ಸಚಿವನಾಗಿ ಕೆಲವು ವಿಚಾರ ಬಿಚ್ಚಿಡಲು ಆಗುವುದಿಲ್ಲ, ಪರಿಣಾಮದ ಅರಿತು ಮಾತನಾಡಬೇಕು : ಡಿಸಿಎಂ ಡಿ.ಕೆ ಶಿವಕುಮಾರ್

DK Shivakumar On Mekedatu : ನಾವು ಹಾಗೂ ತಮಿಳುನಾಡು ಇಬ್ಬರೂ ಮೇಲ್ಮನವಿ ಸಲ್ಲಿಕೆ ಮಾಡಿದ್ದೆವು. ಎರಡನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಸಚಿವನಾಗಿ ಕೆಲವು ವಿಚಾರವನ್ನು ಬಿಚ್ಚಿಡಲು ಆಗುವುದಿಲ್ಲ. ಅದರ ಪರಿಣಾಮದ ಬಗ್ಗೆ ನಾನು ಅರಿತು ಮಾತನಾಡಬೇಕು ಎಂದು ಹೇಳಿದರು.  

Written by - Prashobh Devanahalli | Last Updated : Sep 22, 2023, 05:17 PM IST
  • ಮಂಡ್ಯ ಬಂದ್ ನಿಂದಾಗಿ ಯಾವುದೇ ಪ್ರಯೋಜನವಿಲ್ಲ
  • ಅನಗತ್ಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು
  • ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ
ಸಚಿವನಾಗಿ ಕೆಲವು ವಿಚಾರ ಬಿಚ್ಚಿಡಲು ಆಗುವುದಿಲ್ಲ, ಪರಿಣಾಮದ ಅರಿತು ಮಾತನಾಡಬೇಕು : ಡಿಸಿಎಂ ಡಿ.ಕೆ ಶಿವಕುಮಾರ್  title=
DK Shivakumar

ಬೆಂಗಳೂರು : ಅವರು ನಮ್ಮ ಶಕ್ತಿ ಅನುಸಾರ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಎರಡೂ ರಾಜ್ಯದವರನ್ನು ಕರೆದು ಮಾತುಕತೆ ನಡೆಸುವಂತೆ ಕೇಳಿದ್ದೇವೆ. ಎಲ್ಲ ವಿಚಾರವನ್ನೂ ಅವರ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವರುಗಳು ಸೇರಿ ಮೂರು ದಿನಗಳ ಕಾಲ ಎಲ್ಲಾ ಸಂಸದರು, ಸಚಿವರುಗಳ ಜತೆ ಚರ್ಚೆ ಮಾಡಿದ್ದೇವೆ. ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು ಎಂದರು.

ನಾಳೆ ಮಂಡ್ಯ ಬಂದ್ ಗೆ ಕರೆ ನೀಡಿರುವ ವಿಚಾರವಾಗಿ ಕೇಳಿದಾಗ, ಮಂಡ್ಯ ಬಂದ್ ನಿಂದಾಗಿ ಯಾವುದೇ ಪ್ರಯೋಜನವಿಲ್ಲ. ಅನಗತ್ಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಸರ್ಕಾರ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ನಿಮ್ಮ ರಕ್ಷಣೆ ಮಾಡಿದ್ದು, ಮುಂದಿನ ದಿನಗಳಲ್ಲೂ ಮಾಡುತ್ತೇವೆ. ಬಂದ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಹೀಗಾಗಿ ಬಂದ್ ಕೈಬಿಡಿ. ನಾವು ಅಧಿಕಾರದಲ್ಲಿದ್ದೇವೆ. ಬೈಸಿಕೊಳ್ಳಲು ನಾವಿದ್ದೇವೆ. ನಿಮ್ಮ ಹೋರಾಟವನ್ನು ನಾವು ಬೇಡ ಎನ್ನುವುದಿಲ್ಲ. ಆದರೆ ಜನರಿಗೆ ತೊಂದರೆಯಾಗುವುದು ಬೇಡ ಎಂದು ತಿಳಿಸಿದರು.

ಮೇಕೆದಾಟು ವಿಚಾರವಾಗಿ ಕೇಳಿದಾಗ, ನ್ಯಾಯಾಲಯ ಈ ವಿಚಾರವಾಗಿ ಪ್ರಾಧಿಕಾರದ ಹಂತದಲ್ಲಿ ಬಗೆಹರಿಸಿಕೊಳ್ಳಲು ಹೇಳಿದೆ. ನಾವು ಆದಷ್ಟು ಬೇಗ ಮೇಕೆದಾಟು ಯೋಜನೆ ಜಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಸಂಕಷ್ಟ ಹಂಚಿಕೆ ಸೂತ್ರ ಅನಿವಾರ್ಯ: ಸಚಿವ ಎನ್. ಚಲುವರಾಯಸ್ವಾಮಿ 

ಪ್ರಧಾನಮಂತ್ರಿಗಳ ಮಧ್ಯ ಪ್ರವೇಶದ ಬಗ್ಗೆ ವಿರೋಧ ಪಕ್ಷಗಳು ಕೇಂದ್ರದತ್ತ ಬೆರಳು ಮಾಡುವ ಪ್ರಯತ್ನ ಎಂದು ಹೇಳಿರುವ ಬಗ್ಗೆ ಕೇಳಿದಾಗ, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರದಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮಮೋಹನ್ ಸಿಂಗ್ ಅವರು ಕಾವೇರಿ ಪ್ರಾಧಿಕಾರದ ಸಭೆ ಕರೆದಿದ್ದರು. ಇಷ್ಟು ದಿನಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಹೀಗಾಗಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಿದ್ದರು. ಈಗ ನ್ಯಾಯಾಲಯವೇ ಈ ವಿಚಾರ ಬಗೆಹರಿಸಿಕೊಳ್ಳಲು ಹೇಳಿದೆ. ಕೇಂದ್ರ ಸರ್ಕಾರ ಯಾವಾಗ ದಿನಾಂಕ ನಿಗದಿ ಮಾಡುತ್ತದೋ ಅಂದು ಹೋಗಿ ಚರ್ಚೆ ಮಾಡಲು ನಾವು ಸಿದ್ಧ ಎಂದು ತಿಳಿಸಿದರು.

ಸಚಿವ ಸಂಪುಟದ ಕೆಲ ಸಚಿವರಿಗೆ ಡಿಸಿಎಂ ವಿಚಾರವಾಗಿ ಚಿಂತೆ ಇರುವ ಬಗ್ಗೆ ಕೇಳಿದಾಗ, ಅನೇಕರು ಆಸೆ ಪಡುತ್ತಾರೆ. ಆಸೆ ಪಡುವವರಿಗೆ ಉತ್ತರ ನೀಡಲು ಬೇರೆಯವರು ಇದ್ದಾರೆ. ಅವರು ಕೊಡುತ್ತಾರೆ. ನಾನು ಈ ವಿಚಾರದಲ್ಲಿ ಮೆತ್ತಗಾಗುತ್ತೇನೋ ಇಲ್ಲವೋ ಎಂಬುದು ನಿಮಗೂ ಗೊತ್ತಿದೆ, ಅವರಿಗೂ ಗೊತ್ತಿದೆ. ಬಿಜೆಪಿ ಹಾಗೂ ದಳದವರಿಗೂ ಗೊತ್ತಿದೆ. ನನ್ನ ರಾಜಕೀಯ ಜೀವನದ ಹಾದಿ ನೋಡಿ 1985ರಿಂದ ನನ್ನನ್ನು, ನನ್ನ ಹೋರಾಟ ನೋಡಿದ್ದೀರಿ. ಇದನ್ನು ನೋಡಿಯೇ ಪಕ್ಷ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ ಎಂದರು.

ಜಲಶಕ್ತಿ ಸಚಿವರು ನಿಮ್ಮ ಮನವಿಗೆ ಹೇಗೆ ಸ್ಪಂದಿಸಿದ್ದಾರೆ ಎಂದು ಕೇಳಿದಾಗ, ಜಲಶಕ್ತಿ ಸಚಿವರು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹಾಗೂ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ : ಬಿಜೆಪಿ ಅಂದ್ರೆ ರಾಜಕೀಯ ಪಕ್ಷವಲ್ಲ, ಹಫ್ತಾ ವಸೂಲಿಯ ಗ್ಯಾಂಗ್: ಕಾಂಗ್ರೆಸ್ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News