ಬೇಲ್ ಪಡೆದು ಹೊರಗೆ ಓಡಾಡುತ್ತಿರುವ ಕಾಂಗ್ರೆಸ್‌ನ ಬೇಲಾಸುರರ ಪಟ್ಟಿ ಬಿಡುಗಡೆ!

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ 6 ಜನ ಕಾಂಗ್ರೆಸ್ ನಾಯಕರ ಹೆಸರನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Oct 28, 2023, 04:22 PM IST
  • ಬೇಲ್‌ ಪಡೆದು ಹೊರಗಡೆ ಓಡಾಡುತ್ತಿರುವ ಕಾಂಗ್ರೆಸ್‌ ಪಕ್ಷದ ಬೇಲಾಸುರರ ಪಟ್ಟಿ ಬಿಡುಗಡೆ
  • ಸೋನಿಯಾ & ರಾಹುಲ್‌ ಗಾಂಧಿ, ಖರ್ಗೆ, ಡಿಕೆಶಿ, ವಿನಯ್‌ ಕುಲಕರ್ಣಿ ಮತ್ತು ಬಿ.ನಾಗೇಂದ್ರ ಹೆಸರು ಬಿಡುಗಡೆ
  • ಇಷ್ಟು ಜನರಲ್ಲಿ ಜೈಲು ಸೇರುವ ಮೊದಲಿಗರು ಯಾರೆಂದು ಕೆಪಿಸಿಸಿ ಅಧ್ಯಕ್ಷರೇ ಹೇಳಲಿ..! ಎಂದು ಬಿಜೆಪಿ ಟೀಕೆ
ಬೇಲ್ ಪಡೆದು ಹೊರಗೆ ಓಡಾಡುತ್ತಿರುವ ಕಾಂಗ್ರೆಸ್‌ನ ಬೇಲಾಸುರರ ಪಟ್ಟಿ ಬಿಡುಗಡೆ! title=
ಕಾಂಗ್ರೆಸ್‌ ಬೇಲಾಸುರರ ಪಟ್ಟಿ ಬಿಡುಗಡೆ!

ಬೆಂಗಳೂರು: ಬೇಲ್‌ ಪಡೆದು ಹೊರಗಡೆ ಓಡಾಡುತ್ತಿರುವ ಕಾಂಗ್ರೆಸ್‌ ಪಕ್ಷದ ಬೇಲಾಸುರರ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ 6 ಜನ ಕಾಂಗ್ರೆಸ್ ನಾಯಕರ ಹೆಸರನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‍ನ ಯುವ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವರಾದ ವಿನಯ್‌ ಕುಲಕರ್ಣಿ ಹಾಗೂ ಬಿ.ನಾಗೇಂದ್ರರ ಹೆಸರುಗಳನ್ನು ಬಿಜೆಪಿ ಹಂಚಿಕೊಂಡಿದೆ. ಇಷ್ಟು ಜನರಲ್ಲಿ ಜೈಲು ಸೇರುವ ಮೊದಲಿಗರು ಯಾರೆಂದು ಕೆಪಿಸಿಸಿ ಅಧ್ಯಕ್ಷರೇ ಹೇಳಲಿ..!’ ಎಂದು ಬಿಜೆಪಿ ಟೀಕಿಸಿದೆ.

‘ಈಗಾಗಲೇ ಬ್ರ್ಯಾಂಡ್ ಆಗಿರುವ ಬೆಂಗಳೂರನ್ನು #BankBengaluru ಮಾಡುವುದೇ ಡಿಸಿಎಂ ಡಿಕೆಶಿ ಅವರ ದುರಾಲೋಚನೆ!! #ATMSarkaraದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ. ಹಾಗಾಗಿ ತಮ್ಮವರಿಂದ ಹರಾಜು ಕೂಗಿಸಲು ಸಿದ್ದರಾಮಯ್ಯರವರ ಬಣ, ಡಿ.ಕೆ.ಶಿವಕುಮಾರ್‌ ಅವರನ್ನು ದೂರವಿಟ್ಟು ರಾತ್ರೋರಾತ್ರಿ ಸಭೆ ನಡೆಸಿದೆ. ಅಂದಹಾಗೆ ಎರಡೂ ಕಡೆ ದೊಡ್ಡ ಸೂಟ್ ಕೇಸ್‌ನೊಂದಿಗೆ ಬರುವವರಿಗೆ ಮೊದಲ ಆದ್ಯತೆ!!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಡಿನ್ನರ್‌ ಮೀಟಿಂಗ್‌ನಲ್ಲಿ ಸಣ್ಣ ಪುಟ್ಟ ರಾಜಕೀಯ ಚರ್ಚೆಗಳಾಗಿವೆ

‘ಒಳಜಗಳ ಮತ್ತು ಕಲೆಕ್ಷನ್ ದಂಧೆಯಲ್ಲಿ ನಿತ್ಯವೂ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕನ್ನಡಿಗರನ್ನು ರಾಜ್ಯದಿಂದಲೇ ಹೊರ ದಬ್ಬುತ್ತಿದೆ. ಬಡವರ ಬದುಕನ್ನೇ ಬದಲಿಸುತ್ತೇವೆ ಎಂಬ ಸುಳ್ಳನ್ನು ನಂಬಿಸಿ ಅಧಿಕಾರ ಹಿಡಿದ ಸಿದ್ದರಾಮಯ್ಯರವರು ಬಡವರ ಬದುಕಿಗೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕವನ್ನು ಗುಡಿಸಿ ಗುಂಡಾಂತರ ಮಾಡುವ ಮೊದಲು ಸಿದ್ದರಾಮಯ್ಯರವರನ್ನೇ ಇಲ್ಲಿಂದ ಒಕ್ಕಲೆಬ್ಬಿಸಿ ಓಡಿಸಿದರೆ ಮಾತ್ರ ಕರ್ನಾಟಕ ಉದ್ಧಾರವಾಗುತ್ತದೆ’ ಎಂದು ಬಿಜೆಪಿ ಟೀಕಿಸಿದೆ.

‘ರಾಜ್ಯದ ಎಲ್ಲಾ ವಲಯಗಳಲ್ಲಿಯೂ ಭರಪೂರ ಕಲೆಕ್ಷನ್ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಅತಿಥಿ ಉಪನ್ಯಾಸಕರಿಗೆ ನೀಡಬೇಕಾಗಿದ್ದ ₹11 ಲಕ್ಷ ಗೌರವಧನಕ್ಕೂ ಕೊಕ್ಕೆ ಹಾಕಿ, ಅದರಲ್ಲಿಯೂ ಸಹ ಕಲೆಕ್ಷನ್-ಕಮಿಷನ್ ಬುದ್ದಿ ತೋರಿದೆ. ಉಸಿರಾಡುವ ಗಾಳಿ, ಕುಡಿಯುವ ನೀರಿನಲ್ಲಿ ಸಹ #ATMSarkara ಕಲೆಕ್ಷನ್ ಮಾಡುವ ದಿನಗಳು ದೂರವಿಲ್ಲ!!’ವೆಂದು ಬಿಜೆಪಿ ಕಿಡಿಕಾರಿದೆ.

‘ಕರ್ನಾಟಕಕ್ಕೆ ಬರಗಾಲದ ಗ್ರಹಣ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ತೆಗೆದು ಕತ್ತಲಲ್ಲಿ ನಾಪತ್ತೆಯಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶೇ.80ರಷ್ಟು ಬೆಳೆ ನಾಶವಾಗಿದೆ. ಮತ್ತೊಂದು ಕಡೆ ಎರಡು ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಯೋಗ್ಯತೆ ಇಲ್ಲದ ಸಿದ್ದರಾಮಯ್ಯರ ಸರ್ಕಾರದ ಕಾರಣದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕಾಂಗ್ರೆಸ್ ಬಂದಿದೆ ಬರದ ಜತೆ ಕರುನಾಡು ಕತ್ತಲಾಗಿದೆ..!’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಶೀಘ್ರವೇ ಕಬ್ಬು ಬೆಳೆಗಾರರ ಅಹವಾಲು ಇತ್ಯರ್ಥಪಡಿಸಿ : ಸಚಿವ ಸಂತೋಷ ಲಾಡ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News