18 ಗಂಟೆ ಕೆಲಸ ಮಾಡುವ ಮೋದಿಗೆ ಬರ ಪರಿಹಾರ ನೀಡಲು 18 ನಿಮಿಷ ಸಮಯವಿಲ್ಲವೇ: ಕಾಂಗ್ರೆಸ್

Karnataka Drought Relief: ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡಿಲ್ಲವೇಕೆ? ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Jan 2, 2024, 04:09 PM IST
  • ಪತ್ರ ಬರೆದದ್ದಾಯ್ತು, ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು
  • ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿಲ್ಲವೇಕೆ?
  • ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ
18 ಗಂಟೆ ಕೆಲಸ ಮಾಡುವ ಮೋದಿಗೆ ಬರ ಪರಿಹಾರ ನೀಡಲು 18 ನಿಮಿಷ ಸಮಯವಿಲ್ಲವೇ: ಕಾಂಗ್ರೆಸ್ title=
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿದ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘18 ಗಂಟೆ ಕೆಲಸ ಮಾಡುವ ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ ಪರಿಹಾರ ಒದಗಿಸಲು ಕನಿಷ್ಠ 18 ನಿಮಿಷ ಸಮಯವಿಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.  

‘ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು. ಆದರೆ ಬರ ಪರಿಹಾರ ಮಾತ್ರ ಇನ್ನೂ ಬಂದಿಲ್ಲ. ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡಿಲ್ಲವೇಕೆ? ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ತಾಯಿ ಸೋನಿಯಾ ಜೊತೆ ಸೇರಿ ಅಡುಗೆ ಮಾಡಿದ ರಾಹುಲ್ ಗಾಂಧಿ! ಏನ್ ಸ್ಪೆಷಲ್ ತಯಾರಿಸಿದ್ರು ಗೊತ್ತಾ?

ಕೇಂದ್ರದಿಂದ ಸಿಗದ ಸ್ಪಂದನೆ!

ರಾಜ್ಯದ ಬರ ಪರಿಹಾರಕ್ಕೆ ತುರ್ತು ನೆರವು ಕೋರಿ ಪ್ರಧಾನಿ ಮೋದಿಯವರಿಗೆ  ಸಿಎಂ ಸಿದ್ದರಾಮಯ್ಯನವರು ಮನವಿ ಸಲ್ಲಿಸಿದ ಬಳಿಕವೂ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಅನಾವೃಷ್ಟಿಗೆ ತುತ್ತಾಗಿರುವ ಕರ್ನಾಟಕ ರಾಜ್ಯದ ವಿಚಾರದಲ್ಲಿ ಕೇಂದ್ರ ಸರಕಾರ ಕಿವುಡಾಯಿತೇ ಅನ್ನೋ ಪ್ರಶ್ನೆ ಮೂಡಿದೆ.

ಮಳೆ ಕೊರತೆ ಹಿನ್ನೆಲೆ ಈ ಬಾರಿ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ತೀವ್ರ ಬರ ಕಾಣಿಸಿಕೊಂಡಿದೆ. ಬರಪೀಡಿತ ತಾಲೂಕುಗಳ  ಪಟ್ಟಿ ಬಿಡುಗಡೆ ಬಳಿಕ ಕೇಂದ್ರದ ನೆರವಿಗೆ ರಾಜ್ಯ ಸರ್ಕಾರವು ನಷ್ಟದ ಅಂದಾಜು ಸಲ್ಲಿಸಿತ್ತು. ಬಳಿಕ ಕೇಂದ್ರದ ತಂಡ ಆಗಮಿಸಿ ಬರ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಇಷ್ಟೆಲ್ಲಾ ಆದರೂ ನೆರವು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ.

ಇದನ್ನೂ ಓದಿAir India: ಜನವರಿ 22ರಿಂದ ಏರ್ ಇಂಡಿಯಾದ A350 ವಿಮಾನಗಳ ಕಾರ್ಯಾಚರಣೆ

ಪ್ರಧಾನಿ ಮೋದಿಯವರನ್ನು ಸಿಎಂ ಸಿದ್ದರಾಮಯ್ಯನವರು ಭೇಟಿ ಮಾಡಿ 2 ವಾರವಾದರೂ ಕೇಂದ್ರ ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಕೂಡಲೇ ಬರ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News