ಮಂಡ್ಯ : ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮರದ ಮೇಲೆ ವಾಸವಾಗಿದ್ದ ನೂರಾರು ಗಿಳಿಗಳು ಮೃತಪಟ್ಟಿರುವ ಧಾರುಣ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗವಿದ್ದ ಮರದಲ್ಲಿ ನೂರಾರು ಗಿಳಿಗಳು ವಾಸವಾಗಿದ್ದು, ನಿನ್ನೆ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಈ ವೇಳೆ ಮರದ ಬುಡ ಸಹಿತ ಕೆಳಗೆ ಬಿದ್ದು ಹಲವು ಗಿಳಿಗಳು ಮತ್ತು ಮರಿಗಳು ಮೃತಪಟ್ಟರೆ, ಉಳಿದವು ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಮೃತಪಟ್ಟಿವೆ. ನೂರಾರು ಗಿಳಿಗಳ ಸಾವು ಕಂಡು ಪಟ್ಟಣದ ಜನರು ಕಣ್ಣೀರಾಕಿ ಮರುಕ ವ್ಯಕ್ತಪಡಿಸಿದ್ದು, ಮೃತ ಗಿಳಿಗಳನ್ನು ಸಾಮೂಹಿಕವಾಗಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ : Siddaramaiah : ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮ : ಸಿಟಿ ರವಿ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು
ಮಳೆಯಿಂದ ಹಾನಿ ಪ್ರದೇಶಕ್ಕೆ ಡಾ.ಕೆಸಿ ನಾರಾಯಣ್ ಗೌಡ ಭೇಟಿ
ಮಳೆಯಿಂದ ಹಾನಿ ಪ್ರದೇಶಕ್ಕೆ ರೇಷ್ಮೆ ಹಾಗೂ ಕ್ರೀಡೆ ಮತ್ತು ಯುವಸಬಲೀಕರಣ ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ ಭೇಟಿ ನೀಡಿದ್ದಾರೆ.
ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಕೆಆರ್ ಪೇಟೆ ತಾಲೂಕಿನ ವಿಠಲಪುರ, ಗಂಜಿಗೆರೆ ಗ್ರಾ.ಪಂ.ವ್ಯಾಪ್ತಿಯ ಪುವನಹಳ್ಳಿ, ನಾಟನಹಳ್ಳಿ ಗ್ರಾಮಗಳಲ್ಲಿ ಹಾನಿಯಾಗಿವೆ. ಮಳೆಯಿಂದ 30ಕ್ಕೂ ಮನೆಗಳು 20ಕ್ಕೂ ಹೆಚ್ಚು ರೈತರ ತೆಂಗು, ಅಡಿಕೆ, ಬಾಳೆ, ಕಬ್ಬು ಸೇರಿದಂತೆ ವಿವಿಧ ಬೆಳೆ ಹಾನಿಯಾಗಿವೆ.
ಸಚಿವ ನಾರಾಯಣ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗದ ಬಡ ಕುಟುಂಬಗಳಿಗೆ ಆತ್ಮಸ್ಥೈರ್ಯ ನೀಡಿ, ವೈಯಕ್ತಿಕವಾಗಿ ಆರ್ಥಿಕ ನೆರವು ಜೊತೆಗೆ ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : Basanagouda Patil Yatnal : ಕೆಪಿಎಸ್‌ಸಿ ನೇಮಕದಲ್ಲು ಭ್ರಷ್ಟಾಚಾರ : ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.