Mysore : ಬಹುನಿರೀಕ್ಷಿತ ನವೀಕೃತ ಅಶೋಕಪುರಂ ರೈಲು ನಿಲ್ದಾಣ ಮಾರ್ಚ್ 4ರಂದು ಉದ್ಘಾಟನೆ

Mysore : ಬಹುನಿರೀಕ್ಷಿತ ಮೈಸೂರು ನಗರದ ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣ ನಾಳೆ (ಮಾರ್ಚ್ 4) ಸೋಮವಾರದಂದು ಉದ್ಘಾಟನೆಗೊಳ್ಳಲಿದೆ.

Written by - Zee Kannada News Desk | Last Updated : Mar 3, 2024, 06:02 PM IST
  • ಬಹುನಿರೀಕ್ಷಿತ ಮೈಸೂರು ನಗರದ ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣ ನಾಳೆ (ಮಾರ್ಚ್ 4) ಸೋಮವಾರದಂದು ಉದ್ಘಾಟನೆಗೊಳ್ಳಲಿದೆ.
  • ಅಶೋಕಪುರಂ ರೈಲ್ವೆ ನಿಲ್ದಾಣವನ್ನು 232.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
  • ರೈಲುಗಾಡಿ ಸ್ವಚ್ಛಗೊಳಿಸುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅನುಕೂಲವಾಗಲಿದೆ.
Mysore : ಬಹುನಿರೀಕ್ಷಿತ ನವೀಕೃತ ಅಶೋಕಪುರಂ ರೈಲು ನಿಲ್ದಾಣ ಮಾರ್ಚ್ 4ರಂದು ಉದ್ಘಾಟನೆ title=

Ashokapuram Railway Station : ಬಹುನಿರೀಕ್ಷಿತ ಮೈಸೂರು ನಗರದ ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣದ ನಾಳೆ ಮಾರ್ಚ್ 4 ಸೋಮವಾರ ಸಂಸದ ಪ್ರತಾಪ್‌ ಸಿಂಹ ಉದ್ಘಾಟಿಸಲಿದ್ದಾರೆ.

ಬಹು ನಿರೀಕ್ಷಿತ ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳು, ಹೊಸ ಎರಡನೇ ಪ್ರವೇಶ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಯೋಜಿತ ಹೆಚ್ಚಳಕ್ಕೆ ಅನುಗುಣವಾಗಿ ವಿಸ್ತೃತ ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಘಟಕಗಳನ್ನು ಸಂಸದ ಪ್ರತಾಪ್‌ ಸಿಂಹ ನಾಳೆ ಮಾರ್ಚ್ 4 ಸೋಮವಾರ ಉದ್ಘಾಟಿಸಲಿದ್ದಾರೆ.

ಇದನ್ನು ಓದಿ : Daily GK Quiz: ಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು..?

ಅಶೋಕಪುರಂ ರೈಲ್ವೆ ನಿಲ್ದಾಣವನ್ನು 232.5  ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅಶೋಕಪುರಂ ರೈಲ್ವೆ ನಿಲ್ದಾಣ ನವೀಕರಣ ಮೈಸೂರು-ಬೆಂಗಳೂರು ಮತ್ತು ಮೈಸೂರು-ಹಾಸನದಂತಹ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಮರುಹಂಚಿಕೆ ಮಾಡುವುದರ ಜೊತೆಗೆ ಮುಖ್ಯ ಮೈಸೂರು ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಗಳನ್ನು ಪರಿಚಯಿಸಲು ಅಧಿಕಾರಿಗಳಿಗೆ ನೆರವಾಗಲಿದೆ.

ರೈಲುಗಾಡಿ ಸ್ವಚ್ಛಗೊಳಿಸುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅನುಕೂಲವಾಗಲಿದೆ. ನಿಲ್ದಾಣಕ್ಕೆ 2ನೇ ಪ್ರವೇಶದ್ವಾರ ನಿರ್ಮಿಸಲಾಗಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ. ರೈಲಿನ ಕೋಚ್‌ಗಳಿಗೆ ನೀರು ತುಂಬುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಾಹನ ನಿಲುಗಡೆಗೆ ಹೊಸದಾಗಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 

'ಅಶೋಕಪುರಂ ರೈಲ್ವೆ ನಿಲ್ದಾಣವು ಮೈಸೂರು ನಗರ ರೈಲು ನಿಲ್ದಾಣದಿಂದ ಕೇವಲ 5.2 ಕಿಮೀ ದೂರದಲ್ಲಿದೆ. ಇದೀಗ ಈ ನಿಲ್ದಾಣವನ್ನು ಮೈಸೂರಿನ ಎರಡನೇ ದೊಡ್ಡ ನಿಲ್ದಾಣವಾಗಿ ಪರಿವರ್ತಿಸಲಾಗಿದೆ.   ಕೇವಲ ಮೂರು ಪ್ಲಾಟ್‌ಫಾರಂ ಹೊಂದಿದ್ದ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಈಗ 5 ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದ್ದು, ಮೈಸೂರಿಗೆ ಬರುವ ರೈಲುಗಾಡಿಗಳನ್ನು ಚಾಮರಾಜನಗರ ಕಡೆಗೆ ವಿಸ್ತರಿಸಬಹುದಾಗಿದೆ. ಸ್ಟೇಬ್ಲಿಂಗ್‌ ಲೈನ್‌ ನಿರ್ಮಿಸಲಾಗಿದ್ದು , ಇದರಿಂದ ರೈಲು ಗಾಡಿಗಳನ್ನು ಈ ಜಾಗದಲ್ಲಿ ನಿಲುಗಡೆ ಮಾಡಲು ಅವಕಾಶವಾಗುತ್ತದೆ. 

ಇದನ್ನು ಓದಿ : ಸರ್ಕಾರದ ಒತ್ತಡಕ್ಕೆ ಮಣಿದ Google, Playstore ಮರಳಿದ ಭಾರತದ ಜನಪ್ರಿಯ ಆಪ್ ಗಳು!

ಸದ್ಯ ಐದು ಚಾಲನೆಯಲ್ಲಿರುವ ಹಳಿ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್‌ ಲೈನ್‌ಗಳನ್ನು ಒಳಗೊಂಡಿದೆ. ಪ್ರಯಾಣಿಕರು ಪ್ಲಾಟ್‌ಫಾರಂಗೆ ತೆರಳಲು ಫುಟ್‌ ಓವರ್‌ ಬ್ರಿಡ್ಜ್‌ ಅನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಇನ್ನು ಮುಂದೆ ಬಳಕೆ ಮಾಡಬಹುದಾಗಿದೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News