Veerappan case: ವೀರಪ್ಪನ್ ಕೇಸ್ ಗಳಲ್ಲಿ ಆರೋಪಿಯಾಗಿದ್ದ ಸ್ಪೆಲ್ಲಾ ಮೇರಿ ಎಲ್ಲಾ ಕೇಸ್ ಗಳಿಂದ ಖುಲಾಸೆ

Veerappan case: ವೀರಪ್ಪನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾಗಿದ್ದಾರೆ.

Written by - Manjunath N | Last Updated : Mar 5, 2024, 06:31 PM IST
  • ಎಲ್ಲಾ ಪ್ರಕರಣಗಳಿಂದ ಕಳೆದ ವಾರ ಖುಲಾಸೆಗೊಳಿಸಿದ್ದು ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
  • 13 ರ ಹರೆಯದಲ್ಲಿ ಅಪಹರಣಕ್ಕೊಳಗಾಗಿ ವೀರಪ್ಪನ್ ಗ್ಯಾಂಗ್ ನಲ್ಲಿರಬೇಕಾದ ಪರಿಸ್ಥಿತಿ ಬಂದೊದಗಿತ್ತು.
  • ಸ್ಟೆಲ್ಲಾ ಮೇರಿ ಪಾಲಾರ್ ಬಾಂಬ್ ಸ್ಟೋಟ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊದ್ದೊಯ್ದ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು.
Veerappan case: ವೀರಪ್ಪನ್ ಕೇಸ್ ಗಳಲ್ಲಿ ಆರೋಪಿಯಾಗಿದ್ದ ಸ್ಪೆಲ್ಲಾ ಮೇರಿ ಎಲ್ಲಾ ಕೇಸ್ ಗಳಿಂದ ಖುಲಾಸೆ title=

ಚಾಮರಾಜನಗರ: ವೀರಪ್ಪನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾಗಿದ್ದಾರೆ.

ಚಾಮರಾಜನಗರ ಬಾಲನ್ಯಾಯ ಮಂಡಲಿಯು ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಿಂದ ಕಳೆದ ವಾರ ಖುಲಾಸೆಗೊಳಿಸಿದ್ದು ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

13 ರ ಹರೆಯದಲ್ಲಿ  ಅಪಹರಣಕ್ಕೊಳಗಾಗಿ ವೀರಪ್ಪನ್ ಗ್ಯಾಂಗ್ ನಲ್ಲಿರಬೇಕಾದ ಪರಿಸ್ಥಿತಿ ಬಂದೊದಗಿತ್ತು.ಸ್ಟೆಲ್ಲಾ ಮೇರಿ ಪಾಲಾರ್ ಬಾಂಬ್ ಸ್ಟೋಟ,  ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊದ್ದೊಯ್ದ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. 

ಇದನ್ನೂ ಓದಿ- ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್

27 ವರ್ಷಗಳ ಬಳಿಕ ಬಂಧಿತಳಾಗಿದ್ದ ಸ್ಟೆಲ್ಲಾ: 

ಪ್ರಕರಣಗಳು ನಡೆದ 27 ವರ್ಷದ ಬಳಿಕ ಕೊಳ್ಳೇಗಾಲ ತಾಲೂಕಿನ ಜಾಗೇರಿಯಲ್ಲಿ ಅಪರಾಧ ಪತ್ತೆ ದಳ ಬಂಧಿಸಿ ಪ್ರಕರಣವನ್ನು ಮತ್ತೇ ತೆರೆದಿತ್ತು. ಆರಂಭದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ಬಳಿಕ ಬಾಲ ನ್ಯಾಯಮಂಡಲಿಗೆ ವರ್ಗಾಯಿಸಲಾಗಿತ್ತು.

ಈ ಕುರಿತು ಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್‌ ಪ್ರತಿಕ್ರಿಯಿಸಿ, ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News