಿದ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ವಾರ್ಡ್ ವಾರು ಮೀಸಲಿಗೆ ಸಂಬಂಧಿ ಸಿದಂತೆ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆಂದೇ ರೂಪುಗೊಂಡಿರುವ ಕಮಿಟಿ ಇಂದು ತನ್ನ ವರದಿ ಸಲ್ಲಿಸಿದ್ದು ಈ ಬಾರಿ ಚುನಾವಣೆ ಎಷ್ಟು ವಾರ್ಡ್ ಗಳಿಗೆ ನಡೆಯಲಿದೆ ಜೊತೆ ಸಾಕಷ್ಟು ಅಚ್ಚರಿಯ ಸಂಗತಿಗಳು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತ-ಸಿಂಗಾಪುರ ಮಧ್ಯೆ ಏರ್‌ಲೈನ್ಸ್‌ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ

ಸರ್ವೋಚ್ಚ ನ್ಯಾಯಾಲಯ ಸೂಚನೆ ಕೊಡ್ತಿದ್ದಂಗೆ ತತ್ಕಾಲಕ್ಕೆ ಸ್ಥಬ್ಧವಾಗಿದ್ದ  ಬಿಬಿಎಂಪಿ ಚುನಾವಣೆಯ ಬೆಳವಣಿಗೆಗಳು ಗರಿಗೆದರಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅತ್ಯಗತ್ಯವಾಗಿರುವ ಎಲ್ಲಾ ರೂಪುರೇಷೆಗಳನ್ನು ದಿನೆ ದಿನೆ  ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಬಹುಮುಖ್ಯವಾಗಿ ವಾರ್ಡ್ ಡಿ ಲಿಮಿಟೇಷನ್ ಪಟ್ಟಿ ಸಿದ್ಧಪಡಿಸಿ ಕಮಿಟಿ ಇಂದು ಸರ್ಕಾರಕ್ಕೆ ಸಲ್ಲಿಸಿದೆ.

ಚುನಾವಣೆಗೆ ದೊಡ್ಡ ತೊಡಕಾಗಿದ್ದು ಜನಸಂಖ್ಯೆಯನ್ನು ಆಧರಿಸಿ ಮಾಡಬೇಕಿದ್ದ ವಾರ್ಡ್ ಮೀಸಲು. ಸರ್ಕಾರದ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಪೊರೇಷನ್ ಎಲೆಕ್ಷನ್ ಆಕಾಂಕ್ಷಿಗಳ ನಡುವೆ ಇದಕ್ಕಾಗಿ ದೊಡ್ಡ ಜಟಾಪಟಿಯೇ ನಿರ್ಮಾಣವಾಗಿತ್ತು. ಚುನಾವಣೆ ಮುಂದೂಡಲು ಶಾಸಕರು ಪ್ರಯತ್ನಿಸ್ತಿದ್ದಾರೆ. ಇದಕ್ಕಾಗಿ ಸುಪ್ರೀಂ ಮೆಟ್ಟಿಲು ಏರಿದ್ರೆ ಚುನಾವಣೆ ಪೋಸ್ಟ್ ಪೋನ್ ಆಗ್ಬೋದೆನ್ನುವ ಮಾತು ಕೂಡ ಕೇಳಿಬಂದಿತ್ತು. ಆದ್ರೆ ಇದೆಲ್ಲಕ್ಕೂ ಫುಲ್ ಸ್ಟಾಪ್ ಎಂಬಂತೆ ಇವತ್ತು ಕಮಿಟಿ ಸರ್ಕಾರಕ್ಕೆ ವಾರ್ಡ್ ಮೀಸಲು ಪಟ್ಟಿ ರವಾನೆ ಮಾಡಿದೆ.

ಕಮಿಟಿ ರಿಪೋರ್ಟ್ ನಲ್ಲಿರುವ ಸಂಗತಿಗಳ ಬಗ್ಗೆ ಹೆಚ್ಚಾಯ್ತು ಕುತೂಹಲ: 

ಕಮಿಟಿ ಸಲ್ಲಿಸಿರುವ ವರದಿಯಲ್ಲಿ ಏನೇನಿದೆ ಎಂಬ ಸಂಗತಿಗಳು ಇದೀಗ ಕುತೂಹಲ ಮೂಡಿಸಿವೆ. ಎಷ್ಟು ವಾರ್ಡ್ ಗಳನ್ನು ಫೈನಲೈಸ್ ಮಾಡಲಾಗಿದೆ. ಮೀಸಲು ಹೇಗೆ ರೂಪುಗೊಂಡಿದೆ. ಎಷ್ಟು ಪ್ರಮಾಣದ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಮಾಡಲಾಗಿದೆ. ಚುನಾವಣೆ 198 ವಾರ್ಡ್ ಗೇನೆ ನಡೆಯುತ್ತಾ...? ಅಥವಾ 243 ವಾರ್ಡ್ ಗಳಿಗೆ ಆಗುತ್ತಾ..? ಇಂತದೊಂದಿಷ್ಟು ಪ್ರಶ್ನೆಗಳಿಗೆ ಕಮಿಟಿ ಸಲ್ಲಿಸಿರುವ ರಿಪೋರ್ಟ್ ನಲ್ಲಿ ಉತ್ತರವಿದೆ.

ಇದನ್ನೂ ಓದಿ: ಸಮೀರ್ ವಾಂಖೆಡೆ ಸ್ಥಾನಕ್ಕೆ ಬೆಂಗಳೂರು ಎನ್‌ಸಿಬಿ ಚೀಫ್ ನೇಮಕ!

ಕಮಿಟಿ ಸಲ್ಲಿಸಿರುವ ವರದಿಯನ್ನು ಸರ್ಕಾರ ಸುಪ್ರೀಂ ಕೋರ್ಟ್ ಸಲ್ಲಿಕೆ ಮಾಡಲಿದೆ. ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮವಾಗಿ ಚುನಾವಣೆ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಲಿದೆ. ಇದೆಲ್ಲದರ ನಡುವೆಯೇ ಕೆಲವರು ಮುಂದಿನ ದಿನಗಳಲ್ಲಿ ಪಾಲಿಕೆ ಚುನಾವಣೆ ತಡೆಹಿಡಿಯುವ ಯತ್ನ ಮಾಡಿದ್ರೂ ಆಶ್ಚರ್ಯವಿಲ್ಲ. ಆದ್ರೆ ಸುಪ್ರಿಂ ಕೋರ್ಟ್ ಮಾತ್ರ  ಚುನಾವಣೆ ಬಗ್ಗೆ ಗಂಭೀರತೆ ನಿಲುವಿಗೆ ಬದ್ಧವಾಗಿರೋದ್ರಿಂದ ನಿರೀಕ್ಷೆಯಂತೆಯೇ ಬೆಂದಕಾಳೂರಿನ ಆಡಳಿತ ಕೇಂದ್ರ ಎಲೆಕ್ಷನ್ ನಡೆಯೋದಂತೂ ತಪ್ಪಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News