ತಡವಾಗ್ತಿರೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ! ಬೈಪಾಸ್ ಮೊರೆಹೋದ ಬಿಬಿಎಂಪಿ

Rajkaluve encroachment clearing: ವಾಹನಗಳಲ್ಲಿ ಓಡಾಡ್ತಿದ್ದ ಜನರು ಸಿಲಿಕಾನ್ ಸಿಟಿಯ ರಸ್ತೆಗಳಲ್ಲೇ ಬೋಟ್‌ಗಳಲ್ಲಿ ಓಡಾಡುವಂತಾಗಿತ್ತು. ಇದಕ್ಕೆಲ್ಲಾ ಕಾರಣ ರಾಜಕಾಲುವೆ ಒತ್ತುವರಿ ಅಂತ ಪಾಲಿಕೆಗೂ ಗೊತ್ತಿತ್ತು. ಆದ್ರೆ, ತೆರವು ಮಾಡಬೇಕಿದ್ದ ಪಾಲಿಕೆ ಆರಂಭದಲ್ಲಿ ಮೀನಾಮೇಷ ಏಣಿಸಿತ್ತು.   

Written by - Bhavya Sunil Bangera | Last Updated : Jul 3, 2023, 05:12 PM IST
  • ಒತ್ತುವರಿ ತೆರವು ಮಾಡೋದಕ್ಕೆ ಕೋರ್ಟ್ ಸ್ಟೇ ಆರ್ಡರ್ ಅಡ್ಡ ಬರ್ತಿರೋದ್ರಿಂದ ಪಾಲಿಕೆ ಈಗ ಹೊಸ ಐಡಿಯಾ ಮಾಡಿಕೊಂಡಿದೆ.
  • ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸಿ ತೆರವು ಮಾಡಬೇಕಿದ್ದ ಸ್ಥಳಗಳಲ್ಲಿ ತಾತ್ಕಾಲಿಕ ಕ್ರಮವಾಗಿ ಬೈಪಾಸ್ ಡ್ರೈನ್ ನಿರ್ಮಿಸುತ್ತಿದೆ.
  • ಸ್ಟೇ ಇರೋ ಒತ್ತುವರಿಯನ್ನು ತೆರವು ಮಾಡದೇ ಬೈಪಾಸ್ ದಾರಿಯನ್ನು ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡ್ತಿದೆ.
ತಡವಾಗ್ತಿರೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ! ಬೈಪಾಸ್ ಮೊರೆಹೋದ ಬಿಬಿಎಂಪಿ   title=
BBMP

ಬೆಂಗಳೂರು: ಕಳೆದೊಂದು ವರ್ಷದ ಹಿಂದೆ ಕೇವಲ 1 ವಾರ ಸುರಿದಿದ್ದ ಧಾರಾಕಾರ ಮಳೆಗೆ ನಗರದ ಕೆಲ ಏರಿಯಾಗಳು ಅಕ್ಷರಷಃ ಕೆರೆಯಂತಾಗೋಗಿತ್ತು. ವಾಹನಗಳಲ್ಲಿ ಓಡಾಡ್ತಿದ್ದ ಜನರು ಸಿಲಿಕಾನ್ ಸಿಟಿಯ ರಸ್ತೆಗಳಲ್ಲೇ ಬೋಟ್‌ಗಳಲ್ಲಿ ಓಡಾಡುವಂತಾಗಿತ್ತು. ಇದಕ್ಕೆಲ್ಲಾ ಕಾರಣ ರಾಜಕಾಲುವೆ ಒತ್ತುವರಿ ಅಂತ ಪಾಲಿಕೆಗೂ ಗೊತ್ತಿತ್ತು. ಆದ್ರೆ, ತೆರವು ಮಾಡಬೇಕಿದ್ದ ಪಾಲಿಕೆ ಆರಂಭದಲ್ಲಿ ಮೀನಾಮೇಷ ಏಣಿಸಿತ್ತು. ಅಷ್ಟರಲ್ಲಾಗಲೇ ಒತ್ತುವರದಿದಾರರು ಕೋರ್ಟ್‌ನಿಂದ ಸ್ಟೇ ಆರ್ಡರ್ ತಂದಿದ್ರು. ಅದ್ರಿಂದಾಗಿ ಪಾಲಿಕೆ ತೆರವು ಮಾಡಬೇಕು ಎಂದುಕೊಂಡಿದ್ರೂ ಆ ಕೆಲಸ ಮಾಡಲಾಗ್ತಿಲ್ಲ. ಇದೀಗ ತೆರವು ಮಾಡೋದು ತಡವಾಗ್ತಿದೆ ಅಂತ ಪಾಲಿಕೆ ಹೊಸ ತಂತ್ರದ ಮೊರೆ ಹೋಗಿದೆ.

ನಗರದಲ್ಲಿರೋ 118 ಪ್ರದೇಶಗಳಲ್ಲಿ ಸಣ್ಣ ಮಳೆಯಾದ್ರೂ ರಸ್ತೆಗಳು ಕೆರೆಯಂತಾಗ್ತಿವೆ. ಅದಕ್ಕ ಒತ್ತುವರಿ ಮಾಡಿಕೊಂಡಿರೋದೇ ನೇರವಾದ ಕಾರಣ ಅಂತ ಖುದ್ದು ಬಿಬಿಎಂಪಿ ಹಾಗು ಕಂದಾಯ ಇಲಾಖೆ ನಡೆಸಿರೋ ಜಂಟಿ ಸರ್ವೇಯಲ್ಲಿ ತಿಳಿದುಬಂದಿದೆ. ಇಷ್ಟೆಲ್ಲಾ ಆದ್ರೂ ಒತ್ತುವರಿ ತೆರವು ಮಾಡೋದಕ್ಕೆ ಕೋರ್ಟ್ ಸ್ಟೇ ಆರ್ಡರ್ ಅಡ್ಡ ಬರ್ತಿರೋದ್ರಿಂದ ಪಾಲಿಕೆ ಈಗ ಹೊಸ ಐಡಿಯಾ ಮಾಡಿಕೊಂಡಿದೆ. ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸಿ ತೆರವು ಮಾಡಬೇಕಿದ್ದ ಸ್ಥಳಗಳಲ್ಲಿ ತಾತ್ಕಾಲಿಕ ಕ್ರಮವಾಗಿ ಬೈಪಾಸ್ ಡ್ರೈನ್ ನಿರ್ಮಿಸುತ್ತಿದೆ. ಸ್ಟೇ ಇರೋ ಒತ್ತುವರಿಯನ್ನು ತೆರವು ಮಾಡದೇ ಬೈಪಾಸ್ ದಾರಿಯನ್ನು ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡ್ತಿದೆ.

ಇದನ್ನೂ ಓದಿ: ಅವಿವಾಹಿತರಿಗೆ ಶೀಘ್ರವೇ ಪಿಂಚಣಿ: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಘೋಷಣೆ

ಕಳೆದ ವರ್ಷ ಸುರಿದಿದ್ದ ಧಾರಾಕಾರ ಮಳೆಗೆ ನಗರದ ಅನೇಕ ರೆಸಿಡೆನ್‌ಶಿಯಲ್ ಏರಿಯಾಗಳು, ಐಟಿ ಪಾರ್ಕ್‌ಗಳು ಹಾಗು ರಿಂಗ್‌ರೋಡ್‌ಗಳು ಕೆರೆಯಂತಾಗಿತ್ತು. ಇಂತಹ ದುಸ್ಥಿತಿಗೆ ಬೆಂಗಳೂರು ಬರಬಾರದಿತ್ತು ಅಂತ ಅನೇಕ ಟೆಕ್‌ ಐಕಾನ್‌ಗಳು ಟ್ವಿಟ್ಟರ್ ಮೂಲಕ ತಮ್ಮ ಬೇಸರ ಹೊರಹಾಕಿದ್ರು. ಅಷ್ಟೇ ಅಲ್ಲದೇ, ಐಟಿ ಕಂಪನಿಗಳು ಕೂಡ ಇತರೆ ರಾಜ್ಯಗಳಿಗೆ ಶಿಫ್ಟ್ ಆಗೋ ಮುನ್ಸೂಚನೆ ತೋರಿಸಿತ್ತು. ಇದ್ರಿಂದಾಗಿ ಬ್ರಾಂಡ್ ಬೆಂಗಳೂರಿಗೆ ತೀವ್ರ ಧಕ್ಕೆ ಕೂಡ ಉಂಟಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಹಲವು ಅಸ್ತ್ರ, ಬ್ರಹ್ಮಾಸ್ತ್ರಗಳ ಮೊರೆ ಹೋಗಿದ್ದ ಪಾಲಿಕೆ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಆದ್ರೆ ಅನೇಕಾನೇಕ ಪ್ರಯತ್ನಗಳ ನಂತರ ಸಣ್ಣ ಪ್ರಮಾಣದ ರಿಲೀಫ್ ಮಾತ್ರ ನೀಡಿತ್ತು.

ಈ ಬಾರಿ ಮಳೆ ಬಂದಾಗ ನಗರದ 118 ಕಡೆ ಫ್ಲಡ್ಡಿಂಗ್ ಆಗೋ ನಿರೀಕ್ಷೆಯಿದ್ದು, ಅವುಗಳ ಮೇಲೆ ಪಾಲಿಕೆ ಈಗಾಗಲೇ ತನ್ನ ಕೆಲಸ ಆರಂಭಿಸಿದೆ. ನಗರದ 40 ರಿಂದ 50 ಕಡೆ ಡ್ರೈನ್ ಡೈವರ್ಟ್ ಮಾಡಲಾಗಿದ್ದು, ಯಲಹಂಕ, ದಾಸರಹಳ್ಳಿ ಹಾಗು ಪೂರ್ವ ವಲಯದಲ್ಲಿ ಬೈಪಾಸ್ ನಿರ್ಮಿಸಲಾಗಿದೆ. ಅತಿ ಹೆಚ್ಚು ಸಮಸ್ಯೆ ಆಗ್ತಿರೋ 20ರಿಂದ 30 ಸ್ಥಳಗಳು ಮಹಾದೇವಪುರ ಏರಿಯಾ ಸುತ್ತಮುತ್ತಲೇ ಇದ್ದು, ಅಲ್ಲಿಯೂ ಕೂಡ ವ್ಯವಸ್ಥೆ ಕಲ್ಪಿಸಲಾಗ್ತಿದೆ. ಒಟ್ನಲ್ಲಿ, ಬೈಪಾಸ್ ಮಾಡಲಿಲ್ಲ ಅಂದ್ರೆ ಮತ್ತೆ ನಗರದ ರಸ್ತೆಗಳು ಕೆರೆಯಂತಾಗೋದು ಖಚಿತ.

ಇದನ್ನೂ ಓದಿ: ಇಂದಿನಿಂದ ಬಜೆಟ್ ಅಧಿವೇಶನ: ಜುಲೈ 7ಕ್ಕೆ 14ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News