ಯಾವ ಕ್ಷೇತ್ರ ಸೂಚಿಸಿದರೂ ಸ್ಪರ್ಧಿಸುತ್ತೇನೆ: ಪ್ರಜ್ವಲ್ ರೇವಣ್ಣ

ಜೆಡಿಎಸ್ ವರಿಷ್ಠರ ತೀರ್ಮಾನದಿಂದ ನನಗೆ ಸಂತೋಷವಾಗಿದೆ-ಪ್ರಜ್ವಲ್ ರೇವಣ್ಣ

Last Updated : Aug 13, 2018, 11:00 AM IST
ಯಾವ ಕ್ಷೇತ್ರ ಸೂಚಿಸಿದರೂ ಸ್ಪರ್ಧಿಸುತ್ತೇನೆ: ಪ್ರಜ್ವಲ್ ರೇವಣ್ಣ title=

ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನು ಖಚಿತ ಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೇಳಿಕೆಯಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪುತ್ರ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ದೇವೇಗೌಡರು, ಕುಮಾರ ಸ್ವಾಮಿ ಮತ್ತು ಎಚ್.ಡಿ. ರೇವಣ್ಣ ನಿರ್ಧರಿಸುತ್ತಾರೆ.  ಅವರ ಆಜ್ಞೆಯನ್ನು ನಾನು ಪಾಲಿಸುತ್ತೇನೆ. ರಾಜ್ಯದಲ್ಲಿ ಯಾವ ಕ್ಷೇತ್ರ ಸೂಚಿಸಿದರೂ ನಾನು ಸ್ಪರ್ಧಿಸುತ್ತೇನೆ. ರಾಜ್ಯದ ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಹೆಚ್.ಡಿ. ದೇವೇಗೌಡ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿ, ರೇವಣ್ಣ ಪುತ್ರ ಪ್ರಜ್ವಲ್​ ಅವರನ್ನು ಚುನಾವಣೆಗೆ ನಿಲ್ಲಿಸಲು ನಾನು ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಹಾಸನದಲ್ಲಿಂದು ತಿಳಿಸಿದ್ದಾರೆ.
 

Trending News