SSLC ಫಲಿತಾಂಶ: ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ

625ಕ್ಕೆ 625 ಅಂಕಗಳಿಸಿದ ಮೈಸೂರಿನ ಎಂ.ಎಸ್. ಯಶಸ್ ಹಾಗೂ ಬೆಂಗಳೂರಿನ ಸುದರ್ಶನ್.

Last Updated : May 7, 2018, 12:24 PM IST
SSLC ಫಲಿತಾಂಶ: ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ title=

ಬೆಂಗಳೂರು: 2017-18ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ  ನಿರ್ದೇಶಕಿ ಶಾಲಿನಿ ರಜನೀಶ್ ಸೋಮವಾರ ಫಲಿತಾಂಶ ಪ್ರಕಟಿಸಿದ್ದಾರೆ. ಫಲಿತಾಂಶದಲ್ಲಿ ನಿರೀಕ್ಷೆಯಂತೆ ಉಡುಪಿ ಪ್ರಥಮ ಸ್ಥಾನ ಗಳಿಸಿದೆ. ಉತ್ತರ ಕನ್ನಡ ದ್ವಿತೀಯ ಹಾಗೂ ಚಿಕ್ಕೋಡಿ ತೃತೀಯ ಸ್ಥಾನ ಗಳಿಸಿದ್ದರೆ ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. 

2016-17 ನೇ ಸಾಲಿನಲ್ಲಿ 8,56,286 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು, ಅದರಲ್ಲಿ 5,81,134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ. 67.87 ಫಲಿತಾಂಶ ಬಂದಿತ್ತು. 

2017-18ನೇ ಸಾಲಿನಲ್ಲಿ 8,38,088 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 6,02,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು ಶೇ. 71.93ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಮೈಸೂರಿನ ಎಂ.ಎಸ್. ಯಶಸ್ ಹಾಗೂ ಬೆಂಗಳೂರಿನ ಸುದರ್ಶನ್ ಎಂಬ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳಿಸಿದ್ದರೆ, 8 ವಿದ್ಯಾರ್ಥಿಗಳು 624, 12 ವಿದ್ಯಾರ್ಥಿಗಳು 623, 22 ವಿದ್ಯಾರ್ಥಿಗಳು 622, 35 ವಿದ್ಯಾಥಿಗಳು 621 ಹಾಗೂ 39 ವಿದ್ಯಾರ್ಥಿಗಳು 620 ಅಂಕಗಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ ಫೋನ್‌'ಗಳಿಗೆ ಫಲಿತಾಂಶವನ್ನು SMS ಮೂಲಕ ಕಳಿಸಲು ಕ್ರಮ ಕೈಗೊಂಡಿದೆ. http://kseeb.kar.nic.in/ ಮತ್ತು http://karresults.nic.in/ ವೆಬ್‌ಸೈಟ್‌ನಲ್ಲಿ ಬೆಳಿಗ್ಗೆ 11ರ ನಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಲಭ್ಯವಾಗಲಿದ್ದು, ಮೇ 8ರ ಮಂಗಳವಾರ ಮಧ್ಯಾಹ್ನ 12:00 ಗಂಟೆ ನಂತರ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ.   

ಜಿಲ್ಲಾವಾರು ಫಲಿತಾಂಶ ಮತ್ತು ಸ್ಥಾನ
ಕ್ರಮ ಸಂಖ್ಯೆ ಜಿಲ್ಲೆ ಶೇಕಡಾವಾರು 
1 ಉಡುಪಿ  88.18
2 ಉತ್ತರ ಕನ್ನಡ 88.12
3 ಚಿಕ್ಕೋಡಿ 87.01
4 ಮಂಗಳೂರು 85.56
5 ಮಧುಗಿರಿ 85.55
6 ಬೆಳಗಾವಿ 84.77
7 ಹಾಸನ 84.68
8 ಕೋಲಾರ 83.34
9 ವಿಜಯಪುರ 83.23
10 ತುಮಕೂರು 82.97
11 ಮೈಸೂರು 82.9
12 ಬಳ್ಳಾರಿ 82.73
13 ಧಾರವಾಡ 82.21
14 ಬೆಂಗಳೂರು ಗ್ರಾಮಾಂತರ 82.17
15 ದಾವಣಗೆರೆ 81.56
16 ಚಿತ್ರದುರ್ಗ 80.85
17 ರಾಮನಗರ 80.78
18 ಕೊಡಗು 80.68
19 ಕೊಪ್ಪಳ 80.43
20 ಶಿವಮೊಗ್ಗ 78.75
21 ಶಿರಸಿ 78.06
22 ಬೆಂಗಳೂರು ಉತ್ತರ 77.37
23 ಹಾವೇರಿ 76.76
24 ಚಾಮರಾಜನಗರ 74.47
25 ಬಾಗಲಕೋಟೆ 72.7
26 ಚಿಕ್ಕಮಗಳೂರು 72.47
27 ಬೆಂಗಳೂರು ದಕ್ಷಿಣ 72.03
28 ಮಂಡ್ಯ 71.57
29 ರಾಯಚೂರು 68.89
30 ಕಲಬುರ್ಗಿ 68.65
31 ಚಿಕ್ಕಬಳ್ಳಾಪುರ 68.2
32 ಗದಗ 67.52
33 ಬೀದರ್ 60.71
34 ಯಾದಗಿರಿ 35.54

 

Trending News