ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ವೇಣೂರು-ಪೆರ್ಮುಡದಲ್ಲಿ ಶನಿವಾರ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹೊಸ ದಾಖಲೆ ಬರೆದಿದ್ದಾರೆ. 8.96 ಸೆಕೆಂಡ್ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಇದುವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದರು.
ಕಂಬಳದ 125 ಮೀಟರ್ ಉದ್ದದ ಕೆರೆಯನ್ನು 11.21 ಸೆಕೆಂಡ್ನಲ್ಲಿ ಶ್ರೀನಿವಾಸಗೌಡ(Srinivasa Gowda) ತಲುಪಿದ್ದಾರೆ. ಇದನ್ನು 100 ಮೀಟರ್ಗೆ ಲೆಕ್ಕ ಹಾಕಿದಾಗ 8.96 ಸೆಕೆಂಡ್ ಸಮಯ ತೆಗೆದುಕೊಂಡಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಶ್ರೀನಿವಾಸ ಗೌಡ ಓಡಿಸಿದ್ದಾರೆ.
Coronavirus: ಕೊರೋನಾ ಅಬ್ಬರ; ರಾಜ್ಯದಲ್ಲಿ ಮತ್ತೆ 2 ವಾರ 'ಶಾಲಾ-ಕಾಲೇಜುಗಳು' ಬಂದ್..!?
ಈ ಮೊದಲು ಕಳೆದ ವರ್ಷ ಐಕಳದಲ್ಲಿ ನಡೆದ ಕಂಬಳ(Kambala 2021)ದಲ್ಲಿ ಇದೇ ಶ್ರೀನಿವಾಸ ಗೌಡ 100 ಮೀಟರ್ ಅನ್ನು 9.55 ಸೆಕೆಂಡ್ನಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಅದಾದ ನಂತರ ಕಳೆದ ವರ್ಷದ ವೇಣೂರು ಕಂಬಳದಲ್ಲಿ ಈ ದಾಖಲೆ ಮುರಿದಿದ್ದ ಬಜಗೋಳಿ ನಿಶಾಂತ್ ಶೆಟ್ಟಿ 100 ಮೀಟರ್ ಅನ್ನು 9.52 ಸೆಕೆಂಡ್ನಲ್ಲಿ ಕ್ರಮಿಸಿದ್ದರು. ಬೈಂದೂರು ವಿಶ್ವನಾಥ ದೇವಾಡಿಗ ಈ ವರ್ಷ ನಡೆದ ಐಕಳ ಕಂಬಳದಲ್ಲಿ 100 ಮೀಟರ್ ಅನ್ನು 9.15 ಸೆಕೆಂಡ್ನಲ್ಲಿ ಕ್ರಮಿಸಿ, ಹೊಸ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯೂ ನೇಪಥ್ಯಕ್ಕೆ ಸರಿದಂತಾಗಿದೆ.
Belagavi Lok Sabha: ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಹೆಸರು ಫೈನಲ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.