Online Gambling Ban : ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ!

ಆನ್‌ಲೈನ್  ಜೂಜು ನಿಷೇಧಿಸಿ  ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್  ರದ್ದುಪಡಿಸಿದೆ. 

Written by - Prashobh Devanahalli | Last Updated : Feb 15, 2022, 03:24 PM IST
  • ಆನ್‌ಲೈನ್ ಜೂಜು ನಿಷೇಧಿಸಿ ತರಲಾಗಿದ್ದ ತಿದ್ದುಪಡಿ ರದ್ದುಗೊಳಿಸಿದ ಹೈಕೋರ್ಟ್
  • ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಸಿದ್ಧತೆ
  • ಹೈ ಆದೇಶ ಪ್ರತಿಗೆ ಕಾಯುತ್ತಿದೆ ಸರ್ಕಾರ
Online Gambling Ban : ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ! title=
ಹೈ ಆದೇಶ ಪ್ರತಿಗೆ ಕಾಯುತ್ತಿದೆ ಸರ್ಕಾರ (file photo)

ಬೆಂಗಳೂರು: ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ ಕುರಿತು ಹೈ ಕೋರ್ಟ್ (Karnataka High Court) ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಆನ್‌ಲೈನ್  ಜೂಜು ನಿಷೇಧಿಸಿ (Online Gambling Ban) ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ (Karnataka high court) ರದ್ದುಪಡಿಸಿದೆ. ‘ಆನ್ ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯ್ದೆ ತರಲು ಈ ತೀರ್ಪು ಯಾವುದೇ ತಡೆ ಒಡ್ಡುವುದಿಲ್ಲ’ ಎಂದು ಕೋರ್ಟ್ ನಿನ್ನೆ ಹೇಳಿದೆ.

ಇದನ್ನೂ ಓದಿ : ಹಿಜಾಬ್ ಬೇಕಾ? ಕಿತಾಬ್ ಬೇಕಾ? ಕಾಂಗ್ರೆಸ್ ಹೇಳಲಿ : ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಪ್ರಶ್ನೆ

ಈ ಹಿನ್ನಲೆಯಲ್ಲಿ ಹೈಕೋರ್ಟ್ ಆನ್ ಲೈನ್ ಜೂಜಿಗೆ ಗ್ರೀನ್ ಸಿಗ್ನಲ್ ನೀಡಿದೆ. All India Gaming Federation ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಪೊಲೀಸ್ ತಿದ್ದುಪಡಿ ಕಾಯ್ದೆಯನ್ನ ರದ್ದುಪಡಿಸಿದೆ. ಆನ್ ಲೈನ್ ಗೇಮ್ ಸಂಸ್ಥೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು, ಹಾಗೂ ಅವರ ಚುಟುವಟಿಕೆ ಮೇಲೆ ಹಸ್ತಕ್ಷೇಪ ಮಾಡಬಾರದು ಎಂದು ನಿರ್ದೇಶನ ನೀಡಿದೆ. ಆನ್ ಲೈನ್ ಬೆಟ್ಟಿಂಗ್ (Online betting) ಸಂಬಂಧಿಸಿದಂತೆ ರೂಪಿಸುವ ನಿಯಮಗಳು ಸಂವಿಧಾನ ಬಾಹಿರ ಮತ್ತು ಕ್ರಮಬದ್ಧವಾಗಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. 

ಹೈ ಅದೇಶ ಪ್ರತಿಗೆ ಕಾಯುತ್ತಿದೆ ಸರ್ಕಾರ; ಸುಪ್ರೀಂ ನಲ್ಲಿ ಮೇಲ್ಮನವಿಗೆ ಸಿದ್ಧತೆ:
ಸದ್ಯ ಹೈ ಕೋರ್ಟ್ ತೀರ್ಪು ನೀಡಿದೆ. ಆದರೆ ಆದೇಶ ಪತ್ರ ಈವರೆಗೂ ಸರ್ಕಾರಕ್ಕೆ ಸಿಕ್ಕಿಲ್ಲ. ಆದೇಶ ಪತ್ರ ಅವಲೋಕಿಸಿ, ಸರ್ಕಾರ ಸುಪ್ರೀಂ ಕೋರ್ಟ್ ಗೆ (Supreme court) ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದೆ. 

ಇದನ್ನೂ ಓದಿ : Valentine's Day: ಪ್ರೇಮಿಗಳ ದಿನಾಚರಣೆಗೆ ಕತ್ತೆಗಳ ಮದುವೆ ಮಾಡಿಸಿದ ವಾಟಾಳ್!

ಇನ್ನು ನ್ಯಾಯಾಲಯದ ತೀರ್ಪಿನ ಪ್ರತಿ ನೋಡಿದ ನಂತರ‌ ಕ್ರಮ ಕೈಗೊಳ್ಳುವಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಅನೇಕ ಕುಟುಂಬಗಳು ಆನ್ ಲೈನ್ ಗ್ಯಾಬ್ಲಿಂಗ್ ನಿಂದ ಬೀದಿಗೆ ಬಿದ್ದಿವೆ. ಜನಸಾಮಾನ್ಯರ ರಕ್ಷಣೆಗೆ ಆನ್ ಲೈನ್ ಗೇಮ್ ನಿಷೇಧ ಮಾಡಲಾಗಿತ್ತು. ಹಣ ಇಟ್ಟು ಆಡುವ ಗೇಮ್ ನಿಷೇಧ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಲಯಕ್ಕೆ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News