Mysuru Dasara: ಸುದೀಪ್-ಶಿವಣ್ಣ ಗೈರು, ಉದ್ಘಾಟನೆ ಬೆನ್ನಲ್ಲೇ ಮಂಕಾದ ಮೈಸೂರು ದಸರಾ!

ದಸರಾ ಚಲನಚಿತ್ರೋತ್ಸವ ಉದ್ಘಾಟನೆಗೆ ನಟ ಶಿವಣ್ಣ ಗೈರಾದರೆ, ಯುವ ದಸರಾ ಉದ್ಘಾಟಿಸಬೇಕಿದ್ದ ನಟ ಕಿಚ್ಚ ಸುದೀಪ್ ಸಹ ಕಾರ್ಯಕ್ರಮಕ್ಕೆ ಆಗಮಿಸಿಲ್ಲ.

Written by - Zee Kannada News Desk | Last Updated : Sep 26, 2022, 03:43 PM IST
  • ಅದ್ವಾನ-ಅವ್ಯವಸ್ಥೆಗಳ ಬೀಡಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ
  • ಉದ್ಘಾಟನೆ ಬೆನ್ನಲ್ಲೇ ಮಂಕಾದ ಮೈಸೂರು ದಸರಾ, ರಾಷ್ಟ್ರಪತಿ ಜೊತೆ ಕಣ್ಮರೆಯಾದ ಮಂತ್ರಿ-ಮಹೋದಯರು
  • ಯುವ ದಸರಾ ಉದ್ಘಾಟಿಸಬೇಕಿದ್ದ ಕಿಚ್ಚ ಸುದೀಪ್ & ಚಲನಚಿತ್ರೋತ್ಸವ ಉದ್ಘಾಟನೆಗೆ ನಟ ಶಿವಣ್ಣ ಗೈರು
Mysuru Dasara: ಸುದೀಪ್-ಶಿವಣ್ಣ ಗೈರು, ಉದ್ಘಾಟನೆ ಬೆನ್ನಲ್ಲೇ ಮಂಕಾದ ಮೈಸೂರು ದಸರಾ! title=
ಯುವ ದಸರಾ ದಿಢೀರ್ ಮುಂದೂಡಿಕೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸೋಮವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಉದ್ಘಾಟನೆ ಬೆನ್ನಲ್ಲೇ ಮೈಸೂರು ದಸರಾ ಮಂಕಾಗಿ ಹೋಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣ ಸರಳವಾಗಿ ದಸರಾ ಹಬ್ಬ ನಡೆದಿತ್ತು. ಈ ವರ್ಷ ಎಂದಿನಂತೆ ಅದ್ದೂರಿ ದಸರಾ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಈ ಬಾರಿ ದಸರಾ ಕಳೆಗುಂದಿದಂತಾಗಿದೆ.

ನಾಡಹಬ್ಬ ದಸರೆಯಲ್ಲಿ ಏನೇನೂ ಇಲ್ಲದಂಗಾಗಿದೆ. ಅದ್ದೂರಿಯಾಗಿ ನಡೆಯಬೇಕಿದ್ದ ದಸರಾ ಮಹೋತ್ಸವ ಅದ್ವಾನ-ಅವ್ಯವಸ್ಥೆಗಳ ಬೀಡಾಗಿದೆ. ಉದ್ಘಾಟನೆ ಬೆನ್ನಲ್ಲೇ ಮೈಸೂರು ದಸರಾ ಮಂಕಾಗಿಹೋಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಮಂತ್ರಿ, ಮಹೋದಯರು ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ: Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು

ಯುವ ದಸರಾ ಕೂಡ ದಿಢೀರ್ ಮುಂದೂಡಿಕೆಯಾಗಿದೆ. ಕಾರ್ಯಕ್ರಮಕ್ಕೆ ಚಿತ್ರ ನಟರನ್ನು ಕರೆತರುವಲ್ಲಿ ದಸರಾ ಆಯೋಜಕರು ವಿಫಲರಾಗಿದ್ದಾರೆ. ಗಣ್ಯರ ಗೈರು ಹಿನ್ನೆಲೆ ಯುವ ದಸರಾ 1 ದಿನ ಮುಂದೂಡಿಕೆಯಾಗಿದೆ. ನಟ ಕಿಚ್ಚ ಸುದೀಪ್ ಬಳಿಕ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಗೈರಾಗಿದ್ದಾರೆ.

ದಸರಾ ಚಲನಚಿತ್ರೋತ್ಸವ ಉದ್ಘಾಟನೆಗೆ ನಟ ಶಿವಣ್ಣ ಗೈರಾದರೆ, ಯುವ ದಸರಾ ಉದ್ಘಾಟಿಸಬೇಕಿದ್ದ ನಟ ಕಿಚ್ಚ ಸುದೀಪ್ ಸಹ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಗಣ್ಯಾತಿಗಣ್ಯರ ಗೈರು ಹಾಜರಿ ನಡುವೆಯೇ ಹಲವು ಕಾರ್ಯಕ್ರಮಗಳು ಮೊಟಕುಗೊಂಡಿವೆ.

ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ KSRTC

ಇದರ ಜೊತೆಗೆ ಹೆಲಿಕಾಪ್ಟರ್ ರೈಡ್, ಏರ್ ಶೋ, ಜಲಕ್ರೀಡೆ, ಪುಸ್ತಕ ಮೇಳ ಮತ್ತು ಚಿತ್ರ ಸಂತೆ ಸೇರಿ ಹಲವು ಕಾರ್ಯಕ್ರಮಗಳನ್ನ ರಾಜ್ಯ ಸರ್ಕಾರ ಕೈಬಿಟ್ಟಿದೆ. ಇದರಿಂದ ಅರಮನೆ ನಗರಿ ಮೈಸೂರು ಬಣಗುಡುತ್ತಿದೆ. ಮೈಸೂರು ದಸರಾಗೆ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ. ಪರಿಣಾಮ ಹೋಟೆಲ್ ಉದ್ಯಮ ಸೇರಿ ಪ್ರವಾಸೋದ್ಯಮಕ್ಕೂ ಮಂಕು ಕವಿದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News