ಬಿಜೆಪಿಯಲ್ಲಿ ಸೈಡ್ ಲೈನ್ ಆದ್ರಾ ಸಚಿವ ಶ್ರೀರಾಮುಲು..?

ಇತ್ತೀಚಿಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಅವರನ್ನು ಕಡೆಗಣಿಸಲಾಗುತ್ತಿದೆಯಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಎದುರಾಗಿದೆ.

Written by - Zee Kannada News Desk | Last Updated : Jan 20, 2023, 03:24 PM IST
  • ಪ್ರಧಾನಿ ಕಾರ್ಯಕ್ರಮದ ವೇಳೆ ಒಂದೇ ಒಂದು ಫ್ಲೆಕ್ಸ್ ನಲ್ಲೂ ಶ್ರೀ ರಾಮುಲು ಫೋಟೊ ಹಾಕದೆ ಈಗ ಬಿಜೆಪಿ ಅಂತರ ಕಾಯ್ದುಕೊಂಡಿದೆ.
  • ಯಾದಗಿರಿ ಜಿಲ್ಲೆ ಸುರಪುರ ಎಸ್ ಟಿ ಮೀಸಲು ಕ್ಷೇತ್ರದ ಕೊಡೇಕಲ್ ನಲ್ಲಿ ಆಯೋಜನೆಗೊಂಡಿದ್ದ
  • ಕಾರ್ಯಕ್ರಮದ ವೇಳೆ ಯಾದಗಿರಿ ಪಕ್ಕದ ರಾಯಚೂರು ಜಿಲ್ಲೆಯಲ್ಲಿ ಶ್ರೀರಾಮುಲು ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು.
ಬಿಜೆಪಿಯಲ್ಲಿ ಸೈಡ್ ಲೈನ್ ಆದ್ರಾ ಸಚಿವ ಶ್ರೀರಾಮುಲು..? title=
file photo

ಬೆಂಗಳೂರು:  ಇತ್ತೀಚಿಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಅವರನ್ನು ಕಡೆಗಣಿಸಲಾಗುತ್ತಿದೆಯಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಎದುರಾಗಿದೆ.

ಹೌದು, ಇಂತಹ ಪ್ರಶ್ನೆಗೆ ಪೂರಕವಾಗಿ ಇತ್ತೀಚಿನ ಬೆಳವಣಿಗೆಗಳು ಇದನ್ನು ಮತ್ತಷ್ಟು ಪುಷ್ಟಿಕರಿಸುತ್ತಿವೆ.ಒಂದೆಡೆ ರಾಯಚೂರು ಪಕ್ಕದ ಯಾದಗಿರಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಶ್ರೀರಾಮುಲು ಅವರನ್ನು ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ. ಎಸ್ ಟಿ ಮೀಸಲು ಕ್ಷೇತ್ರದಲ್ಲೇ ರಾಮಲು ಅವರನ್ನು ಕಡೆಗಣಿಸುತ್ತಿರುವುದನ್ನು ನೋಡಿದಾಗ ಈ ಬೆಳವಣಿಗೆಯನ್ನು ಮತ್ತಷ್ಟು ಪುಷ್ಟಿಕರಿಸಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರಾಮಪಟ್ಟಣ ಸರ್ಕಲ್‌ನಲ್ಲಿ ನವಜಾತ ಶಿಶು ಪತ್ತೆ

ಪ್ರಧಾನಿ ಕಾರ್ಯಕ್ರಮದ ವೇಳೆ ಒಂದೇ ಒಂದು ಫ್ಲೆಕ್ಸ್ ನಲ್ಲೂ ಶ್ರೀ ರಾಮುಲು ಫೋಟೊ ಹಾಕದೆ ಈಗ ಬಿಜೆಪಿ ಅಂತರ ಕಾಯ್ದುಕೊಂಡಿದೆ.ಯಾದಗಿರಿ ಜಿಲ್ಲೆ ಸುರಪುರ ಎಸ್ ಟಿ ಮೀಸಲು ಕ್ಷೇತ್ರದ,ಕೊಡೇಕಲ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ವೇಳೆ ಯಾದಗಿರಿ ಪಕ್ಕದ ರಾಯಚೂರು ಜಿಲ್ಲೆಯಲ್ಲಿ ಶ್ರೀರಾಮುಲು ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು.

ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಈ ವೇಳೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಇದಕ್ಕೆ ಹಾರೈಕೆಯ ಉತ್ತರವನ್ನು ನೀಡಿದ್ದಾರೆ.ಮೋದಿ ಕಾರ್ಯಕ್ರಮಕ್ಕೆ ನನ್ನ ಆಹ್ವಾನ ಮಾಡಿರಲಿಲ್ಲ, ಪ್ರೋಟೋಕಾಲ್ ನಲ್ಲಿ ಯಾರ್ಯಾರು ಭಾಗವಹಿಸಬೇಕು ಅಂತಾ ಇರುತ್ತೆ, ಹಾಗಾಗಿ ನನಗೆ ಆಹ್ವಾನ ಇದ್ದಿರಲಿಲ್ಲ ಇದರಿಂದಾಗಿ ನಾನು ಕಾರ್ಯಕ್ರಮಕ್ಕೆ ಗೈರಾಗಿದ್ದೇ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News