ಗದಗ: ಗಾನಯೋಗಿ ಪಂಡಿತ್ ಪುಟ್ಟರಾಜ್ ಗವಾಯಿಗಳು ಅಂದ ಅನಾಥರಿಗೆ ಬೆಳಕಾದವರು ಸಂಗೀತದ ಮೂಲಕ ಅವರೆಲ್ಲರಿಗೂ ಮಾರ್ಗವನ್ನು ತೊರಿಸಿದವರು ಇಂತಹ ಮಹಾನ್ ಗುರುಗಳು ಇಂದಿಗೆ ತೀರಿಕೊಂಡು 11 ವರ್ಷಗಳಾಗುತ್ತಾ ಬಂತು, ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಕೂಡ ವೀರೇಶ್ವರ ಪುಣ್ಯಾಶ್ರಮ ಅಂದ ಅನಾಥರ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಪ್ರದಾಯದಲ್ಲಿ ಭಾರತೀಯ ಸಂಗೀತಗಾರರಾಗಿದ್ದ ಪುಟ್ಟರಾಜರು (Puttaraj Gawai), ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ 80 ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ, ಸಂಗೀತ ಶಿಕ್ಷಕರಾಗಿ ಮತ್ತು ಸಮಾಜ ಸೇವಕರಾಗಿ ಅವರ ಕಾರ್ಯಗಳು ಜನ ಮಾನಸದಲ್ಲಿ ಅಜರಾಮರವಾಗಿವೆ. ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತಿಯನ್ನು ಪಡೆದಿರುವ ಅವರು ಗ್ವಾಲಿಯರ್ ಘರಾನಾದಲ್ಲಿ ಸದಸ್ಯರಾಗಿದ್ದಾರೆ.
ಅವರು ವೀಣೆ, ತಬಲಾ, ಮೃದಂಗ, ಪಿಟೀಲು ಮೊದಲಾದ ಅನೇಕ ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಹಾಗೂ ಭಕ್ತಿ ಸಂಗೀತದ ಜನಪ್ರಿಯತೆಗೆ ಹೆಸರುವಾಸಿಯಾಗಿದ್ದಾರೆ.ಅವರಿಗೆ ಕೇಂದ್ರ ಸರ್ಕಾರ 2008 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: M S Subbulakshmi Birth Anniversary: ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರನ್ನು ಸ್ಮರಿಸುತ್ತಾ..
ಅವರು ಕರ್ನಾಟಕದ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯ) ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಬಡ ಕನ್ನಡ ಲಿಂಗಾಯತ ಕುಟುಂಬದಲ್ಲಿ ಮಾರ್ಚ್ 3,1911 ರಲ್ಲಿ ಜನಿಸಿದರು.ಅವರ ಪೋಷಕರು ರೇವಯ್ಯ ವೆಂಕಟಪುರಮಠ ಮತ್ತು ಸಿದ್ದಮ್ಮ.ಅವರು 6 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು.ಅವರು 10 ತಿಂಗಳ ಮಗುವಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡರು,ನಂತರ ಅವರ ತಾಯಿಯ ಚಿಕ್ಕಪ್ಪ ಚಂದ್ರಶೇಖರಯ್ಯ ಅವರ ಆಶ್ರಯದಲ್ಲಿ ಬೆಳೆದರು.
ಗವಾಯಿಯವರ ಸಂಗೀತದ ಆಸಕ್ತಿಯನ್ನು ಕಂಡು ಅವರ ಚಿಕ್ಕಪ್ಪ ಅವರನ್ನು ಗಾನಯೋಗಿ ಪಂಚಾಕ್ಷರ ಗವಾಯಿ ನಡೆಸುತ್ತಿದ್ದ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದುಕೊಂಡು ಹೋದರು.ಪಂಚಾಕ್ಷರ ಗವಾಯಿಗಳ ಮಾರ್ಗದರ್ಶನದಲ್ಲಿ, ಅವರು ಹಿಂದೂಸ್ತಾನಿಯನ್ನು ಕರಗತ ಮಾಡಿಕೊಂಡರು.ಮುಂಡರಿಗಿ ರಾಘವೇಂದ್ರಾಚಾರ್ ಅವರ ಮಾರ್ಗದರ್ಶನದಲ್ಲಿ ಅವರು ಕರ್ನಾಟಕ ಸಂಗೀತವನ್ನು ಕರಗತ ಮಾಡಿಕೊಂಡರು.ಮುಂದೆ ಅವರು ಹಾರ್ಮೋನಿಯಂ, ತಬಲಾ, ಪಿಟೀಲು ಮತ್ತು 10 ಇತರ ಸಂಗೀತ ವಾದ್ಯಗಳನ್ನು ಕರಗತ ಮಾಡಿಕೊಂಡಿದ್ದರು.
ಪುಟ್ಟರಾಜ್ ಗವಾಯಿಗಳು ಶ್ರೀಗುರು ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಕಂಪನಿ ಸ್ಥಾಪಿಸುವ ಮೂಲಕ ಇದರಿಂದ ಬಂದಿರುವ ಹಣವನ್ನು ಅವರು ಅಂದ ಅನಾಥರಿಗೆ ಉಚಿತ ಆಹಾರ, ವಸತಿ, ಶಿಕ್ಷಣವನ್ನು ಬಳಸುತ್ತಿದ್ದರು.ಅವರು ರಚಿಸಿ ನಿರ್ದೇಶಿಸಿದ ಅವರ ಮೊದಲ ನಾಟಕ 'ಶ್ರೀ ಶಿವಯೋಗಿ ಸಿದ್ಧರಾಮ' ಸಾಕಷ್ಟು ಹೆಸರನ್ನು ತಂದುಕೊಟ್ಟಿತು.
12 ನೇ ಶತಮಾನದ ಭಕ್ತಿ ಚಳುವಳಿಯ ಆಧ್ಯಾತ್ಮಿಕತೆ, ಧರ್ಮ, ಇತಿಹಾಸ ಹಾಗೂ ಅನೇಕ 'ಶರಣರ' ಜೀವನಚರಿತ್ರೆಗಳ ಕುರಿತು ಪುಟ್ಟರಾಜ್ ಗವಾಯಿ 80 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಭಗವದ್ಗೀತೆಯನ್ನು ಬ್ರೈಲ್ ಲಿಪಿಯಲ್ಲಿ ಪುನಃ ಬರೆದರು.
ಸದ್ಯ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮವು ಅಂದ ಅನಾಥರ ಪಾಲಿಗೆ ಆಸರೆಯಾಗಿ ನಿಂತಿದೆ.ಇದು ಕೇವಲ ಅಂಧರು, ಅನಾಥರು ಮತ್ತು ಬಡ ಮಕ್ಕಳ ಉನ್ನತಿಗಾಗಿ ಮೀಸಲಾಗಿರುವ ದತ್ತಿ ಸಂಸ್ಥೆಯಾಗಿದೆ. ಆಶ್ರಮದಲ್ಲಿ 1000 ಕ್ಕೂ ಹೆಚ್ಚು ಮಕ್ಕಳು ವಾಸಿಸುತ್ತಿದ್ದು ಅವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಆಶ್ರಮವು ಸಂಗೀತ ಹಾಗೂ ಸಾಮಾನ್ಯ ಶಿಕ್ಷಣವನ್ನು ಒಳಗೊಂಡ ಹದಿಮೂರು ಸಂಸ್ಥೆಗಳನ್ನು ನಡೆಸುತ್ತಿದೆ.
ಶ್ರೀ ವೀರೇಶ್ವರ ಪುಣ್ಯಾಶ್ರಮ ಸರ್ಕಾರದ ಯಾವುದೇ ಸಹಾಯವಿಲ್ಲದೆ ತನ್ನ ಸ್ವಂತ ಶಕ್ತಿಯ ಮೇಲೆ ನಡೆಸಲಾಗುತ್ತದೆ. ಇದು ಸಮಾಜಕ್ಕೆ ಪ್ರತಿಭಾವಂತ ಸಂಗೀತಗಾರರು, ರೇಡಿಯೋ ಕಲಾವಿದರನ್ನು ಕೊಡುಗೆ ನೀಡುತ್ತಿದೆ.
ಪುಟ್ಟರಾಜ ಕವಿ ಗವಾಯಿಗಳು ತಮ್ಮ 96 ನೇ ವಯಸ್ಸಿನಲ್ಲಿ ಗದಗನಲ್ಲಿ ಲಿಂಗೈಕ್ಯರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.