ಬಿಜೆಪಿಯವರು ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದರೂ ಕಾಂಗ್ರೆಸ್ ಕಾರಣ ಎನ್ನುತ್ತಾರೆ!

BJP vs Congress: ‘ಐಸಿಸ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ’ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

Written by - Puttaraj K Alur | Last Updated : Dec 7, 2023, 09:16 PM IST
  • ಇನ್ಮುಂದೆ ಬಿಜೆಪಿಯವರು ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದರೂ ಕಾಂಗ್ರೆಸ್ ಕಾರಣ ಎನ್ನುತ್ತಾರೆ!
  • ತಿಗಣೆ ಕಚ್ಚಿ ರಕ್ತ ಬಂದರೂ ಸಾಕು ಯಾವ ಕಾಂಗ್ರೆಸ್ಸಿಗರ ಮೇಲೆ ಆರೋಪಿಸೋಣ ಎಂದು ಯೋಚಿಸುತ್ತಾರೆ!
  • ಕಾಂಪೌಂಡ್ ಹಾರುವಾಗ ಕಾಲು ಮುರಿದರೂ ಬಿಜೆಪಿಗರು ಕಾಂಗ್ರೆಸ್ ಕಡೆ ಕೈ ತೋರಿಸುತ್ತಾರೆ!
ಬಿಜೆಪಿಯವರು ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದರೂ ಕಾಂಗ್ರೆಸ್ ಕಾರಣ ಎನ್ನುತ್ತಾರೆ! title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ನನ್ನು ಕಲಬುರಗಿಯ ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದೆ.   

‘ಸಚಿವ ಪ್ರಿಯಾಂಕ್ ಖರ್ಗೆಯವರ ಮೇಲೆ ಗೂಬೆ ಕೂರಿಸಲು ಕಾರು ಅಪಘಾತವನ್ನು ಹಲ್ಲೆ ಎಂದು ಸುಳ್ಳಿನ ಕತೆ ಕಟ್ಟಿದ್ದ ಬಿಜೆಪಿಯ ಮಣಿಕಂಠ ರಾಥೋಡನ ಪ್ರಯತ್ನದಿಂದ ತಿಳಿದಿದ್ದೇನೆಂದರೆ.. ಇನ್ಮುಂದೆ ಬಿಜೆಪಿಯವರು ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದರೂ ಕಾಂಗ್ರೆಸ್ ಕಾರಣ ಎನ್ನುತ್ತಾರೆ!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ತಿಗಣೆ ಕಚ್ಚಿ ರಕ್ತ ಬಂದರೂ ಸಾಕು ಯಾವ ಕಾಂಗ್ರೆಸ್ಸಿಗರ ಮೇಲೆ ಆರೋಪಿಸೋಣ ಎಂದು ಯೋಚಿಸುತ್ತಾರೆ! ಕಾಂಪೌಂಡ್ ಹಾರುವ ಖಯಾಲಿ ಇರುವ ಬಿಜೆಪಿಗರು ಕಾಂಪೌಂಡ್ ಹಾರುವಾಗ ಕಾಲು ಮುರಿದರೂ ಕಾಂಗ್ರೆಸ್ ಕಡೆ ಕೈ ತೋರಿಸುತ್ತಾರೆ!’ ಅಂತಾ ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಅರ್ಜುನ ಆನೆಯ ʼಕೊಲೆಗಾರʼ ಯಾರು..? : ಸತ್ಯಾಂಶ ಬಿಚ್ಚಿಟ್ಟ ʼಆಡಿಯೋ ವೈರಲ್‌ʼ

ಯತ್ನಾಳ್‍ಗೆ ಕಾಂಗ್ರೆಸ್ ತಿರುಗೇಟು!

‘ಐಸಿಸ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ’ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ  ಚಾಚಿ ಕೊಂಡಿರುವಂತ ನಾಲಿಗೆ’’ ದಾಸರ ಈ ಸಾಲುಗಳು ಬಿಜೆಪಿಯಲ್ಲಿ ಮನ್ನಣೆ ಸಿಗದೆ ಮತಿಭ್ರಮಣೆಗೊಂಡವರಂತೆ ವರ್ತಿಸುತ್ತಾ, ಭೂಮಿಗೆ ಭಾರವಾಗಿ ಬದುಕುತ್ತಿರುವ ಯತ್ನಾಳ್ ಅವರಿಗೆ ಅರ್ಪಣೆ’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ನಂಟಿದೆ ಎಂದು ಹುರುಳಿಲ್ಲದ ಆರೋಪ ಮಾಡಿದ ಅತೃಪ್ತ ಆತ್ಮದಂತಿರುವ ಯತ್ನಾಳ್ ಹಾಗೂ ಬಿಜೆಪಿ ಹಾಶ್ಮಿಯವರ ಸಾಮಾಜಿಕ ಜಾಲತಾಣಗಳಲ್ಲಿದ್ದ ಫೋಟೋಗಳನ್ನು ಎತ್ತಿ ಇತರ ಮುಸ್ಲಿಂ ಧಾರ್ಮಿಕ ನಾಯಕರನ್ನು ಐಸಿಸ್ ನವರೆಂದು ಬಿಂಬಿಸಲು ಹೊರಟಿದ್ದಾರೆ. ಯತ್ನಾಳ್ ಅವರೇ ಇದೇ ಹಾಶ್ಮಿಯಾವರೊಂದಿಗೆ ನಿಮ್ಮ ಹೊಸ ಬ್ರದರ್ ಕೂಡ ಜಾತ್ಯತೀತತೆಯ ಪೋಷಕು ತೊಟ್ಟಿದ್ದಾಗ ಫೋಟೋ ತೆಗೆದುಕೊಂಡಿದ್ದಾರೆ, ಈಗ ಕುಮಾರಸ್ವಾಮಿಯವರಿಗೂ ಐಸಿಸ್ ಪಟ್ಟ ಕಟ್ಟುತ್ತೀರಾ?’ ಎಂದು ಕಾಂಗ್ರೆಸ್ ಫೋಟೋ ಹಂಚಿಕೊಂಡಿದೆ.

ಇದನ್ನೂ ಓದಿ: ನಾಯಿಯಂತೆ ಮನೆಯಲ್ಲಿಯೇ ʼಚಿರತೆʼ ಸಾಕಿದ್ದ ಸ್ಟಾರ್‌ ನಟಿ..! ಫೋಟೋ ವೈರಲ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News