DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!

ಯಾವುದೇ ಷರತ್ತುಗಳಿಲ್ಲದೆ ಪಕ್ಷದ ತತ್ವ -ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವ ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ.

Last Updated : Feb 21, 2021, 04:20 PM IST
  • ಪಕ್ಷ ಬಿಟ್ಟು ಹೋದವರಿಗೆ ಮತ್ತೆ ಪಕ್ಷ ಸೇರಲು ಅವಕಾಶ ನೀಡಲಾಗುವುದು ಎಂದಿರುವ ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ಗೆ ಮತ್ತೆ ಆಹ್ವಾನಿಸಿ
  • ಕಾಂಗ್ರೆಸ್ ಪಕ್ಷ ಸೇರುವವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ.
  • ಯಾವುದೇ ಷರತ್ತುಗಳಿಲ್ಲದೆ ಪಕ್ಷದ ತತ್ವ -ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವ ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ.
DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ! title=

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರುವವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಪಕ್ಷದ ತತ್ವ -ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವ ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷ ಬಿಟ್ಟು ಹೋದವರಿಗೂ ಮತ್ತೆ ಸೇರ್ಪಡೆಗೆ ಅವಕಾಶ ಕೊಡುತ್ತಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವವರಿಗೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.

ಷರತ್ತು ರಹಿತವಾಗಿ ಯಾರೇ ಪಕ್ಷಕ್ಕೆ ಬಂದರೂ ನಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಲಾಗುವುದು. ಯಾರೆಲ್ಲ ಕಾಂಗ್ರೆಸ್(Congress) ಪಕ್ಷ ಬಿಟ್ಟು ಹೋಗಿದ್ದೀರೋ ಅವರು ಮತ್ತೆ ಪಕ್ಷಕ್ಕೆ ಮರಳಿ ಬರಬಹುದು. ಪಕ್ಷ ಬಿಟ್ಟು ಹೋದವರಿಗೆ ಮತ್ತೆ ಪಕ್ಷ ಸೇರಲು ಅವಕಾಶ ನೀಡಲಾಗುವುದು ಎಂದಿರುವ ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ಗೆ ಮತ್ತೆ ಆಹ್ವಾನಿಸಿದ್ದಾರೆ.

Siddaramaiah: 'ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ'

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿಪಕ್ಷ ಬಿಟ್ಟು ಹೋದವರಿಗೆ ಮತ್ತೆ ಪಕ್ಷ ಸೇರಲು ಅವಕಾಶ ನೀಡಲಾಗುವುದು ಎಂದಿರುವ ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ಗೆ ಮತ್ತೆ ಆಹ್ವಾನಿಸಿ ಧ್ರುವ ನಾರಾಯಣ ಹಾಗೂ ರಾಮಲಿಂಗಾ ರೆಡ್ಡಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar), ನಾನು ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಾರೆ. ಆದರೆ, ನನಗೆ ಇದು ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮಾತ್ರ ನನಗೆ ಮುಖ್ಯ ಎನ್ನುವ ಮೂಲಕ ಸಿದ್ದರಾಮಯ್ಯ ಆಪ್ತರ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.

ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್‌ ಬೊಮ್ಮಾಯಿ

ಯಾವುದೇ ಶಾಸಕರು, ಪ್ರಮುಖರು ತಮ್ಮ ಮನೆಗಳಲ್ಲಿ ಪಕ್ಷದ ಸಭೆಗಳನ್ನು ಮಾಡುವಂತಿಲ್ಲ. ಪಕ್ಷದ ಕಚೇರಿಯಲ್ಲೇ ಸಭೆಗಳನ್ನು ಮಾಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ(Siddaramaiah)ನವರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಶಾಸಕರ ಜೊತೆಯಲ್ಲಿ ಮನೆಯಲ್ಲಿ ಸಭೆ ಮಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಪಕ್ಷದ ಕಚೇರಿಯಲ್ಲಿಯೇ ಸಭೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದಿಂದ ಬರುವವರ COVID-19 RT-PCR report ಸಲ್ಲಿಕೆ ಕಡ್ಡಾಯ

ಇನ್ನೇನಿದ್ದರೂ ನಾವು ಜನಗಳ ಮಧ್ಯೆ ನಿಂತು ಹೋರಾಟ ಮಾಡಬೇಕು. ಕನಿಷ್ಟ ಎರಡು ಕಿ.ಮೀ(KM) ಪಾದಯಾತ್ರೆ ಮಾಡಬೇಕು. ಹಾಗಾಗಿ ಜನರ ಮಧ್ಯೆ ಹೋರಾಟ ಮಾಡುವ ನಾಯಕರನ್ನು ಗುರುತಿಸಲು ತಂಡ ಕಳುಹಿಸುತ್ತೇವೆ. ಅಂತಹ ಪ್ರಮುಖರನ್ನು ಗುರುತಿಸಿ ಅಂತಹವರಿಗೆ ಮಾತ್ರ ಚುನಾವಣೆ ಟಿಕೆಟ್ ಕೊಡಲಾಗುತ್ತದೆ ಎಂದಿದ್ದಾರೆ.

Siddaramaiah: ಸಿದ್ದರಾಮಯ್ಯಗೆ 'ಬಹಿರಂಗ ಸವಾಲ್' ಹಾಕಿದ ಬಾದಾಮಿ ಕ್ಷೇತ್ರದ ರೈತ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News