ಪಠ್ಯಪುಸ್ತಕ ಪರಿಷ್ಕರಣೆ ಕೂಡಲೇ ರದ್ದುಗೊಳಿಸಿ: ‘ಹಳ್ಳಿ ಹಕ್ಕಿ’ ಹೆಚ್.ವಿಶ್ವನಾಥ್ ಆಗ್ರಹ

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸ್ಥಾಪಿಸುವ ಸಮದಲ್ಲಾಗಲಿ, ಪುಸ್ತಕ ಪರಿಷ್ಕರಣೆ ಮಾಡುವ ಸಮಯದಲ್ಲಾಗಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲವೆಂದು ವಿಶ್ವನಾಥ್ ದೂರಿದ್ದಾರೆ.

Written by - Manjunath Hosahalli | Edited by - Puttaraj K Alur | Last Updated : May 24, 2022, 06:56 PM IST
  • ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಬೇಕು
  • ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪಠ್ಯಪುಸ್ತಕ ಬದಲಾಯಿಸುವುದು ಸರಿಯಲ್ಲ
  • ಶಿಕ್ಷಣವನ್ನು ಕೇಸರಿಕರಣ ಮಾಡುವುದನ್ನು ತಪ್ಪಿಸಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹ
ಪಠ್ಯಪುಸ್ತಕ ಪರಿಷ್ಕರಣೆ ಕೂಡಲೇ ರದ್ದುಗೊಳಿಸಿ: ‘ಹಳ್ಳಿ ಹಕ್ಕಿ’ ಹೆಚ್.ವಿಶ್ವನಾಥ್ ಆಗ್ರಹ title=
'ಪಠ್ಯಪುಸ್ತಕ ಪರಿಷ್ಕರಣೆ ಕೂಡಲೇ ರದ್ದುಗೊಳಿಸಿ'

ಬೆಂಗಳೂರು: ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ರದ್ದುಗೊಳಿಸಿ, ಶಿಕ್ಷಣವನ್ನು ಕೇಸರಿಕರಣ ಮಾಡುವುದನ್ನು ತಪ್ಪಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರಿಗೆ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನನ್ನ ತಂಡದ ನಾಲ್ವರಿಗೆ ಟಿಕೆಟ್! ವಿಜಯೇಂದ್ರ ಅವರಗೆ ಬೇರೆ ಅವಾಕಾಶವಿದೆ: ನಳಿನ್ ಕುಮಾರ್ ಕಟೀಲ್

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಬೇಕು. ಸಮಿತಿಯಲ್ಲಿರುವ ಯಾರು ಸಹ ಸರಿಯಾದ ಶಿಕ್ಷಣ ಪಡೆದವರಿಲ್ಲವೆಂದು ಆರೋಪಿಸಿದರು. ಇದಲ್ಲದೇ ಆ ಸಮಿತಿಯನ್ನು ಸ್ಥಾಪಿಸುವ ಸಮದಲ್ಲಾಗಲಿ, ಪುಸ್ತಕ ಪರಿಷ್ಕರಣೆ ಮಾಡುವ ಸಮಯದಲ್ಲಾಗಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲವೆಂದು ದೂರಿದರು.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪಠ್ಯಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಇದು ಲಕ್ಷಾಂತರ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ಮಕ್ಕಳು ಎಂದಿಗೂ ಏಕಪಕ್ಷೀಯ ದೃಷ್ಟಿಕೋನದಲ್ಲಿ ಬೆಳೆಯಬಾರದು. ಅದು ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ ಈ ಪಠ್ಯವನ್ನು ರದ್ದುಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News