ಕುಮಾರಸ್ವಾಮಿಗಳೇ ನಿಮ್ಮ ಡಬಲ್ ಸ್ಟ್ಯಾಂಡರ್ಡ್‌ಗೆ ಮಿತಿ ಇಲ್ಲ: ಕಾಂಗ್ರೆಸ್‌ ಟೀಕೆ

ಬಿಜೆಪಿಯಿಂದ ವಚನಭ್ರಷ್ಟ ಎನಿಸಿಕೊಂಡು, ಬಿಜೆಪಿಯೊಂದಿಗೆ ಇನ್ನೆಂದಿಗೂ ಮೈತ್ರಿ ಇಲ್ಲ ಎಂದು ಜನರ ಕಿವಿ ಮೇಲೆ ಲಾಲ್ ಬಾಗ್ ಇಟ್ಟು, ಬಿಜೆಪಿಯ ಹಗರಣಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ ಈಗ ನಾಚಿಕೆ ಬಿಟ್ಟು ಅದೇ ಬಿಜೆಪಿಯ ಶಾಲನ್ನು ಹೆಗಲೇರಿಸಿ, ಅದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕುತ್ತಿರುವುದು ಅಸಹ್ಯದ ಪರಮಾವಧಿಯಲ್ಲವೇ? ಎಂದು ಎಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನಿಸಿದೆ.

Written by - Puttaraj K Alur | Last Updated : Aug 5, 2024, 06:11 PM IST
  • ಬ್ರದರ್ ಸ್ವಾಮಿಗಳೇ, ಆಕಾಶಕ್ಕೆ ಕೊನೆ ಇಲ್ಲ, ನಿಮ್ಮ ಡಬಲ್ ಸ್ಟ್ಯಾಂಡರ್ಡ್‌ಗೆ ಮಿತಿ ಇಲ್ಲ!
  • ಗಂಟೆಗೊಂದು ಕಡೆ, ಗಳಿಗೆಗೊಂದು ಕಡೆ ನಾಲಿಗೆ ತಿರುಗಿಸುತ್ತಾ ನಿರ್ಲಜ್ಜ ರಾಜಕಾರಣ
  • ಡಿಸಿಎಂ ಡಿಕೆಶಿ ವಿರುದ್ಧ ಆರೋಪ ಮಾಡಿರುವ ಕುಮಾರಸ್ವಾಮಿಗೆ ಕಾಂಗ್ರೆಸ್‌ ತಿರುಗೇಟು
ಕುಮಾರಸ್ವಾಮಿಗಳೇ ನಿಮ್ಮ ಡಬಲ್ ಸ್ಟ್ಯಾಂಡರ್ಡ್‌ಗೆ ಮಿತಿ ಇಲ್ಲ: ಕಾಂಗ್ರೆಸ್‌ ಟೀಕೆ title=
ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ!

ಬೆಂಗಳೂರು: ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಕರ್ನಾಟಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಮಾನ್ಯ ಬ್ರದರ್ ಸ್ವಾಮಿಗಳೇ, ಆಕಾಶಕ್ಕೆ ಕೊನೆ ಇಲ್ಲ, ನಿಮ್ಮ ಡಬಲ್ ಸ್ಟ್ಯಾಂಡರ್ಡ್‌ಗೆ ಮಿತಿ ಇಲ್ಲ!ʼವೆಂದು ಕುಟುಕಿದೆ. 

ʼಬಿಜೆಪಿಯಿಂದ ವಚನಭ್ರಷ್ಟ ಎನಿಸಿಕೊಂಡು, ಬಿಜೆಪಿಯೊಂದಿಗೆ ಇನ್ನೆಂದಿಗೂ ಮೈತ್ರಿ ಇಲ್ಲ ಎಂದು ಜನರ ಕಿವಿ ಮೇಲೆ ಲಾಲ್ ಬಾಗ್ ಇಟ್ಟು, ಬಿಜೆಪಿಯ ಹಗರಣಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ ಈಗ ನಾಚಿಕೆ ಬಿಟ್ಟು ಅದೇ ಬಿಜೆಪಿಯ ಶಾಲನ್ನು ಹೆಗಲೇರಿಸಿ, ಅದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕುತ್ತಿರುವುದು ಅಸಹ್ಯದ ಪರಮಾವಧಿಯಲ್ಲವೇ?ʼ ಎಂದು ಎಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನಿಸಿದೆ.

ಇದನ್ನೂ ಓದಿ: ಗನ್ ತೋರಿಸಿ ಸದಾಶಿವನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಸಿಎಂ ಡಿಕೆಶಿ!? ಕೇಂದ್ರ ಸಚಿವ ಕುಮಾರಸ್ವಾಮಿ ನೇರ ಆರೋಪ

ಈ ಹಿಂದೆ ಬಿಜೆಪಿ ಹಗರಣಗಳ ಬಗ್ಗೆ ಕುಮಾರಸ್ವಾಮಿ ಮಾಡಿದ್ದ ಟ್ವೀಟ್‌ ಅನ್ನು ಉಲ್ಲೇಖಿಸಿರುವ ಕಾಂಗ್ರೆಸ್‌, ʼರಾತ್ರಿ ಪಾದಯಾತ್ರೆಗೆ ವಿರೋಧ, ಬೆಳಗ್ಗೆ ಪಾದಯಾತ್ರೆಗೆ ಹಾಜರ್! ಗಂಟೆಗೊಂದು ಕಡೆ, ಗಳಿಗೆಗೊಂದು ಕಡೆ ನಾಲಿಗೆ ತಿರುಗಿಸುತ್ತಾ ನಿರ್ಲಜ್ಜ ರಾಜಕಾರಣ ಮಾಡುವ ತಾವು ಕರ್ನಾಟಕದ ರಾಜಕೀಯ ವಿದೂಷಕರಾಗಿದ್ದೀರಿʼ ಎಂದು ಟೀಕಿಸಿದೆ. 

ʼಎಚ್‌.ಡಿ.ಕುಮಾರಸ್ವಾಮಿಯವರೇ, ಈ ಹಿಂದೆ ನೀವೇ ಕೊಟ್ಟಿರುವ ಬಿಜೆಪಿ ಭ್ರಷ್ಟಾಚಾರದ ಪಟ್ಟಿ ಮರೆತು ಹೋಯ್ತೆ? ನೀವು ಯಾರನ್ನು ಭ್ರಷ್ಟರು ಎಂದಿದ್ದಿರೋ ಅದೇ ಭ್ರಷ್ಟರೊಂದಿಗೆ ಹೆಜ್ಜೆ ಹಾಕುತ್ತಿರುವುದು ಪರಮ ನಾಚಿಕೆಗೇಡಿನ ರಾಜಕಾರಣವಲ್ಲವೇ? ಅಧಿಕಾರಕ್ಕಾಗಿ ಯಾವ ಕೆಳ ಹಂತಕ್ಕೂ ಇಳಿಯಬಲ್ಲೆ ಎಂದು ನಿರಂತರವಾಗಿ ನಿರೂಪಿಸುತ್ತಿರುವ ಕುಮಾರಸ್ವಾಮಿಯವರಿಗೆ ಉತ್ತರಿಸುವ ನೈತಿಕತೆ ಇದೆಯೇ?ʼ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಇದನ್ನೂ ಓದಿ: ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ : ಬಿಜೆಪಿ - ಜಿಡಿಎಸ್‌ ವಿರುದ್ದ ಗುಡುಗಿ ಡಿಸಿಎಂ ಡಿಕೆಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News