ಬೆಂಗಳೂರು: ನಿಗದಿತ ಅವಧಿಯಲ್ಲಿ ಹಳೇ ಪ್ರಕರಣಗಳಿಗೆ ಮುಕ್ತಿ ನೀಡುವ ಅಧಿಕಾರಿಗಳನ್ನು ಪುರಸ್ಕರಿಸಲು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ನಿರ್ಧರಿಸಿದ್ದಾರೆ. ಇನ್ನು ಹಳೇ ಪ್ರಕರಣಗಳ ವಿಲೇವಾರಿ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಐಜಿಪಿಗಳ ಜೊತೆ ಎಡಿಜಿಪಿ ಸಮಾಲೋಚನೆ ನಡೆಸಿದ್ದಾರೆ.
10 ವರ್ಷಗಳಿಂದ ರಾಜ್ಯದಲ್ಲಿ ಗಂಭೀರ ಸ್ವರೂಪ ಕೃತ್ಯಗಳು (ಕೊಲೆ, ದರೋಡೆ, ಸಲಿಗೆ, ಅವಳಿ ಕೊಲೆ ಸೇರಿ ಇತರೆ) ಹಾಗೂ ಗಂಭೀರವಲ್ಲದ (ಜಗಳ, ನಿಂದನೆ ಇತ್ಯಾದಿ) ಕೃತ್ಯಗಳ ಸಂಬಂಧ ಸಕಾಲಕ್ಕೆ ತನಿಖೆ ನಡೆಸದ ಪತ್ತೆಯಾಗದ ಪ್ರಕರಣಗಳೆಂದು ಹೇಳಿ 1.3 ಲಕ್ಷ ಪ್ರಕರಣಗಳು ಕಡತಗಳಲ್ಲೇ ಉಳಿದಿವೆ.
ಇದನ್ನೂ ಓದಿ-ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಪಕ್ಷ ನಿಗಾ: ಸಚಿವ ಎಂ ಬಿ ಪಾಟೀಲ
ಹೀಗಾಗಿ ಈ ಪ್ರಕರಣಗಳ ಬಗ್ಗೆ ಪ್ರತಿ ಠಾಣೆಯಿಂದ ಮಾಹಿತಿ ಪಡೆದು ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಡಿಜಿಪಿ ಉಮೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊಸದಾಗಿ ದಾಖಲಾಗುವ ಪ್ರಕರಣಗಳ ಜತೆ ಹಳೆ ಪ್ರಕರಣಗಳನ್ನು ಸಹ ಹಂತ ಹಂತವಾಗಿ ಮುಕ್ತಾಯಗೊಳಿಸಲಾಗುತ್ತದೆ. ಈಗ ಪ್ರತಿ ತಿಂಗಳು ಸರಾಸರಿ 2 ಸಾವಿರ ಪ್ರಕರಣಗಳತನಿಖೆ ನಡೆಯುತ್ತಿವೆ.
ಅಪರಾಧ ಪ್ರಕರಣಗಳ ತನಿಖೆ ಕುರಿತು ಆಗಾಗ್ಗೆ ಪರಿಶೀಲಿಸಿ ಸಭೆ ನಡೆಸಬೇಕು. ಈ ಕುರಿತು ಕೇಂದ್ರ ಕಚೇರಿಗೆ ಕೂಡಾ ನಿಯಮಿತವಾಗಿ ಮಾಹಿತಿ ನೀಡುವಂತೆ ಸಹ ನಿರ್ದೇಶಿಸಲಾಗಿದೆ. ಹಳೇ ಪ್ರಕರಣಗಳ ತನಿಖೆಗೆ ಯಾವುದೇ ಮಾರ್ಗಸೂಚಿ ನೀಡದೇ, ಕಾನೂನು ಪ್ರಕಾರ ಅಧಿಕಾರಿಗಳೇ ಸ್ವಯಂ ಚೌಕಟ್ಟು ರೂಪಿಸಿ ಕೊಂಡು ಹಳೇ ಪ್ರಕರಣಗಳಿಗೆ ಮುಕ್ತಿ ಕೊಡಲಾಗುತ್ತದೆ. ಆದರೆ ಆದಷ್ಟು ಬೇಗ ಪ್ರಕರಣಗಳು ಮುಕ್ತಾಯ ಕಾಣಬೇಕು. ಈ ಬಗ್ಗೆ ಉದಾಸೀನತೆ ತೋರಿದರೆ ಸಹಿಸುವುದಿಲ್ಲ ಎಂದು ಎಡಿಜಿಪಿ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ಹಳೇ ಪ್ರಕರಣಗಳ ವಿಲೇವಾರಿಯಲ್ಲಿ ರಾಮನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ, ಇನ್ನುಳಿದಂತೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸರು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-ಕೇರಳ ಗಡಿನಾಡ ಘಟಕದ ಕಸಾಪ ಅಧ್ಯಕ್ಷ ಎಸ್.ವಿ.ಭಟ್ ಹೃದಯಾಘಾತದಿಂದ ನಿಧನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.