ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ

Basavaraj Bommai: ಸಿಎಂ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸ್ತಿಲ್ಲ. ಬರೀ ರಾಜಕಾರಣ, ಅಧಿಕಾರ ಹಿಡಿಯುವಂತಹ ವ್ಯಾಮೋಹದಲ್ಲಿದ್ದಾರೆ ಎಂದರು.  

Written by - Prashobh Devanahalli | Last Updated : Sep 9, 2024, 06:24 PM IST
    • ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಏನಿದೆ ಅನ್ನುವುದು ಇದರಿಂದ ಗೊತ್ತಾಗತ್ತದೆ
    • ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
    • ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ title=
File Photo

ಗದಗ: (ಶಿರಹಟ್ಟಿ) ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:  ಶೂಟಿಂಗ್‌ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ವೈರಲ್!‌

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಸ್ಥಿತಿ ನೋಡಿದರೆ ನನಗೆ ಕೆಟ್ಟ ಅನಿಸತ್ತದೆ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ ಎಲ್ಲರೂ ಸಿಎಂ ಟಾವೆಲ್ ಹಾಕುವುದು, ನಾನು ಸಿಎಂ, ನಾನು ಸಿಎಂ  ಅಂತಾ ಪೈಪೋಟಿ ಮಾಡುತ್ತಿದ್ದಾರೆ. ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಏನಿದೆ ಅನ್ನುವುದು ಇದರಿಂದ ಗೊತ್ತಾಗತ್ತದೆ  ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸ್ತಿಲ್ಲ. ಬರೀ ರಾಜಕಾರಣ, ಅಧಿಕಾರ ಹಿಡಿಯುವಂತಹ ವ್ಯಾಮೋಹದಲ್ಲಿದ್ದಾರೆ ಎಂದರು.

ಇದನ್ನೂ ಓದಿ: Moon Viral Video: ಇಷ್ಟೊಂದು ಹತ್ತಿರದಿಂದ ಚಂದ್ರನನ್ನು ಎಂದಾದರೂ ನೋಡಿದ್ದೀರಾ? ಮಿಸ್‌ ಮಾಡದೆ ಈ ಅದ್ಭುತ ಕ್ಷಣವನ್ನೊಮ್ಮೆ ನೋಡಿ ಆನಂದಿಸಿ

ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಇದೆ, ಹುದ್ದೆಗಳ ಭರ್ತಿ ಸರಿಯಾಗ್ತಾ ಇಲ್ಲ. ಪರೀಕ್ಷೆಗಳು ಸರಿ ಆಗುತ್ತಿಲ್ಲ, ಅಂಗನವಾಡಿಯವರಿಗೆ ಸಂಬಳ ಸಿಕ್ಕಿಲ್ಲ. ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಸರಿಯಾಗಿ ಸಿಗುತ್ತಿಲ್ಲ. ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದ್ಯಾವುದಕ್ಕೂ ಸರ್ಕಾರದ ಮಂತ್ರಿಗಳು ಲಕ್ಷ್ಯ ಕೊಡುತ್ತಿಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ ಬಡಿದಾಟ ಇದೆ ಎಂದು ಹೇಳಿದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News