ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ದಿನೇ ದಿನೇ ಬಗೆದಷ್ಟು ಬಯಲಾಗ್ತಿದೆ. ಬಗೆದಷ್ಟು ಪರೀಕ್ಷಾ ಅಕ್ರಮಗಳು ಹೊರ ಬರುತ್ತಿವೆ. ಸಿಐಡಿಯಿಂದ ಮತ್ತೊಂದು ರೀತಿಯಿಂದ ಅಕ್ರಮ ಪರೀಕ್ಷೆ ಬರೆದ ಗ್ಯಾಂಗ್ ಪತ್ತೆ ಹಚ್ಚಲಾಗಿದೆ. ‘ಮುನ್ನಾಬಾಯಿ ಎಂಬಿಬಿಎಸ್’ ಸ್ಟೈಲ್‍ನಲ್ಲಿ ಅನೇಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸಿ ಬಳಸಿ ಉತ್ತರವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಗುರುವಾರ(ಏ.21) ಬಂಧನವಾಗಿದ್ದ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಗನ್‍ಮ್ಯಾನ್ ಹಯ್ಯಾಳಿ ದೇಸಾಯಿ ಕೂಡ ಮುನ್ನಾಬಾಯಿ ಎಂಬಿಬಿಎಸ್ ಸ್ಟ್ರೈಲ್‍ನಲ್ಲಿ ಹೊರಗಿನವರ ನೆರವು ಪಡೆದುಕೊಂಡು ಪರೀಕ್ಷೆ ಬರೆದಿದ್ದ. ಪರೀಕ್ಷಾ ಕೇಂದ್ರದ ಹೊರಗಿನವರ ನೆರವು ಪಡೆದು ಇದೇ ರೀತಿ ಅನೇಕರು ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: PSI Recruitment Scam : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅರೆಸ್ಟ್!
ಮತ್ತೋರ್ವ ಪ್ರಭಾವಿ ಮುಖಂಡನ ಕಿಂಗ್‌ಪಿನ್
545 ಪಿಎಸ್‍ಐ ಹುದ್ದೆ ನೇಮಕಾತಿ ಅಕ್ರಮದಲ್ಲಿಕಲಬುರಗಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಕಿಂಗ್‌ಪಿನ್ ಹೆಸರು ಕೇಳಿಬಂದಿದೆ. ಬಂಧಿತ ಹಯ್ಯಾಳಿ ದೇಸಾಯಿ ನೀಡಿರುವ ಮಾಹಿತಿ ಮೇರೆಗೆ ಆತನ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ. ಈಗಾಗಲೇ ಈ ಕಿಂಗ್‍ಪಿನ್ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೂರಾರು ಜನರಿಗೆ ನೌಕರಿ ಕೊಡಿಸಿದ್ದಾನೆಂದು ತಿಳಿದುಬಂದಿದೆ.
ಕಲಬುರಗಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಗೆ ಸ್ಪರ್ಧಿಸಲು ಕಿಂಗ್‌ಪಿನ್ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈತನ ಬಂಧನಕ್ಕಾಗಿ ಸಿಐಡಿ ಸಾಕಷ್ಟು ಮಾಹಿತಿ ಕಲೆಹಾಕುತ್ತಿದೆ.
ಇದನ್ನೂ ಓದಿ: ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ
ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಬಂದ ನಂತರ ವಿಚಾರಣೆ ನಡೆಸಿದ್ದೇವು. ಸಾಕ್ಷ್ಯಾಧಾರ ಸಿಕ್ಕ ತಕ್ಷಣ ಎಫ್‍ಐಆರ್ ದಾಖಲು ಮಾಡಿದ್ದೇವು. ಯಾರು ಅಕ್ರಮ ಎಸಗಿದ್ದಾರೆ ಎಂದು ಸಮಗ್ರ ತನಿಖೆ ನಡೆಸುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.