ಧಾರವಾಡ: ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ ಆರೋಪ ಸದ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಮಾತನಾಡಿದರು. ಆಂದ್ರಪ್ರದೇಶದ ಚಂದ್ರಬಾಬು ನಾಯ್ಡು ಹೇಳಿಕೆ ದೇಶದಲ್ಲಿ ಸಂಚಲನ ಮೂಡಿಸಿದೆ. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದು ಒತ್ತಾಯ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರುಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಾದ ಘೋರ ಅನ್ಯಾಯ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು. ಸಿಇಒ ಅಮಾನತು, ಇನ್ನಾರೋ ಮೇಲೆ ಕೇಸ್ ಹಾಕಿದರೆ ಸಾಲದು. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದಿದ್ದಾರೆ.
ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ: ಸಿಎಂ ಸಿದ್ದರಾಮಯ್ಯ
ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಉಪಯೋಗಿಸಿದ್ದಾರೆ ಎಂದು ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಮೇಲೆ ಆರೋಪ ಮಾಡಲಾಗಿದೆ. ಇದು ಸಣ್ಣ ಆರೋಪವಲ್ಲ. ಬಹಳ ಗಂಭೀರವಾದ ಆರೋಪ ಎಂದು ಹೇಳಿದ್ದಾರೆ.
ಗುಜರಾತ್ ಪ್ರಯೋಗಾಲಯದ ವರದಿ ಸಹ ಬಹಿರಂಗಪಡಿಸಿದ್ದಾರೆ. ಇದು ನೂರಕ್ಕೆ ನೂರು ಜಗನ್ ಮೋಹನ್ ರೆಡ್ಡಿ ಅವಧಿಯ ಘೋರ ಅಪರಾಧ. ಅಕ್ಷಮ್ಯ ಅಪರಾಧ. ಇದನ್ನು ಹಿಂದೂ ಸಮುದಾಯ ಕ್ಷಮಿಸುವುದಿಲ್ಲ. ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧ ಜಗನ್ ರೆಡ್ಡಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಡೀ ಜಗತ್ತಿನ ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಇದು ಕ್ರಿಮಿನಲ್ ಅಪರಾಧ. ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಮಾಡುವ ಕೆಲಸ. ಪ್ರಸಾದದ ಪವಿತ್ರತೆಗೆ ಕಳಂಕ ತಂದ ಕೆಲಸ. ತಪ್ಪಿತಸ್ಥರ ಮೇಲೆ ಕೋರ್ಟ್ ಸೆಕ್ಷನ್ ಹಾಕಿದರೆ ಸಾಲದು, ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.
ಇದನ್ನೂ ಓದಿ: ದಸರಾ ವೇಳೆಯೆ ಕಾವೇರಿ ಆರತಿ ಪ್ರಾರಂಭಿಸಲು ಚಿಂತನೆ
ಇದೇ ಲಡ್ಡುವಿನಲ್ಲಿ ವಿಷ ಹಾಕಿದ್ರೆ? ಇದೇ ಲಡ್ಡುವಿನಲ್ಲಿ ಸ್ಲೋ ಪಾಯಿಸನ್ ಹಾಕಿದ್ರೆ? ಅದನ್ನೆಲ್ಲ ಹಾಕುವಂತಹ ನೀಚ ಬುದ್ಧಿ, ಪ್ರವೃತ್ತಿ ಇವತ್ತಿನ ರಾಜಕಾರಣಗಳಲ್ಲಿದೆ. ಜಗನ್ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅಲ್ಲಿನ ಬೆಟ್ಟಗಳನ್ನು ಕ್ರಿಶ್ಚಿಯನ್ರಿಗೆ ಕೊಟ್ಟಿದ್ದರು. ಹೀಗಾಗಿ ಅವರು ತಿಮ್ಮಪ್ಪನ ಶಾಪದಿಂದ ಸತ್ತರು. ಅವರ ಎಲುಬು ಸಹ ಸಿಗಲಿಲ್ಲ. ಆತ ಸುಟ್ಟು ಬೂದಿಯಾಗಿ ಹೋಗಿದ್ದ. ಎಲ್ಲಿ ಸತ್ತಿದ್ದಾರೆಂಬುದ ಸುಳಿವು ಸಿಗದಂತಹ ಸ್ಥಳದಲ್ಲಿ ಅಪಘಾತ ಆಗಿತ್ತು. ಅದೇ ಮಾದರಿಯಲ್ಲಿ ಜಗನ್ ಹೀನಾಯವಾಗಿ ಸೋತಿದ್ದಾರೆ. ಇದು ಹಿಂದು ಸಮಾಜ ಮತ್ತು ತಿರುಪತಿ ತಿಮ್ಮಪ್ಪನ ಶಾಪ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.