ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಕೊಡ್ತಿದ್ದಂತೆ ಫುಲ್ ಖುಷ್ ಆದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ! ಯಾಕೆ ಗೊತ್ತಾ?

ಕೆಲ ವರ್ಷಗಳಿಂದ ರಾಜಕೀಯ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ, ಮತ್ತೆ ಚಂದನವನಕ್ಕೆ ಕಂಬ್ಯಾಕ್ ಮಾಡಿರುವ ಜೊತೆಗೆ ಈಗ ರಾಜಕೀಯಕ್ಕೂ ಮತ್ತೆ ಮರುಪ್ರವೇಶ ಮಾಡಲು ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದ್ದ ರಮ್ಯಾ ಕೆಲ ತಿಂಗಳಿಂದ ಸುಮಲತಾ ಅಂಬರೀಷ್ ಮುಂದಿನ ನಡೆಗೆ ಕಾದಿದ್ದರು. ಯಾಕೆ ಅಂತೀರಾ? ಉತ್ತರ ಇಲ್ಲಿದೆ...

Written by - Prashobh Devanahalli | Edited by - Bhavishya Shetty | Last Updated : Mar 11, 2023, 01:41 AM IST
    • ಸಂಸದೆ ಸುಮಲತಾ ಅಂಬರೀಷ್ ಇಂದು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ
    • ಈ ಘೋಷಣೆ ಬೆನ್ನಲೇ ಮಂಡ್ಯ ರಾಜಕೀಯದಲ್ಲಿ ಹಲವಾರು ಲೆಕ್ಕಾಚಾರ ಮುನ್ನಲೆಗೆ ಬರುತ್ತಿದೆ.
    • ಪಕ್ಷೇತರ ಅಭ್ಯರ್ಥಿಯಾಗಿ 2018ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಷ್
ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಕೊಡ್ತಿದ್ದಂತೆ ಫುಲ್ ಖುಷ್ ಆದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ! ಯಾಕೆ ಗೊತ್ತಾ? title=
MP Sumalatha

ಬೆಂಗಳೂರು: ಸಂಸದೆ ಸುಮಲತಾ ಅಂಬರೀಷ್ ಇಂದು  ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿ, ಸಹ ಸದಸ್ಯತ್ವ ಪಡೆಯುವ ಘೋಷಣೆಯನ್ನ ಮಂಡ್ಯದಲ್ಲಿ ಮಾಡಿದರು. ಈ ಘೋಷಣೆ ಬೆನ್ನಲೇ ಮಂಡ್ಯ ರಾಜಕೀಯದಲ್ಲಿ ಹಲವಾರು ಲೆಕ್ಕಾಚಾರ ಮುನ್ನಲೆಗೆ ಬರುತ್ತಿದೆ. ಈ ಪೈಕಿ ಮುಖ್ಯವಾಗಿ ಹಿನ್ನಲೆಗೆ ಸರಿದಿದ್ದ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ ) ರಾಜಕೀಯ ಪಯಣ ಮತ್ತೆ ಮುಖ್ಯ ರಸ್ತೆಗೆ ಬರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!

ಕೆಲ ವರ್ಷಗಳಿಂದ ರಾಜಕೀಯ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ, ಮತ್ತೆ ಚಂದನವನಕ್ಕೆ ಕಂಬ್ಯಾಕ್ ಮಾಡಿರುವ ಜೊತೆಗೆ ಈಗ ರಾಜಕೀಯಕ್ಕೂ ಮತ್ತೆ ಮರುಪ್ರವೇಶ ಮಾಡಲು ನಿರ್ಧಾರ ಮಾಡಿದ್ದಾರೆ.

ಮಂಡ್ಯ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದ್ದ ರಮ್ಯಾ ಕೆಲ ತಿಂಗಳಿಂದ ಸುಮಲತಾ ಅಂಬರೀಷ್ ಮುಂದಿನ ನಡೆಗೆ ಕಾದಿದ್ದರು. ಯಾಕೆ ಅಂತೀರಾ? ಉತ್ತರ ಇಲ್ಲಿದೆ...

ಪಕ್ಷೇತರ ಅಭ್ಯರ್ಥಿಯಾಗಿ 2018ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಷ್ ಅವರು ಸಂಸದೆಯಾಗಿ ಆಯ್ಕೆಯಾಗಿದ್ದರು. ಆದರೆ ಮುಂದಿನ ರಾಜಕೀಯ ನಡೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಸೇರ್ಪಡೆ ಹಾದಿಗಳು ಇದ್ದವು. ಇದೀಗ ಸುಮಲತಾ ಅಂಬರೀಷ್ ಬಿಜೆಪಿ ಕಡೆ ತಿರುಗಿದ್ದಾರೆ. ಇದರಿಂದ ರಮ್ಯಾ ಮತ್ತೆ ರಾಜಕೀಯಕ್ಕೆ ಕಂಬ್ಯಾಕ್ ಮಾಡಲು ಹಾದಿ ಸುಗಮ ಆಗಿದೆ.

ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆ ರಮ್ಯ, ಸುಮಲತಾ ಕಾಂಗ್ರೆಸ್ ಸೇರ್ತಾರಾ? ಇಲ್ಲವೇ ಬಿಜೆಪಿ ಸೇರ್ತಾರಾ? ಎಂಬ ವಿಚಾರದ ಜೋರು ಚರ್ಚೆ ಎದುರಾಗಿತ್ತು. ಹಾಲಿ ಸಂಸದೆಯ ರಾಜಕೀಯ ನಿರ್ಧಾರದಿಂದ ಮಾಜಿ ಸಂಸದೆಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಸುಮಲತಾ ಕಾಂಗ್ರೆಸ್ ಕಡೆ ಮುಖ ಮಾಡಿದ್ರೆ , ರಮ್ಯಾಗೆ ಮುಂದಿನ ಲೋಕಸಭಾ ಚುನಾವಣೆ ಇಲ್ಲವೇ ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದಲ್ಲಿ ಹಿನ್ನಡೆ ಎಂಬ ಅಭಿಪ್ರಾಯ ಸಕ್ಕರೆ ನಗರಿ ಮಂಡ್ಯದಲ್ಲಿ ಇತ್ತು. ಸದ್ಯ ಬಿಜೆಪಿಗೆ ಸುಮಲತಾ ಬೆಂಬಲ ಘೋಷಣೆ ಹಿನ್ನೆಲೆಯಲ್ಲಿ, ರಮ್ಯಾಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ತಿಕ್ಕಾಟ ಇಲ್ಲದಂತಾಗಿದೆ.

ಇದನ್ನೂ ಓದಿ: ಮಕ್ಕಳಾದ ಮೇಲೆ ಸಂಗಾತಿಗೆ ವಿಚ್ಛೇದನ ನೀಡಿ ಮತ್ತೊಬ್ಬರ ಜೊತೆ ಸಂಬಂಧ ಬೆಳಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು

ಈ ಕಾರಣದಿಂದ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯಲಿದ್ದು, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News