ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್ ? ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲ್ಯಾನ್ .!

ಇದೀಗ ಈ ಉರುಸ್ ನೆಪದಲ್ಲಿಯೇ ಮುಸಲ್ಮಾನರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಜೂನ್ 28 ಅಂದರೆ ನಾಳೆ ಬೃಹತ್ ಜಾಥಾ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.  

Written by - Zee Kannada News Desk | Last Updated : Jun 27, 2022, 10:36 AM IST
  • ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ಮುಸಲ್ಮಾನರು ?
  • ಹಿಂದೂಗಳ ಬಳಿಕ ಇದೀಗ ಮುಸಲ್ಮಾನರ ಸರದಿ!
  • ಬಂದೋ ಬಸ್ತ್ ಕೋರಿ ಮನವಿ
ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್  ? ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲ್ಯಾನ್ .! title=
Ganjam gumbaz Urus (representative photo)

ಮಂಡ್ಯ : ಶ್ರೀರಂಗಪಟ್ಟಣ ಮತ್ತೊಮ್ಮೆ ಧರ್ಮ ದಂಗಲ್ ಗೆ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ.  ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರು ಮೆಗಾ ಪ್ಲ್ಯಾನ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಉರುಸ್ ಆಚರಣೆ ನೆಪದಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ  ವೇದಿಕೆ ಸಜಾಗಿದೆ ಎಂದು ಹೇಳಲಾಗುತ್ತಿದೆ. 

ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ಮುಸಲ್ಮಾನರು  ? :
ಜೂನ್ 27, 28, 29ರಂದು ಮೂರು ದಿನ ಕಾಲ ಶ್ರೀರಂಗಪಟ್ಟಣದ ಗಂಜಾಂನ ಗುಂಬಸ್ ನಲ್ಲಿ ಉರುಸ್ ಆಚರಣೆ ನಡೆಯಲಿದೆ. ಇದು 230ನೇ ಉರುಸ್ ಆಚರಣೆಯಾಗಿರಲಿದೆ. ಇದೀಗ ಈ ಉರುಸ್ ನೆಪದಲ್ಲಿಯೇ ಮುಸಲ್ಮಾನರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಜೂನ್ 28 ಅಂದರೆ ನಾಳೆ ಬೃಹತ್ ಜಾಥಾ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.   

ಇದನ್ನೂ ಓದಿ : ಕಾಲಮಿತಿಯೊಳಗೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ

 ಹಿಂದೂಗಳ ಬಳಿಕ ಇದೀಗ ಮುಸಲ್ಮಾನರ ಸರದಿ! : 
ಉರುಸ್ ಹಿನ್ನೆಲೆಯಲ್ಲಿ ಬೃಹತ್ ಜಾಥಾ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಜಾಥಾದಲ್ಲಿ ಸುಮಾರು 30-40 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶ್ರೀರಂಗಪಟ್ಟಣ ಮಸೀದಿಯಿಂದ ಗುಂಬಜ್ ವರೆಗೆ ಬೃಹತ್ ಜಾಥಾ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಬೃಹತ್ ಜಾಥಾ ನಡೆಯಲಿದೆ. ಈ ಬೃಹತ್ ಜಾಥಾಗೆ ಅನುಮತಿ ಕೋರಿ ಮಂಡ್ಯ ಎಸ್ಪಿಗೆ ಪತ್ರ ಬರೆಯಲಾಗಿದೆ.  

ಬಂದೋ ಬಸ್ತ್ ಕೋರಿ ಮನವಿ : 
ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ನಿಂದ ಬೃಹತ್ ಜಾಥಾಗೆ ಅನುಮತಿ ಕೋರಿ ಮಂಡ್ಯ ಎಸ್ಪಿಗೆ ಪತ್ರ ಬರೆಯಲಾಗಿದೆ.  ಜಾಥಾ ಹಿನ್ನೆಲೆಯಲ್ಲಿ 3 ದಿನಗಳ ಬಿಗಿ ಪೊಲೀಸ್ ಬಂದೋ ಬಸ್ತ್ ನೀಡುವಂತೆ ಮನವಿ ಮಾಡಲಾಗಿದೆ. ಉರುಸ್ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಸಲ್ಲಿಸಲಾಗಿದೆ. 

ಇದನ್ನೂ ಓದಿ : ತಮ್ಮ ಪ್ರೀತಿಯ ನಾಯಿಯೊಂದಿಗೆ 777 ಚಾರ್ಲಿ ಸಿನಿಮಾ ನೋಡಿದ ಜನಾರ್ಧನ ರೆಡ್ಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News