ಸಮ್ಮಿಶ್ರ ಸರ್ಕಾರದ 14 ನೇ ವಿಕೆಟ್ ಪತನ: ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ ಶಾಸಕ ರೋಷನ್ ಬೇಗ್!

ಶಾಸಕ ರೋಷನ್ ಬೇಗ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.  

Last Updated : Jul 9, 2019, 01:28 PM IST
ಸಮ್ಮಿಶ್ರ ಸರ್ಕಾರದ 14 ನೇ ವಿಕೆಟ್ ಪತನ: ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ ಶಾಸಕ ರೋಷನ್ ಬೇಗ್! title=

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ಹಾಗೂ ಪಕ್ಷವಿರೋಧಿ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ರೋಷನ್ ಬೇಗ್ ಅವರನ್ನು ಅಮಾನತು ಗೊಳಿಸಲಾಗಿತ್ತು. ಬಳಿಕ ಕಾಂಗ್ರೆಸ್ ವಿರುದ್ಧ ಸಾಕಷ್ಟು ಅಸಮಾಧಾನ ಹೊರಹಾಕಿದ್ದ ರೋಷನ್ ಬೇಗ್, ತಾವು ರಾಜೀನಾಮೆ ನೀಡಿ ಬಿಜೆಪಿ ಸೇರುವುದಾಗಿ ಸೋಮವಾರ ತಿಳಿಸಿದ್ದರು. 

ಅದರಂತೆ ಇಂದು ಖುದ್ದಾಗಿ ಸ್ಪೀಕರ್ ಕಚೇರಿಗೆ ಆಗಮಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಪೀಕರ್ ಕೊಠಡಿಯಲ್ಲಿ ಕೃಷ್ಣಬೈರೇಗೌಡ ಮತ್ತು ಕೆ.ಜೆ.ಜಾರ್ಜ್ ಸಹ ಉಪಸ್ಥಿತರಿದ್ದರು ಎನ್ನಲಾಗಿದೆ. 

ಇಲ್ಲಿಗೆ ಸಮ್ಮಿಶ್ರ ಸರ್ಕಾರದ ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆದರೆ ಈ ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಾರೆಯೇ? ಮುಖಾಮುಖಿ ಚರ್ಚೆಯಲ್ಲಿ ಶಾಸಕರು ನಿಡುವ ಕಾರಣಗಳು ಸ್ಪೀಕರ್ ಗೆ ಸಮಂಜಸ ಎನಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.

Trending News