ಸಾಹಿತಿಗಳ ಮಾಹಿತಿ ಕೋಶಕ್ಕೆ ಸೇರ್ಪಡೆ, ತಿದ್ದುಪಡಿಗೆ ಅವಕಾಶ

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶಕ್ಕೆ ಮಾಹಿತಿಯ ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

Last Updated : Dec 9, 2022, 06:46 AM IST
  • ಅಕಾಡೆಮಿಯ ಅಂತರ್ಜಾಲ www.sahithyaacademy.karnataka.gov.in ದಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿರುತ್ತದೆ.
  • ಸಾಹಿತಿ ಮಾಹಿತಿ ಕೋಶಕ್ಕೆ ಮಾಹಿತಿಯ ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಸಾಹಿತಿಗಳ ಮಾಹಿತಿ ಕೋಶಕ್ಕೆ ಸೇರ್ಪಡೆ, ತಿದ್ದುಪಡಿಗೆ ಅವಕಾಶ title=

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶಕ್ಕೆ ಮಾಹಿತಿಯ ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶದಲ್ಲಿ 7200ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಇದ್ದು, ಈ ಮಾಹಿತಿಯು ಆಧುನಿಕ ತಂತ್ರಜ್ಞಾನದ ಮೂಲಕ ಸರ್ವರನ್ನು ತಲುಪಿಸಬೇಕೆಂಬ ಸದಾಶಯದಿಂದ ಸಾಹಿತ್ಯಾಸಕ್ತರ ಸದ್ಬಳಕೆಗಾಗಿ 2022ರ ಅಕ್ಟೋಬರ್ 14 ರಂದು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿ, ಅಕಾಡೆಮಿಯ ಅಂತರ್ಜಾಲ www.sahithyaacademy.karnataka.gov.in ದಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿರುತ್ತದೆ.

ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್‌ ದಾಖಲೆ ಮುರಿದ ಬಿಜೆಪಿ!

ಈ ಸಾಹಿತಿ ಮಾಹಿತಿ ಕೋಶವು ಪ್ರತಿ ವರ್ಷ ಆಯಾಯ ಕಾಲಘಟ್ಟದಲ್ಲಿ ಪರಿಷ್ಕರಣೆಗೊಳ್ಳುತ್ತಾ ಬೆಳೆಯಬೇಕೆಂಬ ಅಪೇಕ್ಷೆಯಿಂದ ಈ ಮಾಹಿತಿ ಕೋಶದಲ್ಲಿ ಯಾವುದಾದರೂ ತಿದ್ದಪಡಿಗಳಿದ್ದಲ್ಲಿ, ಹೊಸದಾಗಿ ಸೇರಿಸಬೇಕಾಗಿರುವ ಸಾಹಿತಿಗಳ ಹೆಸರುಗಳಿದ್ದಲ್ಲಿ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಟ್ಟಲ್ಲಿ ಅದನ್ನು ಸಂಪಾದಕ ಮಂಡಳಿಯ ಮುಂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News