ಕನಕಗಿರಿ-ತಂಗಡಗಿಗೆ ಟಿಕೆಟ್: ಲಿಂಗಸೂರು-ಹಾಲಿ ಶಾಸಕರಿಗಿಲ್ವಂತೆ ಬಿ-ಫಾರ್ಮ್?

ಕನಕಗಿರಿ-ಲಿಂಗಸೂರು ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ಸಿನ ಮಾಜಿ ಮತ್ತು ಹಾಲಿ ಶಾಸಕರುಗಳ ಪೈಕಿ ಲಿಂಗಸೂರಿನ ಶಾಸಕ ಡಿ.ಎಸ್.ಹೂಲಗೇರಿಗೆ ಈ ಬಾರಿ ಟಿಕೆಟ್ ತಪ್ಪಲಿದೆ ಎಂಬ ಸುದ್ದಿ ಕೆಪಿಸಿಸಿ ಮೂಲಗಳಿಂದ ತಿಳಿದುಬಂದಿದೆ.

Written by - Zee Kannada News Desk | Last Updated : Oct 2, 2022, 03:34 PM IST
  • ಅಕ್ಕಪಕ್ಕದ ಕ್ಷೇತ್ರಗಳು: ಒಂದೇ ಕುಟುಂಬದ ಮಾಜಿ-ಹಾಲಿಗಳು
  • ಬಹುದೊಡ್ಡ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿರುವ ನೀರಾವರಿ ಇಲಾಖೆಯ ಎಮ್.ಡಿಯಾಗಿ ನಿವೃತ್ತರಾಗಿರುವ ಆರ್.ರುದ್ರಯ್ಯಗೆ ಟಿಕೇಟ್ ಸಾಧ್ಯತೆ
ಕನಕಗಿರಿ-ತಂಗಡಗಿಗೆ ಟಿಕೆಟ್: ಲಿಂಗಸೂರು-ಹಾಲಿ ಶಾಸಕರಿಗಿಲ್ವಂತೆ ಬಿ-ಫಾರ್ಮ್? title=

ಕೊಪ್ಪಳ/ರಾಯಚೂರು: ಕನಕಗಿರಿ-ಲಿಂಗಸ್ಗೂರು ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ಸಿನ ಮಾಜಿ ಮತ್ತು ಹಾಲಿ ಶಾಸಕರುಗಳ ಪೈಕಿ ಲಿಂಗಸ್ಗೂರಿನ ಶಾಸಕ ಡಿ.ಎಸ್.ಹೂಲಗೇರಿಗೆ ಈ ಬಾರಿ ಟಿಕೆಟ್ ತಪ್ಪಲಿದೆ ಎಂಬ ಸುದ್ದಿ ಕೆಪಿಸಿಸಿ ಮೂಲಗಳಿಂದ ತಿಳಿದುಬಂದಿದೆ.

೫ ವರ್ಷಗಳ ಈ ಅವಧಿಯಲ್ಲಿ ಕಳಪೆ ಆಡಳಿತ ನೀಡಿರುವ ಸಂಬಂಧ ಕೆಪಿಸಿಸಿಯ ಐಟಿ ಸೆಲ್‌ನ ಮಾಜಿ ಅಧ್ಯಕ್ಷ ಚಂದ್ರಶೇಖರ ನಾಯಕ ಅವರು ಈ ಕುರಿತಂತೆ ಟ್ವೀಟ್ ಮಾಡಿ ಡಿ.ಎಸ್.ಹೂಲಗೇರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದು ನಿಜವಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗಿದ್ದು, ಇದಕ್ಕೆ ಕನಕಗಿರಿ ಕ್ಷೇತ್ರದ ಶಿವರಾಜ ತಂಗಡಗಿ ಅವರ ಸ್ಪರ್ಧೆಯೂ ನಿಖರವಾಗಿ ಹೇಳಲಿದೆ.ಕೌಟುಂಬಿಕ ನೆಲೆಯಲ್ಲಿ ಶಿವರಾಜ ತಂಗಡಗಿ ಮತ್ತು ಡಿ.ಎಸ್.ಹೂಲಗೇರಿ ಆಪ್ತ ಸಂಬಂಧಿಗಳಾಗಿದ್ದು, ಅತ್ಯಂತ ಕಡಿಮೆ ಮತಗಳಿರುವ ಈ ಸಮುದಾಯದ ಇಬ್ಬರಿಗೆ ಅಕ್ಕಪಕ್ಕದ ಕ್ಷೇತ್ರಗಳಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೆಪಿಸಿಸಿ ವಲಯಗಳಲ್ಲಿ ಚರ್ಚೆಗೊಳಪಟ್ಟಿದೆ.

ಇದನ್ನೂ ಓದಿ: ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು

ಹಾಲಿ ಶಾಸಕರಾದವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿಲ್ಲ ಎನ್ನುವವರ ಎದುರು ಹಲವು ಕಾರಣಗಳು ಮುನ್ನೆಲೆಗೆ ಬಂದಿವೆ.ಸಾಮಾಜಿಕ ನ್ಯಾಯ ಹಾಗೂ  ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತಗಳನ್ನು ಹೊಂದಿರುವ ಸಮುದಾಯದ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದು ಪಕ್ಷಕ್ಕೆ ಹಾನಿ ಸಂಭವಿಸುವ ಅಪಾಯ ಎದುರಾಗಿರುವುದನ್ನು ಬೊಟ್ಟು ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್‌ನ ನೂತನ ಮಾನದಂಡಗಳ ಆಧಾರದ ಮೇಲೆ ಈ ಪ್ರಕ್ರಿಯೆ ನಡೆಯಲಿದ್ದು, ಎಸ್‌ಸಿ ಮೀಸಲು ಕ್ಷೇತ್ರಗಳಾಗಿರುವ ಈ ಎರಡೂ ಕ್ಷೇತ್ರಗಳಲ್ಲಿ ಕನಕಗಿರಿ ಮತಕ್ಷೇತ್ರ ಶಿವರಾಜ ತಂಗಡಗಿಗೆ ಬಿಟ್ಟುಕೊಡಲಿದೆ. ಲಿಂಗಸ್ಗೂರು ಮತಕ್ಷೇತ್ರಕ್ಕೆ ಮೂಲ ಅಸ್ಪೃಶ್ಯರಾಗಿರುವ ಅದರಲ್ಲೂ ಹಣಬಲ, ಜನಬಲದಲ್ಲಿ ಸದೃಢರಾಗಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವುದು ಒಂದು ಕಡೆಯಾದರೆ, ಆಯಾ ಕ್ಷೇತ್ರಗಳ ಸ್ಥಳೀಯ ಅವಶ್ಯಕತೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಬಲ್ಲ ಶಿಕ್ಷಣವಂತರಿಗೆ ಟಿಕೆಟ್ ನೀಡುವುದು ಮತ್ತೊಂದು ಮಾನದಂಡವನ್ನು ಮುಂದು ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಅಕ್ಕಪಕ್ಕದ ಕ್ಷೇತ್ರಗಳಾಗಿರುವ ಕನಕಗಿರಿ ಮತ್ತು ಲಿಂಗಸ್ಗೂರು ಕ್ಷೇತ್ರಗಳಲ್ಲಿ ಸಂಬAಧಿಕರೇ ಅಧಿಕಾರ ನಡೆಸುತ್ತಿದ್ದಾರೆ.ಕಳೆದ ಬಾರಿ ಕನಕಗಿರಿ ಕ್ಷೇತ್ರಕ್ಕೆ ಶಿವರಾಜ ತಂಗಡಗಿ ಅಧಿಕಾರ ನಡೆಸಿ ಸೋಲನ್ನೊಪ್ಪಿದ್ದರು. ಮಾಜಿ ಶಾಸಕರಾದರೂ ಪಕ್ಷ ಸಂಘಟನೆ, ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಈ ಬಾರಿ ಅವರಿಗೆ ಟಿಕೆಟ್ ನೀಡುವುದು ಅಂತಿಮವಾಗಿದೆ.

ಶಿವರಾಜ ತಂಗಡಗಿ ಮನೆತನದ ಡಿ.ಎಸ್.ಹೂಲಗೇರಿಗೆ ಈ ಬಾರಿ ಲಿಂಗಸ್ಗೂರು ಕ್ಷೇತ್ರಕ್ಕೆ ಟಿಕೆಟ್ ನೀಡುವುದು ಅಸಾಧ್ಯವಾದ ಮಾತು ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ದಲಿತ ಸಮುದಾಯಗಳ ಮತಗಳ ಆಧಾರದ ಮೇಲೆ ಲಿಂಗಸ್ಗೂರು ಕ್ಷೇತ್ರಕ್ಕೆ ಟಿಕೆಟ್ ಅಂತಿಮವಾಗುವ ಸಾಧ್ಯತೆಯಿದ್ದು, ಅದರಲ್ಲೂ ಕ್ಷೇತ್ರದಾದ್ಯಂತ ಸಕ್ರೀಯರಾಗಿರುವ ನಾಯಕರುಗಳಿಗೆ ಟಿಕೆಟ್ ಕೊಡುವ ಸಾಧ್ಯತೆಗಳಿವೆ ಎಂಬ ಸುದ್ದಿಯಿದೆ.

ಇದನ್ನೂ ಓದಿ: Women's Asia Cup: ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತೀಯ ವನಿತೆಯರು

೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿರುವ ಕಾಂಗ್ರೆಸ್ ಪಕ್ಷ ರಾಯಚೂರು ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳ ಪೈಕಿ ೩ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ನ ಹಾಲಿ ಶಾಸಕರುಗಳ ಪೈಕಿ ಲಿಂಗಸೂಗೂರು ಕ್ಷೇತ್ರದ ಹಾಲಿ ಶಾಸಕ ಡಿ.ಎಸ್.ಹೂಲಿಗೇರಿಗೆ ಈ ಬಾರಿ ಅವಕಾಶ ನೀಡದೆ ಹಲವು ಬಹುದೊಡ್ಡ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜಾರಿಗೊಳಿಸಿರುವ ನೀರಾವರಿ ವಿಷಯದಲ್ಲಿ ತಜ್ಞನಾಗಿರುವ ಆರ್.ರುದ್ರಯ್ಯ ಅವರಿಗೆ 2023ರ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವ  ಸಾಧ್ಯತೆಗಳಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡುವ ಚಿಂತನೆಗಳು ಪಕ್ಷದ ವಲಯದಲ್ಲಿ ನಡೆದಿವೆಯಂತೆ!  ಇನ್ನೇನು ಕೆಲವೇ ತಿಂಗಳುಗಳಲ್ಲಿ ಇದರ ಬಗ್ಗೆ ಸ್ಪಷ್ಟನೆ ಹೊರಬೀಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News