ಮೈಸೂರು: ಮಾಜಿ ಸಚಿವ ಎಸ್ ಎ ರಾಮದಾಸ್ ಜತೆಗಿನ ಪ್ರೇಯಸಿ ಎಂದು ಸುದ್ದಿ ಮಾಡಿದ್ದ ಪ್ರೇಮಕುಮಾರಿ ಭಾನುವಾರದಂದು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ (ಐಎನ್ಸಿಪಿ) ಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರ ಸೇವೆ ಮಾಡಬೇಕು ಎನ್ನುವ ಹಂಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಹೊರತು, ರಾಮದಾಸ್ ಅವರ ಮೇಲಿನ ಹಠದಿಂದಲ್ಲ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮೈಸೂರಿನಲ್ಲಿಯೇ ವಿಧಾನಸಭಾ ಚುನಾವಣೆಗೆ ನಿಲ್ಲವುದರು ಕುರಿತಾಗಿ ಸ್ಪಷ್ಟಪಡಿಸಿದ ಅವರು,ಇನ್ನು ಯಾವ ಕ್ಷೇತ್ರ ಎನ್ನುವುದನ್ನು ಅಂತಿಮಗೊಳಿಸಿಲ್ಲ. ರಾಮದಾಸ್ ಅವರ ವಿರುದ್ಧ ಸ್ಪರ್ಧಿಸಬೇಕು ಎಂಬುದಕ್ಕೆ ನಾನು ರಾಜಕಾರಣಕ್ಕೆ ಬಂದಿಲ್ಲ ಬದಲಾಗಿ ಜನರ ಸೇವೆ ಮಾಡಬೇಕು ಎನ್ನುವ ದೃಷ್ಟಿಯಿಂದ ಬಂದಿದ್ದೇನೆ ಎಂದರು.
ನನಗೆ ವಿದ್ಯಾರ್ಥಿಯಾದ್ದ ಕಾಲದಲ್ಲೇ ರಾಜಕೀಯದ ಬಗ್ಗೆ ಆಸಕ್ತಿ ಇದ್ದಿದ್ದರಿಂದ, ಈಗ ರಾಜಕೀಯದ ಮೂಲಕ ನಾನು ನೊಂದವರ ಪರವಾಗಿ ಧ್ವನಿ ಎತ್ತಬೇಕು ಎನ್ನುವ ಬಯಕೆಯಿಂದ ಸೇರ್ಪಡೆಯಾಗಿದ್ದೆನೆ ಎಂದು ತಿಳಿಸಿದರು.