ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ದಿನನಿತ್ಯ ಬೀದಿಕಾಳಗ ಮಾಡ್ತಿದ್ದಾರೆ: ಬಿಜೆಪಿ

Siddu vs DKS: ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಎರಡೆರಡು ಬಾರಿ ಮುಂದಕ್ಕೆ ಹಾಕಿದರೂ ಡಿಕೆಶಿ ಮಾತಿಗೆ ಸಿದ್ದರಾಮಯ್ಯ ಕಿಮ್ಮತ್ತೇ ನೀಡಲಿಲ್ಲ ಅಂತಾ ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Nov 29, 2022, 06:19 PM IST
  • ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ
  • ಸಿಎಂ ಕುರ್ಚಿಗಾಗಿ ದಿನನಿತ್ಯ ಬೀದಿಕಾಳಗ ಮಾಡ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
  • ‘ಸಿದ್ದು ಕ್ಷೇತ್ರ ನಾಡಿಮಿಡಿತ’ ಪರೀಕ್ಷಿಸಲು ಡಿಕೆಶಿ ಅರ್ಜಿ ಸಲ್ಲಿಸುವ ನಿಯಮ ಜಾರಿಗೊಳಿಸಿದರು ಅಂತಾ ಬಿಜೆಪಿ ಟೀಕಿಸಿದೆ
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ದಿನನಿತ್ಯ ಬೀದಿಕಾಳಗ ಮಾಡ್ತಿದ್ದಾರೆ: ಬಿಜೆಪಿ title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿನನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

#SidduVsDKS ಹ್ಯಾಶ್‍ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯರನ್ನು ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು. ಸಿದ್ದರಾಮಯ್ಯರನ್ನು ಸೋಲಿಸಿದರೆ ಮಾತ್ರ ತಾನು ಸಿಎಂ ಆಗಬಹುದೆಂದು ಡಿಕೆಶಿ ಬಲವಾಗಿ ನಂಬಿದ್ದಾರೆ. ಹೀಗಾಗಿ "ಸಿದ್ದು ಕ್ಷೇತ್ರ ನಾಡಿಮಿಡಿತ" ಪರೀಕ್ಷಿಸಲು ಡಿಕೆಶಿ ಅರ್ಜಿ ಸಲ್ಲಿಸುವ ನಿಯಮ ಜಾರಿಗೊಳಿಸಿದರು’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: 75 ವರ್ಷ ಆಯ್ತು ಸಿದ್ದರಾಮಯ್ಯ ನಿವೃತ್ತಿ ಪಡೆಯಲಿ : ಸಚಿವ ಅಶ್ವಥ್ ನಾರಾಯಣ

‘ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಎರಡೆರಡು ಬಾರಿ ಮುಂದಕ್ಕೆ ಹಾಕಿದರೂ ಡಿಕೆಶಿ ಮಾತಿಗೆ ಸಿದ್ದರಾಮಯ್ಯ ಕಿಮ್ಮತ್ತೇ ನೀಡಲಿಲ್ಲ. ಸಿದ್ದರಾಮಯ್ಯ ಅರ್ಜಿ ಸಲ್ಲಿಸಬೇಕಾದರೆ ದೆಹಲಿಯಿಂದಲೇ ಅಪ್ಪಣೆ ಬರಬೇಕಾಯಿತು. ಡಿಕೆಶಿ ರಣತಂತ್ರಕ್ಕೆ ಸಿದ್ದರಾಮಯ್ಯ ನಿರ್ಲ್ಯಕ್ಷದ ಪ್ರತ್ಯುತ್ತರ ನೀಡಿದ್ದೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

‘ಹೈಕಮಾಂಡ್ ಒತ್ತಡದಿಂದ ಸಿದ್ದರಾಮಯ್ಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಂತೆ "ಒಬ್ಬರಿಗೆ ಒಂದೇ ಕ್ಷೇತ್ರ" ಎಂಬ ಹೊಸ ನಿಯಮವನ್ನು ಡಿಕೆಶಿ ಘೋಷಿಸಿದರು. ಸಿದ್ದರಾಮಯ್ಯರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯನವರೇ ನಿಮಗೆ ಖೆಡ್ಡಾ ತೋಡುತ್ತಿದ್ದಾರೆ! ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು "ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯರಿಗಿಲ್ಲ" ಎನ್ನುವ ಹೇಳಿಕೆಯನ್ನು ಡಿಕೆಶಿ ಘಂಟಾಘೋಷವಾಗಿ ನೀಡಿದರು. ಸಿಎಂ ಕುರ್ಚಿಗಾಗಿ ಶೀತಲ ಸಮರವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: Gang Rape: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News