ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟ

ಮೊದಲ ಹಂತದಲ್ಲಿ 29 ನಗರಸಭೆ, 53 ಪುರಸಭೆ ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಇದೇ ತಿಂಗಳ 29ರಂದು ಮೊದಲ ಹಂತದ ಮತದಾನ ನಡೆಯಲಿದೆ.

Last Updated : Aug 2, 2018, 04:35 PM IST
ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟ title=

ಬೆಂಗಳೂರು: ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಅವಧಿ ಮುಕ್ತಾಯವಾಗಲಿರುವ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗಿದೆ.

ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್​ಗಳು, 53 ಪುರಸಭೆಯ 1,247 ವಾರ್ಡ್​ಗಳು ಹಾಗೂ 23 ಪಟ್ಟಣ ಪಂಚಾಯಿತಿಗಳ 400 ವಾರ್ಡ್​ಗಳು ಸೇರಿ ಒಟ್ಟು 2,574 ವಾರ್ಡ್​ಗಳಿಗೆ ಇದೇ ತಿಂಗಳ 29ರಂದು ಮೊದಲ ಹಂತದ ಮತದಾನ ನಡೆಯಲಿದೆ. ಶಿವಮೊಗ್ಗ, ಮೈಸೂರು, ತುಮಕೂರು ಜಿಲ್ಲೆಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಈ ಭಾಗದ ವಾರ್ಡ್​ಗಳಿಗೆ ಹಾಗೂ ಇನ್ನುಳಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಅಕ್ಟೋಬರ್ ಅಥವಾ ನವಂಬರ್ ನಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಸಂಸ್ಥೆಗೆ ಆಗಸ್ಟ್ 29 ರಂದು ನಡೆಯುವ ಚುನಾವಣೆಯ ಫಲಿತಾಂಶ ಸೆಪ್ಟೆಂಬರ್ 1ಕ್ಕೆ ಪ್ರಕಟವಾಗಲಿದೆ ಎಂದು ತಿಳಿಸಿದ ಆಯುಕ್ತರು, ಎಲ್ಲಾ ವಾರ್ಡ್ ಗಳಲ್ಲೂ ಇವಿಎಂ ಯಂತ್ರಗಳನ್ನು ಬಳಸಲಾಗುತ್ತದೆ. ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೋಟಾ ಅಳವಡಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆ ವಿವರ

  • ಆಗಸ್ಟ್‌ 10ಕ್ಕೆ ಅಧಿಸೂಚನೆ  ಪ್ರಕಟ.
  • ಆಗಸ್ಟ್‌ 17ಕ್ಕೆ  ನಾಮಪತ್ರ ಸಲ್ಲಿಕೆ ಕೊನೆದಿನ.
  • ಆಗಸ್ಟ್  29 ಕ್ಕೆ ಮತದಾನ.
  • ಸೆಪ್ಟೆಂಬರ್ 1 ಕ್ಕೆ ಮತ ಎಣಿಕೆ.
     

Trending News