ನಾಡದ್ರೋಹಿ MESನಿಂದ ಮತ್ತೆ ಗಡಿ ಕ್ಯಾತೆ? ಕನ್ನಡ ರಾಜ್ಯೋತ್ಸವಕ್ಕೆ ಕರಾಳ ದಿನಾಚರಣೆ!

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ನಡೆಯಲಿದೆ.

Written by - Puttaraj K Alur | Last Updated : Oct 26, 2022, 02:04 PM IST
  • ನಾಡದ್ರೋಹಿ ಎಂಇಎಸ್‍ ಸಂಘಟನೆಯಿಂದ ಮತ್ತೆ ಗಡಿ ಖ್ಯಾತೆ ಆರಂಭವಾಗಿದೆ
  • ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಎಂಇಎಸ್‍ ಸಿದ್ಧತೆ
  • ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಸಲು ಪ್ಲಾನ್
ನಾಡದ್ರೋಹಿ MESನಿಂದ ಮತ್ತೆ ಗಡಿ ಕ್ಯಾತೆ? ಕನ್ನಡ ರಾಜ್ಯೋತ್ಸವಕ್ಕೆ ಕರಾಳ ದಿನಾಚರಣೆ!  title=
MESನಿಂದ ಮತ್ತೆ ಗಡಿ ಕ್ಯಾತೆ!

ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ ಮತ್ತೆ ಗಡಿ ಕ್ಯಾತೆ ಆರಂಭವಾಗಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಎಂಇಎಸ್‍ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಸಲು ಪ್ಲಾನ್ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ‌ ದಿನದ ಪೋಸ್ಟ್ ಹಾಕುತ್ತಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಫೇಸ್‍ಬುಕ್‍ ಪೇಜ್‍ನಲ್ಲಿ ಎಂಇಎಸ್‍  ನಾಡದ್ರೋಹಿಗಳಿಂದ ಪೋಸ್ಟ್‌ ಹಾಕಿದ್ದಾರೆ. ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್‍ಗೆ ತೀರ್ಮಾನಿಸಲಾಗಿದೆ. ನಾಡದ್ರೋಹಿ MES ಮಹಾಮೇಳಾವ್‍ಗೆ ಈಗಿಂದಲೇ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ: ಹಳ್ಳಕ್ಕೆ ಇಳಿದ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್: 25 ಮಂದಿಗೆ ಗಾಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಸಂದರ್ಭದಲ್ಲಿ ಗಡಿ ಖ್ಯಾತೆ ತೆಗೆಯಲು ಎಂಇಎಸ ಪ್ಲಾನ್ ಮಾಡಿಕೊಂಡಿದೆ. ಚುನಾವಣಾ ವರ್ಷ ಆಗಿದ್ದರಿಂದ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಎಂಇಎಸ್ ಹುನ್ನಾರ ನಡೆಸಿದೆ. ಎಂಇಎಸ್‍ನ ಮಾಜಿ ಶಾಸಕ ಮನೋಹರ ಕಿಣೇಕರ್ ನೇತೃತ್ವದಲ್ಲಿ ಮುಖಂಡರಿಂದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಕರಾಳ ದಿನಾಚರಣೆ, ಮಹಾಮೇಳಾವ್‍ಗೆ ಈ ಬಾರಿಯಾದರೂ ಬ್ರೇಕ್ ಹಾಕುತ್ತಾ ರಾಜ್ಯ ಬಿಜೆಪಿ ಸರ್ಕಾರ ಅನ್ನೋ ಪ್ರಶ್ನೆ ಮೂಡಿದೆ. ಪ್ರತಿ ವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‍ ಕಾರ್ಯಕರ್ತರು ಪುಂಡಾಟ ನಡೆಸುತ್ತಾರೆ. ಆದರೂ ಸರ್ಕಾರ ನಾಡದ್ರೋಹಿ ಎಂಇಎಸ್‍ ಸಂಘಟನೆಯನ್ನು ಏಕೆ ಬ್ಯಾನ್ ಮಾಡುತ್ತಿಲ್ಲ ಅನ್ನೂ ಪ್ರಶ್ನೆ ಮೂಡಿದೆ. ಗಡಿ, ಭಾಷಾ ವಿಷ ಬೀಜ ಬಿತ್ತುತ್ತಿರುವ ಎಂಇಎಸ್‍ ಪುಂಡರನ್ನು ಗಡಿಪಾರು ಮಾಡಲು ಏಕೆ ಸರ್ಕಾರ ಹಿಂದೇಟು ಹಾಕ್ತಿದೆ ಅಂತಾ ಬೆಳಗಾವಿ ಜನರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮಾದಪ್ಪನ‌ ದೀಪಾವಳಿ ತೇರು ಸಂಪನ್ನ: ಡ್ರೋಣ್ ನಲ್ಲಿ ವೈಭವ ಸೆರೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News