ಗ್ರಾ.ಪಂ.ಗಳ ಖಾಲಿ ಉಳಿದ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ ಜಿಲ್ಲೆಯ 7 ತಾಲ್ಲೂಕುಗಳ ಆಯ್ದ 122 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು.

Written by - Zee Kannada News Desk | Last Updated : Nov 24, 2021, 10:10 PM IST
  • ಕೊಪ್ಪಳ ಜಿಲ್ಲೆಯ 7 ತಾಲ್ಲೂಕುಗಳ ಆಯ್ದ 122 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು.
  • ನವೆಂಬರ್ 15 ರಂದು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಲಾಗಿ 6 ತಾಲ್ಲೂಕುಗಳ ಒಟ್ಟು 15 ಗ್ರಾ.ಪಂ.ಗಳಿಗೆ ಯಾವುದೇ ಅರ್ಜಿಗಳು ಸ್ವೀಕೃತವಾಗಿರದ ಹಿನ್ನೆಲೆಯಲ್ಲಿ ಖಾಲಿ ಉಳಿದ ಹುದ್ದೆ ಭರ್ತಿಗೆ ಮರು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾ.ಪಂ.ಗಳ ಖಾಲಿ ಉಳಿದ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ title=
file photo

ಬೆಂಗಳೂರು: ಕೊಪ್ಪಳ ಜಿಲ್ಲೆಯ 7 ತಾಲ್ಲೂಕುಗಳ ಆಯ್ದ 122 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು.

ನವೆಂಬರ್ 15 ರಂದು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಲಾಗಿ 6 ತಾಲ್ಲೂಕುಗಳ ಒಟ್ಟು 15 ಗ್ರಾ.ಪಂ. ಗಳಿಗೆ ಯಾವುದೇ ಅರ್ಜಿಗಳು ಸ್ವೀಕೃತವಾಗಿರದ ಹಿನ್ನೆಲೆಯಲ್ಲಿ ಖಾಲಿ ಉಳಿದ ಹುದ್ದೆ ಭರ್ತಿಗೆ ಮರು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ : ಕೃಷಿ ಕಾನೂನು ಹಿಂಪಡೆಯಲು ಸಂಪುಟ ಅನುಮೋದನೆ!

ಕೊಪ್ಪಳ ತಾಲ್ಲೂಕಿನ ಬೆಟಗೇರಿ, ಬಿಸರಹಳ್ಳಿ, ಕಲಕೇರಿ, ಕೋಳೂರು, ಕುಷ್ಟಗಿ ತಾಲ್ಲೂಕಿನ ತುಗ್ಗಲದೋಣಿ, ಕನಕಗಿರಿ ತಾಲ್ಲೂಕಿನ ನವಲಿ, ಯಲಬುರ್ಗಾ ತಾಲ್ಲೂಕಿನ ಮುರಡಿ, ಮಾಟಲದಿನ್ನಿ, ವಣಗೇರಿ, ಹಿರೇಅರಳಿಹಳ್ಳಿ, ಚಿಕ್ಕಮ್ಯಾಗೇರಿ, ಕುಕನೂರು ತಾಲ್ಲೂಕಿನ ಮಂಗಳೂರು, ಶಿರೂರು ಹಾಗೂ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಮಲ್ಲಾಪುರ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Vedio : ಬಟ್ಟೆ ಒಣಗಿಸಲು ಬಾಲ್ಕನಿಗೆ ಬಂದು 19ನೇ ಮಹಡಿಯಿಂದ ಜಾರಿ ಬಿದ್ದ ವೃದ್ದೆ ಮುಂದೆ...?

ಹುದ್ದೆಗೆ ನೇಮಕವಾದವರಿಗೆ ಮಾಸಿಕ ಗೌರವಧನ ರೂ.6000 ಗಳನ್ನು ನೀಡಲಾಗುವುದು. ಕಾರ್ಯನಿರ್ವಹಣೆ ಆಧರಿಸಿ ರೂ.5000 ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು. ಅರ್ಜಿಯನ್ನು ಡಿಸೆಂಬರ್ 06 ಮಧ್ಯಾಹ್ನ 01.30 ಗಂಟೆಯೊಳಗೆ ಸಲ್ಲಿಸಬೇಕು. ನಿಗದಿತ ದಿನಾಂಕ ಮತ್ತು ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ : ಕೃಷಿ ಕಾನೂನು ಹಿಂಪಡೆಯಲು ಸಂಪುಟ ಅನುಮೋದನೆ!

ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಆಯಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವಾಸವಾಗಿರಬೇಕು.ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು.ದಿನಾಂಕ:01-01-2021 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿ ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್‌ಕಾರ್ಡ್ ಹೊಂದಿರಬೇಕು. ಕಳೆದ 3 ವರ್ಷಗಳಲ್ಲಿ(2018-19, 2019-20 ಮತ್ತು 2020-21) ಕನಿಷ್ಟ 02 ವರ್ಷ ಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರಬೇಕು.ವಯೋಮಿತಿಯು ದಿನಾಂಕ:01-01-2021 ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು. ಓದು ಬರಹ ತಿಳಿದಿರಬೇಕು.ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೋಮದಿಗೆ ಸ್ಪಂದಿಸುವ ಗುಣಲಕ್ಷಣ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ತಾಲ್ಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯತಿಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News