Padmashri Award: ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ

ಬೆಳಗಾವಿ ಜಿಲ್ಲೆಯ ಕ್ರಾಂತಿಯ ನೆಲ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ   ಗ್ರಾಮದಲ್ಲಿ ಜನಿಸಿರುವ ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಎಂಬುವವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

Written by - Zee Kannada News Desk | Last Updated : Jan 27, 2022, 08:07 AM IST
  • ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಅವರು 1958ರಲ್ಲಿ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿದ್ದರು
  • 80-90ರ ದಶಕದಲ್ಲಿ ಬಾಳಪ್ಪ ಭಜಂತ್ರಿ ಅವರು ಸಂಗೀತ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತ ಬೆಂಗಳೂರಿಗೆ ತೆರಳಿ ಅಲ್ಲಿಂದ ತಮಿಳುನಾಡಿನ ಚೆನ್ನೈನಲ್ಲಿ ಸೆಟಲ್ ಆಗಿದ್ದರು
  • ಅವರು ಸನಾದಿ ಅಪ್ಪಣ್ಣ ಕನ್ನಡ ಚಲನ ಚಿತ್ರದಲ್ಲಿಯೂ ಸಂಗೀತ ನೀಡಿದ್ದಾರೆ
Padmashri Award: ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ title=
Padma shri awards 2022- Balappa sannabasappa Bhajantri

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜನಿಸಿ ಹೊರರಾಜ್ಯದಲ್ಲಿ ನೆಲೆಸಿ‌ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಬೆಳಗಾವಿಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ ಪ್ರಶಸ್ತಿ (Padmashri award) ಲಭಿಸಿದೆ. 

ಹೌದು, ಬೆಳಗಾವಿ ಜಿಲ್ಲೆಯ ಕ್ರಾಂತಿಯ ನೆಲ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ   ಗ್ರಾಮದಲ್ಲಿ ಜನಿಸಿರುವ ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ (Balappa sannabasappa Bhajantri) ಎಂಬುವವರಿಗೆ ಪದ್ಮಶ್ರೀ ಪ್ರಶಸ್ತಿ (Padmashri award) ಲಭಿಸಿದೆ. ಬಾಳಪ್ಪ ಅವರು ಸದ್ಯ ತಮಿಳುನಾಡಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. 

ಇದನ್ನೂ ಓದಿ- ಸಾಧಕನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಅವರು 1958ರಲ್ಲಿ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿದ್ದರು. 80-90ರ ದಶಕದಲ್ಲಿ ಬಾಳಪ್ಪ ಭಜಂತ್ರಿ  (Balappa sannabasappa Bhajantri) ಅವರು ಸಂಗೀತ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತ ಬೆಂಗಳೂರಿಗೆ ತೆರಳಿ ಅಲ್ಲಿಂದ ತಮಿಳುನಾಡಿನ ಚೆನ್ನೈನಲ್ಲಿ ಸೆಟಲ್ ಆಗಿದ್ದರು. 

ಇದನ್ನೂ ಓದಿ- Padma Awards 2022: ಜ.ಬಿಪಿನ್ ರಾವತ್, ಕಲ್ಯಾಣ್ ಸಿಂಗ್ ಗೆ ಮರಣೋತ್ತರ ಪದ್ಮ ವಿಭೂಷಣ, ಗುಲಾಮ್ ನಬಿ ಆಜಾದ್ ಗೆ ಪದ್ಮ ಭೂಷಣ

ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಅವರು ಸನಾದಿ ಅಪ್ಪಣ್ಣ (Sanadi Appanna) ಕನ್ನಡ ಚಲನ ಚಿತ್ರದಲ್ಲಿಯೂ ಸಂಗೀತ ನೀಡಿದ್ದಾರೆ. ಬಾಳಪ್ಪ ಭಜಂತ್ರಿ ಅವರು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನ ಎಂ.ಕೆ ಹುಬ್ಬಳ್ಳಿಗೆ ಬಂದು ಅವರ ಸಹೋದರರು ಹಾಗೂ ಕುಟುಂಬದವರ ಜೊತಗೆ ಹಬ್ಬ ಆಚರಿಸುತ್ತಾರೆ.‌ ಬಾಳಪ್ಪ ಅವರು, ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಹಿರೇಮಠ ಸಂಗೀತ ಗುರುಗಳ ಗರಡಿಯಲ್ಲಿ ಪಳಗಿ ಶಹನಾಯಿ ಸಂಗೀತದಲ್ಲಿ ಹೆಸರು ಮಾಡಿ ಬಳಿಕ ತಮಿಳುನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬಾಳಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವದು ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News