ಸುಪ್ರೀಂ ತೀರ್ಪಿನ ವಿರುದ್ಧ ಸಕ್ಕರೆನಾಡು ಕೊತ ಕೊತ...ಶನಿವಾರ ಮಂಡ್ಯ, ಮದ್ದೂರು ಸಂಪೂರ್ಣ ಬಂದ್..!

Mandya-Madduru: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಹಾಗೂ ಕಾವೇರಿ ನಿರ್ವವಣಾ ಪ್ರಾಧಿಕಾರ ನೀಡಿದ ಆದೇಶ ಖಂಡಿಸಿ ಶನಿವಾರ ಮಂಡ್ಯ ಹಾಗೂ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ ಕರೆ ನೀಡಿರುವ ಮಂಡ್ಯ ಹಾಗೂ ಮದ್ದೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ..  

Written by - Savita M B | Last Updated : Sep 22, 2023, 08:59 PM IST
  • ರೈತರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ
  • ಗುರುವಾರ ಸುಪ್ರೀಂಕೋರ್ಟ್ ನೀಡಿದ ಆದೇಶ ಸಕ್ಕರೆನಾಡಿನ ಜನತೆಗೆ ಮರಣ ಶಾಸನದಂತಾಗಿದೆ.
  • ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಶನಿವಾರ ಮಂಡ್ಯ ಹಾಗೂ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ..
ಸುಪ್ರೀಂ ತೀರ್ಪಿನ ವಿರುದ್ಧ ಸಕ್ಕರೆನಾಡು ಕೊತ ಕೊತ...ಶನಿವಾರ ಮಂಡ್ಯ, ಮದ್ದೂರು ಸಂಪೂರ್ಣ ಬಂದ್..!  title=

ರೈತರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಸರ್ಕಾರದ ವಿರುದ್ಧ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ರೈತರು ಹಾಗೂ ಕನ್ನಡಪರ ಸಂಘಟನೆಗಳು ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಸರಣಿ ಪ್ರತಿಭಟನೆ ಮಾಡ್ತಾ ಬಂದಿದ್ದಾರೆ. 

ಇದರ ಬೆನ್ನಲ್ಲೇ ಗುರುವಾರ ಸುಪ್ರೀಂಕೋರ್ಟ್ ನೀಡಿದ ಆದೇಶ ಸಕ್ಕರೆನಾಡಿನ ಜನತೆಗೆ ಮರಣ ಶಾಸನದಂತಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಶನಿವಾರ ಮಂಡ್ಯ ಹಾಗೂ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ..

ಕಾವೇರಿ ಮಾತೆಯ ರಕ್ಷಣೆಗಾಗಿ ಕರೆ ನೀಡಿರುವ ಮಂಡ್ಯ ಹಾಗೂ ಮದ್ದೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಡುಗಳ ಮಾಲೀಕರು, ಹೋಟೇಲ್ ಮಾಲೀಕರು, ವರ್ತಕರ ಸಂಘಗಳು ಬೆಂಬಲ ಘೋಷಣೆ ಮಾಡಿವೆ. ಅಷ್ಟೆ ಅಲ್ಲ, ಬಂದ್ ಗೆ ಆಟೋ ಚಾಲಕರು,  ಖಾಸಗಿ ಬಸ್, ಲಾರಿ ಮಾಲೀಕರ ಸಂಘ, ವರ್ತಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರಿಂದಲೂ  ಬೆಂಬಲ ಸಿಕ್ಕಿದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ಶಾಲಾ-ಕಾಲೇಜಿಗೆ ರಜಾ ಘೋಷಣೆ ಮಾಡಲಾಗಿದೆ..

ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಂಡ್ಯ ಹಾಗೂ ಮದ್ದೂರು  ಬಂದ್ ನಡೆಯಲಿದೆ. ಹಾಗಾದ್ರೆ ಮಮಡ್ಯ ಬಂದ್ ವೇಳೆ ಏನಿರುತ್ತೆ.. ಏನಿರಲ್ಲ ಅಂತ ನೋಡೋದಾದ್ರೆ..

ಮಂಡ್ಯ ಬಂದ್..ಏನಿರಲ್ಲ? 
ಆಟೋ, ಖಾಸಗಿ ಬಸ್ ಸಂಚಾರ ಇರಲ್ಲ 
ಎಲ್ಲಾ ಅಂಗಡಿ ಮುಂಗಟ್ಟು ಬಂದ್ 
ಪೆಟ್ರೋಲ್ ಬಂಕ್, ಸಿನಿಮಾ ಪ್ರದರ್ಶನ ಇರಲ್ಲ 
ಸೂಪರ್ ಮಾರ್ಕೆಟ್ ಕೂಡ ಬಾಗಿಲು ತೆರೆಯೋದಿಲ್ಲ
ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೂ ರಜೆ
KSRTC ಬಸ್ ಸಂಚಾರ ಡೌಟ್, ಪರಿಸ್ಥಿತಿ ಆಧರಿಸಿ ನಿರ್ಧಾರ

ಮಂಡ್ಯ ಬಂದ್..ಏನಿರುತ್ತೆ..
ಮೆಡಿಕಲ್, ಆಸ್ಪತ್ರೆ, ಹಾಲಿನ  ಬೂತ್ ಮಾತ್ರ ಓಪನ್ 
ಬೆಳಿಗ್ಗೆ 8 ಗಂಟೆಯವರೆಗೆ ಮಾರುಕಟ್ಟೆ ಒಪನ್

ಇದನ್ನೂ ಓದಿ-JDS-BJP Alliance: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಅಧಿಕೃತ ಘೋಷಣೆ ಮಾಡಿದ ಬಿಜೆಪಿ ಹೈಕಮಾಂಡ್..!

ಮಂಡ್ಯ ಮತ್ತು ಮದ್ದೂರು ಬಂದ್ ವೇಳೆ ಆಟೋ, ಖಾಸಗಿ ಬಸ್ ಸಂಚಾರ ಇರಲ್ಲ . ಎಲ್ಲಾ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್, ಸಿನಿಮಾ ಪ್ರದರ್ಶನ ಇರಲ್ಲ,  ಸೂಪರ್ ಮಾರ್ಕೆಟ್ ಕೂಡ ಬಾಗಿಲು ತೆರೆಯೋದಿಲ್ಲ. ಕೆಲವು ಖಾಸಗಿ ಶಾಲಾ-ಕಾಲೇಜುಗಳು ಬಂದ್ ಬೆಂಬಲಿಸಿ ರಜೆ ಘೋಷಣೆ ಮಾಡಿವೆ. KSRTC ಬಸ್ ಗಳು ರಸ್ತೆಗೆ ಇಳಿಯೋದು ಅನುಮಾನ. ಪರಿಸ್ಥಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಲು ಸಾರಿಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ . ಮೆಡಿಕಲ್, ಆಸ್ಪತ್ರೆ, ಹಾಲಿನ ಬೂತ್ ಮಾತ್ರ ಓಪನ್ ಇರಲಿವೆ. ಇನ್ನು ಬೆಳಿಗ್ಗೆ 9 ಗಂಟೆಯಿಂದ ಮಂಡ್ಯ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತ, ಮಹಾವೀರ ವೃತ್ತ, ವಿವಿ ರೋಡ್, ಡಬಲ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮಂಡ್ಯ ನಗರದಾದ್ಯಂತ ಬೃಹತ್ ಬೈಕ್ ರ್ಯಾಲಿ ಮಾಡಲು ರೈತರು ಯೋಜನೆ ರೂಪಿಸಿದ್ದಾರೆ.

ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಧುಮುಕಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ  ನಿರ್ಮಲಾನಂದ ಶ್ರೀಗಳು ಹಾಗೂ ವಿವಿಧ ಶಾಖಾ‌ ಮಠದ ಪುರುಷೋತ್ತಮಾನಂದ ಶ್ರೀ, ಸೋಮೇಶ್ವರನಾಥ ಶ್ರೀ, ಸೌಮ್ಯನಾಥ ಶ್ರೀ, ಅನ್ನದಾನೇಶ್ವರ ಶ್ರೀಗಳು ಸಾಥ್ ನೀಡಿದ್ರು. ದಿವಂಗತ ರೆಬೆಲೆಸ್ಟಾರ್ ಅಂಬರೀಷ್ ಪುತ್ರ, ನಟ ಅಭಿಷೇಕ್ ಅಂಬರೀಷ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾವೇರಿ ಹೋರಾಟಕ್ಕೆ ಸಾಥ್  ನೀಡಿದ್ರು..

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮಂಡ್ಯ ಕಾಂಗ್ರೆಸ್ ಕೂಡ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದೆ. ಮಂಡ್ಯದ ಡಿಸಿ ಕಚೇರಿ ಬಳಿ  ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಂತರ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಹಾಗೂ ಗಣಿಗ ರವಿಕುಮಾರ್, ಸುಪ್ರೀಂಕೋರ್ಟ್ ತೀರ್ಪಿನಿಂದ ಕಾವೇರಿ ಭಾಗದ ರೈತರಿಗೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಸುಪ್ರೀಂಕೋರ್ಟ್ ತೀರ್ಪು ಹಾಗೂ ಕಾವೇರಿ ಪ್ರಾಧಿಕಾರದ ಆದೇಶವನ್ನ ತಡೆ ಹಿಡಿಯಬೇಕು ಎಂದು ಆಗ್ರಹಿಸಿದ್ರು..

ಇನ್ನು ಕಾವೇರಿ ಹೋರಾಟದಲ್ಲಿ ಬೆಂಗಳೂರಿನ ಜನರು ಭಾಗಿಯಾಗದಕ್ಕೆ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ಗೆ  ವಿವಿಧ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿದ್ವು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಪಂಪ್ ಹೌಸ್ ಮುತ್ತಿಗೆ  ಹಾಕಿ ಬೆಂಗಳೂರಿಗೆ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿದ್ರು.. ಈ ವೇಳೆ   ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. 

ಮಂಡ್ಯ ಬಂದ್ ಗೆ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಲಿ, ಆದರೆ ಬಂದ್ ಮಾಡೋದು ಬೇಡ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಎಲ್ಲೋಗಿದ್ರು ಎಂದು ವಿಪಕ್ಷಗಳ ವಿರುದ್ಧವೂ ಡಿಕೆಶಿ ಕಿಡಿಕಾರಿದ್ದಾರೆ

ಒಟ್ಟಾರೆ, ಕಾವೇರಿ ವಿಚಾರದಲ್ಲಿ ಸಕ್ಕರೆನಾಡಿನ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ. ಶನಿವಾರ ಮಂಡ್ಯ ಬಂದ್ ಗೆ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನ ಅನ್ನೋದನ್ನ ಕಾದು ನೋಡಬೇಕಿದೆ..

ಇದನ್ನೂ ಓದಿ-ಕಾಂಗ್ರೆಸ್ ಗೆ ಅಸತ್ಯವೇ ಅಷ್ಟೈಶ್ವರ್ಯ! ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ-ಜೆಡಿಎಸ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News