P Sainath : ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ : ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಪಿ. ಸಾಯಿನಾಥ್

ಈ ಬಗ್ಗೆ ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್ ಅವರು ಮಾಹಿತಿ ನೀಡಿದ್ದಾರೆ. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ 2017ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Written by - Channabasava A Kashinakunti | Last Updated : Sep 2, 2022, 07:51 PM IST
  • ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್
  • ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ವಾಪಸ್
  • ಈ ಬಗ್ಗೆ ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್ ಮಾಹಿತಿ
P Sainath : ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ : ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಪಿ. ಸಾಯಿನಾಥ್ title=

ಬೆಂಗಳೂರು : ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್ ಅವರು ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ವಾಪಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್ ಅವರು ಮಾಹಿತಿ ನೀಡಿದ್ದಾರೆ. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ 2017ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ : Murugha Mutt : ಮುರುಘಾ ಶ್ರೀ ಪೊಲೀಸ್ ಕಸ್ಟಡಿಗೆ : ಆತ್ಮಹತ್ಯೆಗೆ ಯತ್ನಿಸಿದ ಶಿಷ್ಯ

ಚಿತ್ರದುರ್ಗದ ಮುರುಘಾಮಠದಿಂದ‌ ಕೊಡಮಾಡುವ ಈ ಪ್ರಶಸ್ತಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಪಿ. ಸಾಯಿನಾಥ್ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿತ್ತು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಾಯಿನಾಥ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿತ್ತು.

ಬಸವಶ್ರೀ ಪ್ರಶಸ್ತಿಯು 5 ಲಕ್ಷ  ರೂ. ನಗದು, ಪ್ರಮಾಣಪತ್ರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. ಅಕ್ಟೋಬರ್ 23 ರಂದು ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಈ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿರುವ ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್, ಚಿತ್ರದುರ್ಗದ ಶ್ರೀ ಮುರುಘಾಮಠದ ಮಠಾಧೀಶರಾದ ಶ್ರೀ ಶಿವಮೂರ್ತಿ ಮುರುಘಾ ಶರಣರ ಬಗ್ಗೆ ಮಾಧ್ಯಮ ವರದಿಗಳಿಂದ ಕೇಳಿ ಬರುತ್ತಿರುವ ಆರೋಪಗಳಿಂದ ನಾನು ತುಂಬಾ ವಿಚಲಿತನಾಗಿದ್ದಾನೆ. ಅವರು ಈಗ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ನನಗೆ ಬಲವಾಗಿ ಬರುತ್ತಿಲ್ಲ.

2017ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಅದರೊಂದಿಗೆ ಬಂದಿರುವ 5 ಲಕ್ಷ ರೂ. ಬಹುಮಾನದ ಹಣವನ್ನು ಚೆಕ್ ಮೂಲಕ ವಾಪಾಸ್ ಮಾಡುತ್ತಿದ್ದೇನೆ. ಈ ಪ್ರಕರಣದ ನ್ಯಾಯಕ್ಕಾಗಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ.

ಇದನ್ನೂ ಓದಿ : ನ್ಯಾಯಾಲಯಕ್ಕೆ ಹಾಜರಾದ ಮುರುಘಾ ಶ್ರೀ : 4 ದಿನ ಖಾಕಿ ಕಸ್ಟಡಿಗೆ

ಈ ಪ್ರಕರಣವನ್ನು ಬೆಳಕಿಗೆ ತರಲು ಮೈಸೂರು ಮೂಲದ ಎನ್‌ಜಿಒ "ಒಡನಾಡಿ" ಸಂಸ್ಥೆಯ ಪ್ರಯತ್ನಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳ ಹೋರಾಟದ ಬಗ್ಗೆ ನನ್ನ ಮೆಚ್ಚುಗೆಯನ್ನು ದಾಖಲಿಸಲು ಬಯಸುತ್ತೇನೆ. ಪ್ರಕರಣದ ಬಗ್ಗೆ ತನಿಖೆಯನ್ನು ತೀವ್ರವಾಗಿ ಮುಂದುವರಿಸಲು ಮತ್ತು ಯಾವುದಕ್ಕು ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಇಂತಿ ನಿಮ್ಮ ಪತ್ರಕರ್ತ ಪಿ. ಸಾಯಿನಾಥ್ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News