ಕಾಂಗ್ರೆಸ್ ನಾಯಕರಲ್ಲಿನ ಅಸಮಾಧಾನ ಶಮನಗೊಳಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಲಿ- ಹೆಚ್.ಕೆ.ಪಾಟೀಲ್

ಲೋಕಸಭಾ ಚುನಾವಣೆಯಲ್ಲಿ ಕಳಪೆ ಕಾಂಗ್ರೆಸ್ ನೀಡಿರುವ ಕಳಪೆ ಪ್ರದರ್ಶನದಿಂದಾಗಿ ಈಗ ಪಕ್ಷದ ನಾಯಕರರಲ್ಲಿ ಅಸಮಧಾನದ ಹೊಗೆಯಾಡುತ್ತಿದೆ.ಈ ಹಿನ್ನಲೆಯಲ್ಲಿ ನಾಯಕರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಬೇಕೆಂದು ಪಕ್ಷದ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಮನವಿ ಮಾಡಿದ್ದಾರೆ.

Last Updated : Jun 5, 2019, 06:09 PM IST
ಕಾಂಗ್ರೆಸ್ ನಾಯಕರಲ್ಲಿನ ಅಸಮಾಧಾನ ಶಮನಗೊಳಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಲಿ- ಹೆಚ್.ಕೆ.ಪಾಟೀಲ್ title=
Photo courtesy: Facebook(file photo)

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಳಪೆ ಕಾಂಗ್ರೆಸ್ ನೀಡಿರುವ ಕಳಪೆ ಪ್ರದರ್ಶನದಿಂದಾಗಿ ಈಗ ಪಕ್ಷದ ನಾಯಕರರಲ್ಲಿ ಅಸಮಧಾನದ ಹೊಗೆಯಾಡುತ್ತಿದೆ.ಈ ಹಿನ್ನಲೆಯಲ್ಲಿ ನಾಯಕರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಬೇಕೆಂದು ಪಕ್ಷದ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೋಶನ್ ಬೇಗ್ ಹಾಗೂ ರಾಮಲಿಂಗಾರೆಡ್ಡಿ ಬಹಿರಂಗವಾಗಿ ಸಿಡಿದಿರುವ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದ ಎಚ್. ಕೆ. ಪಾಟೀಲ್ " ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ ಪಕ್ಷದ ನಾಯಕರ ನಡುವೆ ಚರ್ಚೆ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಕೇವಲ ಸಿದ್ದರಾಮಯ್ಯನವರಾಗಲಿ ಅಥವಾ ಒಬ್ಬ ನಾಯಕರನ್ನಾಗಲಿ ಲೋಕಸಭಾ ಚುನಾವಣೆಯಲ್ಲಿನ ಪ್ರದರ್ಶನಕ್ಕೆ ಕಾರಣಕರ್ತರನ್ನಾಗಿ ಮಾಡುವುದು ಸರಿಯಲ್ಲ. ಇದಕ್ಕೆ ಪ್ರತಿಯೊಬ್ಬರೂ ಕಾರಣಕರ್ತರಾಗಿದ್ದು ಆದ್ದರಿಂದ ಅದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದರು.

ಚುನಾವಣಾ ಸೋಲಿನ ನಂತರ ಸಣ್ಣ ಪುಟ್ಟ ಅಸಮಾಧಾನಗಳಿರುವುದು ಸಹಜ ಅವುಗಳನ್ನು ಮಾಧ್ಯಮಗಳ ಎದುರು ತೆಗೆದುಕೊಂಡು ಹೋಗುವುದರ ಮೂಲಕ ನಿವಾರಿಸಲು ಸಾಧ್ಯವಿಲ್ಲ.ಅವುಗಳನ್ನು ಮಾತುಕತೆ ಮೂಲಕವಷ್ಟೇ ಪರಿಹರಿಸಲು ಸಾಧ್ಯ ಎಂದು ಅವರು ಹೇಳಿದರು. ಇನ್ನು ಮುಂದುವರೆದು ಎಲ್ಲ ಹಿರಿಯ ನಾಯಕರು ಸಾಂಘಿಕವಾಗಿ ಪಕ್ಷವನ್ನು ಕಟ್ಟಲು ಶ್ರಮವಹಿಸಬೇಕೆಂದು ಎಂದು ಪಾಟೀಲ್ ಹೇಳಿದರು.  
 

Trending News