ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರು ಸಚಿವರಾಗಬೇಕು ಮತ್ತು ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಬಹುತೇಕ ಅಂತಿಮಗೊಂಡಿದೆ. ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿಗೆ ತೆರಳಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವರ ಪ್ರಮಾಣವಚನಕ್ಕೆ ಸಮಯ ನಿಗದಿ ಮಾಡಲಿದ್ದಾರೆ.
ಕಾಂಗ್ರೆಸಿನ 12 ಶಾಸಕರು ಮತ್ತು ಜೆಡಿಎಸ್ ನ 8 ಶಾಸಕರು ಸೇರಿದಂತೆ ಒಟ್ಟು 20 ಮಂದಿ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಖಾತೆ ಹಂಚಿಕೆ ಕಸರತ್ತು ಮುಗಿಯದ ಹಿನ್ನೆಲೆಯಲ್ಲಿ ಕೆಲ ಮಂತ್ರಿ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ.
ಮೊದಲ ಹಂತದಲ್ಲಿ ಸಚಿವ ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ:
ಮೊದಲ ಹಂತದಲ್ಲಿ ಸಚಿವರಾಗಲಿರೋ ಕಾಂಗ್ರೆಸ್ ಶಾಸಕರು-
ಡಿ.ಕೆ ಶಿವಕುಮಾರ್
ಎಂ.ಬಿ ಪಾಟೀಲ್
ಕೃಷ್ಣಬೈರೇಗೌಡ
ರಾಮಲಿಂಗ ರೆಡ್ಡಿ
ಕೆ.ಜೆ ಜಾರ್ಜ್
ಎಂ.ಕೃಷ್ಣಪ್ಪ
ರೂಪ ಶಶಿಧರ್
ಶ್ಯಾಮನೂರು ಶಿವಶಂಕರಪ್ಪ
ಸತೀಶ್ ಜಾರಕಿಹೊ
ದಿನೇಶ್ ಗುಂಡೂರಾವ್
ಡಾ.ಸುಧಾಕರ
ಜಮೀರ್ ಅಹಮದ್
ಮೊದಲ ಹಂತದಲ್ಲಿ ಸಚಿವರಾಗಲಿರೋ ಜೆಡಿಎಸ್ ಶಾಸಕರು-
ಎಚ್.ಡಿ. ರೇವಣ್ಣ
ಸಾ.ರಾ. ಮಹೇಶ್
ನಾಗನಗೌಡ ಕಂಟಕೂರ್
ಬಂಡೇಪ್ಪ ಕಾಶಂಪುರ
ಜಿ. ಟಿ. ದೇವೇಗೌಡ
ಬಿ.ಎಂ ಫರೂಕ್
ಪುಟ್ಟರಾಜು