Sa. Ra. Mahesh: ಜಿ.ಟಿ.ದೇವೇಗೌಡರ ಬಗ್ಗೆ ಮಹತ್ವದ ಸುಳಿವು ಕೊಟ್ಟ ಸಾ.ರಾ.ಮಹೇಶ್..!

ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ

Last Updated : Jan 8, 2021, 05:00 PM IST
  • ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ
  • ಜೆಡಿಎಸ್ ಪಕ್ಷದಿಂದಲೇ ಅಪ್ಪ ಮಗ ಇಬ್ಬರು ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಯಾರಿಗು ಇರೋದು ಬೇಡ. ನಾನು ಹೇಳ್ತಿದ್ದೇನೆ ಅವರು ಜೆಡಿಎಸ್ ಅಲ್ಲೆ ಇರ್ತಾರೆ.ಎಂದಿದ್ದಾರೆ.
  • ಜಿ.ಟಿ.ದೇವೇಗೌಡರು ಉಚ್ಚಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿಟಿಡಿ ಸಿಎಂರನ್ನ ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನ ನಾವ್ಯಾಕೆ ಉಚ್ಛಾಟಿಸುತ್ತೇವೆ.
Sa. Ra. Mahesh: ಜಿ.ಟಿ.ದೇವೇಗೌಡರ ಬಗ್ಗೆ ಮಹತ್ವದ ಸುಳಿವು ಕೊಟ್ಟ ಸಾ.ರಾ.ಮಹೇಶ್..! title=

ಮೈಸೂರು: ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದಿರುವ ಶಾಸಕ ಸಾ.ರಾ.ಮಹೇಶ್ ಮತ್ತೊಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕ ಸಾರಾ(Sa. Ra. Mahesh) ಅವರಷ್ಟೆ ಅಲ್ಲ ಮುಂದಿನ ಚುನಾವಣೆಯಲ್ಲಿ ಅವರ ಮಗನು ಸ್ಪರ್ಧೆ ಮಾಡುತ್ತಾರೆ ಎನ್ನುವ ಅಚ್ಚರಿಯ ಸುದ್ದಿಯೊಂದನ್ನ ಹೇಳಿದ್ದಾರೆ. ಜೆಡಿಎಸ್ ಪಕ್ಷದಿಂದಲೇ ಅಪ್ಪ ಮಗ ಇಬ್ಬರು ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಯಾರಿಗು ಇರೋದು ಬೇಡ. ನಾನು ಹೇಳ್ತಿದ್ದೇನೆ ಅವರು ಜೆಡಿಎಸ್ ಅಲ್ಲೆ ಇರ್ತಾರೆ.ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದಾಖಲಾಯ್ತು 'FIR '..!‌?

ಚುನಾವಣೆಗು ಮುನ್ನ ಭಿನ್ನಾಭಿಪ್ರಾಯ ಇರೋದು ಜೆಡಿಎಸ್‌ನಲ್ಲಿ ಸಹಜವಾಗಿಬಿಟ್ಟಿದೆ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ. ಆದ್ರೆ ಚುನಾವಣೆ ಬಂದ ತಕ್ಷಣ ನಾವೇಲ್ಲ ಒಂದಾಗುತ್ತೇವೆ. ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನ ಒಳಗಡೆ ಇಟ್ಟುಕೊಳ್ಳಲ್ಲ. ಹೊರಗಡೆ ಮಾತನಾಡಿ ಎಲ್ಲ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಪಾರ್ಟಿಯ ಇರೋದೆ ಆ ಥರ ಎಂದಿದ್ದಾರೆ.

Corona Positive: ರಾಜ್ಯದಲ್ಲಿ ಶಾಲೆಗಳು ಆರಂಭವಾದ ಮೇಲೆ '161 ಶಿಕ್ಷಕರಿಗೆ ಕೊರೋನಾ ದೃಢ'..!

ಜಿ.ಟಿ.ದೇವೇಗೌಡರು ಉಚ್ಚಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿಟಿಡಿ ಸಿಎಂರನ್ನ ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನ ನಾವ್ಯಾಕೆ ಉಚ್ಛಾಟಿಸುತ್ತೇವೆ. ಉಚ್ಛಾಟಿಸುವ ಕೆಲಸ ಜಿಟಿಡಿ ಏನು ಮಾಡಿದ್ದಾರೆ. ಆದ್ರೆ ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದ್ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಅಂತ ಅವರ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

Ashwath Narayan: ‘ಪಕ್ಷದಲ್ಲಿ ನಾನೇ ಸೂಪರ್‌ಮ್ಯಾನ್, ಸೂಪರ್‌ಪವರ್ ಅಂದ್ರೆ ಕೆಲಸ ಆಗಲ್ಲ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News