Anti Conversion Bill: ಮತಾಂತರ ನಿಷೇಧ ವಿಧೇಯಕದ ಪ್ರತಿ ಹರಿದುಹಾಕಿದ ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ

ಡಿ.ಕೆ.ಶಿವಕುಮಾರ್ ಗಾಗಲಿ, ಅವರ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲವೆಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Dec 22, 2021, 12:58 PM IST
  • ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಪ್ರತಿ ಹರಿದುಹಾಕಿದ ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ
  • ಡಿಕೆಶಿ ಅವರಂತವರಿಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ
  • ಸೋನಿಯಾ ಗಾಂಧಿಯ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ಡಿ.ಕೆ.ಶಿವಕುಮಾರ್ ಧ್ಯೇಯವೆಂದು ಬಿಜೆಪಿ ಟೀಕೆ
Anti Conversion Bill: ಮತಾಂತರ ನಿಷೇಧ ವಿಧೇಯಕದ ಪ್ರತಿ ಹರಿದುಹಾಕಿದ ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ  title=
ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ವಿಪಕ್ಷಗಳ ಭಾರೀ ವಿರೋಧದ ನಡುವೆಯೇ ವಿವಾದಿತ ಮತಾಂತರ ನಿಷೇಧ ವಿಧೇಯಕ(Anti-Conversion Bill 2021)ವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದನದಲ್ಲಿಯೇ ಮತಾಂತರ ನಿಷೇಧ ವಿಧೇಯಕದ ಪ್ರತಿಯನ್ನು ಹರಿದುಹಾಕಿದ್ದ ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್(DK Shivakumar) ಅವರೇ ನೀವು ಸದನದಲ್ಲಿ #AntiConversionBill ಪ್ರತಿಯನ್ನು ಹರಿದು ಹಾಕಿದಿರಿ. ಏಕೆಂದರೆ ನಿಮಗಾಗಲಿ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ. ಎಷ್ಟಾದರೂ, ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು’ ಅಂತಾ ಟೀಕಿಸಿದೆ.

ಇದನ್ನೂ ಓದಿ: Anti Conversion Bill 2021: ಭಾರೀ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ

‘ಕಾಂಗ್ರೆಸ್‌ ನಾಯಕರು ತಮಗೆ ಅನುಕೂಲಕರ ವಾತಾವರಣ ಇಲ್ಲವೆಂದಾದರೆ ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲರು. ಏಕೆಂದರೆ ಡಿಕೆಶಿ ಅವರಂತವರಿಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ. ಹೇಗಾದರೂ ಮಾಡಿ ಸೋನಿಯಾ ಗಾಂಧಿಯ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ಅವರ ನಿಮ್ಮ ಧ್ಯೇಯ’ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ(BJP) ಕುಟುಕಿದೆ.

‘ಡಿಕೆಶಿ ಅವರು ಕನಕಪುರದ ಬೆಟ್ಟದ ಮೇಲೆ ಸಂಬಂಧವೇ ಇಲ್ಲದ ವಿಗ್ರಹವೊಂದನ್ನು ಸ್ಥಾಪನೆ ಮಾಡಲು ಹೊರಟಿದ್ದರು. ಇದೆಲ್ಲ ಯಾರನ್ನು ಓಲೈಸುವುದಕ್ಕಾಗಿ? ಕಾಂಗ್ರೆಸ್ ಅಧಿನಾಯಕಿ ಆಂಟೋನಿಯೋ ಮೈನೋ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಶಿವಕುಮಾರ್ ಅವರೇ ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಆಗ್ರಹ: ಜನವರಿ 9ರಿಂದ ಪಾದಯಾತ್ರೆ ಹಮ್ಮಿಕೊಂಡ ಕಾಂಗ್ರೆಸ್

ನಿನ್ನೆ(ಡಿ.22) ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021’ ಮಂಡನೆ ಮಾಡುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸೇದಿರಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿದ್ದರು. ವಿಪಕ್ಷಗಳ ಗದ್ದಲದ ಮಧ್ಯೆಯೇ ವಿಧೇಯಕವನ್ನು ಮಂಡಿಸಲಾಗಿತ್ತು. ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಶುರು ಮಾಡಿದ್ದರು. ಇದು ಜನ ವಿರೋಧಿ ಮಸೂದೆ ಅಂತಾ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News