ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಮಾನವೀಯತೆಯ ಅಂತಃಕರಣವಿಲ್ಲ!

Hangal gang rape case: ಸಿಎಂ ಸಿದ್ದರಾಮಯ್ಯ ಅವರೇ, ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬದವರನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ. ನಿಮ್ಮ ಸರ್ಕಾರದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುವುದು ಮರೀಚಿಕೆ ಎಂಬುದು ನಿಮ್ಮ ನಿಲುವುಗಳಿಂದಲೇ ಸಾಬೀತಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Jan 16, 2024, 04:09 PM IST
  • ಹಾನಗಲ್‍ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
  • ಮಾನವೀಯತೆಯ ಅಂತಃಕರಣವಿಲ್ಲದ ಏಕೈಕ ಮುಖ್ಯಮಂತ್ರಿ ಅಂದರೆ ಅದು ಸಿಎಂ ಸಿದ್ದರಾಮಯ್ಯನವರು
  • ಸೌಜನ್ಯಕ್ಕೂ ಸಂತ್ರಸ್ತೆಯ ಆರೋಗ್ಯ ವಿಚಾರಿಸಲಿಲ್ಲವೆಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಮಾನವೀಯತೆಯ ಅಂತಃಕರಣವಿಲ್ಲ! title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಹಾನಗಲ್‍ನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯರಿಗೆ ಮಾನವೀಯತೆಯ ಅಂತಃಕರಣವಿಲ್ಲ’ವೆಂದು ಟೀಕಿಸಿದೆ.

‘ಮಾನವೀಯತೆಯ ಅಂತಃಕರಣವಿಲ್ಲದ ಏಕೈಕ ಮುಖ್ಯಮಂತ್ರಿ ಅಂದರೆ ಅದು ಸಿಎಂ ಸಿದ್ದರಾಮಯ್ಯನವರು. ಹಾನಗಲ್‌ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರು ತಮಗೆ ನ್ಯಾಯ ಕೊಡಿಸಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡರೂ, "ಜಿಹಾದಿ ಬಚಾವೋ" ಮನಸ್ಥಿತಿಯ ಸಿದ್ದರಾಮಯ್ಯರ ಮನಸ್ಸು ಮಾತ್ರ ಕರಗಲಿಲ್ಲ. ಸೌಜನ್ಯಕ್ಕೂ ಸಂತ್ರಸ್ತೆಯ ಆರೋಗ್ಯ ವಿಚಾರಿಸಲಿಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ ಇಂದಿನಿಂದ ಪೀಣ್ಯ ಫ್ಲೈ ಓವರ್‌ ಬಂದ್‌

‘ಸಿಎಂ ಸಿದ್ದರಾಮಯ್ಯ ಅವರೇ, ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬದವರನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ. ನಿಮ್ಮ ಸರ್ಕಾರದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುವುದು ಮರೀಚಿಕೆ ಎಂಬುದು ನಿಮ್ಮ ನಿಲುವುಗಳಿಂದಲೇ ಸಾಬೀತಾಗುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

‘ವಿಶೇಷ ತನಿಖಾ ತಂಡಗಳ ರಚನೆ ಮಾಡುವುದು ಪೊಲೀಸರಲ್ಲದವರಿಂದ ತನಿಖೆ ಮಾಡಿಸುವುದಕ್ಕಲ್ಲ, ತ್ವರಿತವಾಗಿ ವಿಚಾರಣೆ ನಡೆಸಿ ಆದಷ್ಟೂ ಬೇಗ ನ್ಯಾಯ ಒದಗಿಸಲು. ಆದರೆ ಓಲೈಕೆ ರಾಜಕಾರಣದ ಕನ್ನಡಕ ಹಾಕಿರುವ ಸಿದ್ದರಾಮಯ್ಯನವರು ತನಿಖೆಯ ತೀವ್ರತೆ ಕಡಿಮೆ ಮಾಡಲು ಹಾತೊರೆಯುತ್ತಿದ್ದಾರೆ ಎಂಬುದಿಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ

‘ಅತ್ಯಾಚಾರ ಪ್ರಕರಣವನ್ನು ನೈತಿಕ ಪೊಲೀಸ್‌‌ಗಿರಿಯಾಗಿ ತಿರುಚುವ ಎಲ್ಲಾ ಪ್ರಯತ್ನ ಮಾಡಿದ ಕಾಂಗ್ರೆಸ್ ಪಕ್ಷದ ನೈತಿಕತೆಯಂತೂ ಪಾತಾಳ ಸೇರಿದೆ. ಆದರೆ ಎಸ್‌ಐಟಿ ವ್ಯವಸ್ಥೆಯ ಬಗೆಗೂ ಈಗ ಲಘುವಾಗಿ ಮಾತಾನಾಡಿ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಹುಸಿಗೊಳಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News