ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಿ.ಕೆ. ಸುರೇಶ್

ಕುಣಿಗಲ್-ಬೆವುರು-ಚನ್ನಪಟ್ಟಣ ರಾಜ್ಯ ಹೆದ್ದಾರಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಸಂಸದ ಡಿ.ಕೆ. ಸುರೇಶ್ ಚರ್ಚೆ.

Last Updated : Nov 29, 2019, 11:17 AM IST
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಿ.ಕೆ. ಸುರೇಶ್ title=
Photo courtesy: ANI

ನವದೆಹಲಿ: ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಅವರನ್ನು ಗುರುವಾರ ಭೇಟಿಯಾಗಿ ತಿಟ್ಟಮಾರನ ಹಳ್ಳಿ ಬಳಿಯ ಕುಣಿಗಲ್-ಬೆವುರು-ಚನ್ನಪಟ್ಟಣ ರಾಜ್ಯ ಹೆದ್ದಾರಿಗೆ ನಿರ್ಗಮನ ನೀಡುವಂತೆ ಮನವಿ ಮಾಡಿದರು.

"ರಾಷ್ಟ್ರೀಯ ಹೆದ್ದಾರಿ 275 ಬೈಪಾಸ್‌ಗೆ ಕುಣಿಗಲ್-ಬೆವುರು-ಚನ್ನಪಟ್ಟಣ ರಾಜ್ಯ ಹೆದ್ದಾರಿಗೆ ನಿರ್ಗಮನವಿಲ್ಲ. ಈ ಕಾರಣದಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಚಲಿಸುವ ಜನರು ಮತ್ತು ಚನ್ನಪಟ್ಟಣದ ಸುತ್ತಮುತ್ತಲಿನ ಜನರು ರಾಷ್ಟ್ರೀಯ ಹೆದ್ದಾರಿ 275 ಅನ್ನು ಪ್ರವೇಶಿಸಲು 10 ಕಿ.ಮೀ. ಬೈಪಾಸ್ ಮೂಲಕವೇ ಓಡಾಡ ಬೇಕಿದೆ" ಎಂದು ಡಿ.ಕೆ. ಸುರೇಶ್(DK Suresh) ಅವರು ಗಡ್ಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಕುಣಿಗಲ್-ಬೆವುರು-ಚನ್ನಪಟ್ಟಣ ರಾಜ್ಯ ಹೆದ್ದಾರಿಗೆ ನಿರ್ಗಮನ ಇಲ್ಲದಿರುವುದರಿಂದ ಜನರ ಚಲನವಲನಕ್ಕಾಗಿ ಸಾಕಷ್ಟು ತೊಂದರೆಯುಂಟಾಗಿದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ ಸಂಸದ ಡಿ.ಕೆ. ಸುರೇಶ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಿಟ್ಟಮರನ ಹಲ್ಲಿ ಬಳಿಯ ರಾಜ್ಯ ಹೆದ್ದಾರಿಯನ್ನು ಮುಕ್ತಗೊಳಿಸುವಂತೆ" ಗಡ್ಕರಿ ವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರವು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)  ಈಗಾಗಲೇ ಇದೇ ರೀತಿಯ ಮನವಿ ಮಾಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 

(With ANI Inputs)

Trending News