ಇಂದು ಬೆಳಿಗ್ಗೆ 11 ಗಂಟೆಗೆ SSLC ಫಲಿತಾಂಶ

SMS ಮೂಲಕ ಕೂಡ ನೀವು ಫಲಿತಾಂಶ ತಿಳಿಯಬಹುದು.

Last Updated : May 7, 2018, 08:22 AM IST
ಇಂದು ಬೆಳಿಗ್ಗೆ 11 ಗಂಟೆಗೆ SSLC ಫಲಿತಾಂಶ title=

ಬೆಂಗಳೂರು: 2017-2018ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಇಂದು ಬೆಳಿಗ್ಗೆ 11:00 ಗಂಟೆಗೆ ಆನ್‌ಲೈನ್‌ನಲ್ಲಿ ಪ್ರಕಟವಾಗಲಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮೇ 8ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.

http://kseeb.kar.nic.in/ ಮತ್ತು http://karresults.nic.in/ ವೆಬ್‌ಸೈಟ್‌ನಲ್ಲಿ ಬೆಳಿಗ್ಗೆ 11ರ ನಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ವೀಕ್ಷಿಸಬಹುದು.

R10< space>ROLLNUMBER ಬರೆದು 56263ಕ್ಕೆ ಸಂದೇಶ ಕಳುಹಿಸುವ ಮೂಲಕ SMS ಮೂಲಕ ಕೂಡ ನೀವು ಫಲಿತಾಂಶ ತಿಳಿಯಬಹುದು.

ರಾಜ್ಯದಾದ್ಯಂತ 33 ವಿಷಯಗಳಲ್ಲಿ 2,812 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8.54 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. 

Trending News