ಸಿದ್ದರಾಮಯ್ಯ ಕಾಲನ್ನು ಡಿಕೆಶಿ ಕಟ್ ಮಾಡಿದ್ದಾರೆ: ಸಚಿವ ಈಶ್ವರಪ್ಪ

ಮಂತ್ರಾಲಯದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ (Eshwarappa), ಹಿಂದುಳಿದ ವರ್ಗದ ಸಮಾವೇಶ ಮಾಡಲು ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಇಲ್ಲ ಎಂದು ಹೇಳಿದರು. 

Written by - Zee Kannada News Desk | Last Updated : Mar 13, 2022, 06:25 PM IST
  • ಹಿಂದುಳಿದ ವರ್ಗದ ಸಮಾವೇಶ ಮಾಡಲು ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಇಲ್ಲ
  • ಸಿದ್ದರಾಮಯ್ಯ ಕಾಲನ್ನು ಡಿಕೆಶಿ ಕಟ್ ಮಾಡಿದ್ದಾರೆ
  • ಮಂತ್ರಾಲಯದ ಸಚಿವ ಈಶ್ವರಪ್ಪ ಹೇಳಿಕೆ
ಸಿದ್ದರಾಮಯ್ಯ ಕಾಲನ್ನು ಡಿಕೆಶಿ ಕಟ್ ಮಾಡಿದ್ದಾರೆ: ಸಚಿವ ಈಶ್ವರಪ್ಪ  title=
ಸಚಿವ ಈಶ್ವರಪ್ಪ

ರಾಯಚೂರು: ಸಿದ್ದರಾಮಯ್ಯ (Siddaramaiah) ಕಾಲನ್ನು ಡಿಕೆಶಿ ಕಟ್ ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. 

ಮಂತ್ರಾಲಯದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ (Eshwarappa), ಹಿಂದುಳಿದ ವರ್ಗದ ಸಮಾವೇಶ ಮಾಡಲು ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಇಲ್ಲ. ಸಮಾವೇಶ ಮಾಡಬೇಡಿ ಅಂತ ಹೇಳಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲು ಕಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ನೇಪಾಳಿ ದಂಪತಿ: ಕೈ ಮುಖಂಡನ ಮನೆ ದೋಚಿ ಪರಾರಿ

ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಸಪರೇಟ್ ಸಭೆ ಮಾಡಬೇಡಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಇದು ಕಾಂಗ್ರೆಸ್ ನ (Congress) ಪರಿಸ್ಥಿತಿ. ಹಿಂದುಳಿದವರನ್ನು ಬೆಳೆಸಲಿಲ್ಲ. ಸರ್ವಾಧಿಕಾರಿ‌ ಧೋರಣೆಯಿಂದ ಚಾಮುಂಡೇಶ್ವರಿಯಲ್ಲಿ ಸೋತರು ಎಂದರು.

ಸಿದ್ದರಾಮಯ್ಯನದ್ದು ಬರೀ ಸೊಕ್ಕಿನ ಮಾತೇ. ಸಿದ್ದರಾಮಯ್ಯ ತಾ.ಪಂ, ಜಿ.ಪಂ ಚುನಾವಣೆ ಮಾಡಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲಿ ಅವರೇ ಸೋತರು. ಎಲ್ಲಾ ಚುನಾವಣೆಯಲ್ಲಿ ಸೋತರು ಸಹ ಅವರ ಸೊಕ್ಕು ಮಾತ್ರ ಇಳಿದಿಲ್ಲಎಂದು ಕಿಡಿಕಾರಿದರು.

ಇದನ್ನೂ ಓದಿ: ‘ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ?’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News