ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ‘ಪಕೋಡ ಮಾರಿ’ ಎಂದರು: ಸಿಎಂ ಸಿದ್ದರಾಮಯ್ಯ

PM Narendra Modi: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದ್ದಾರೆ ಎಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ.  ರಾಜ್ಯದಲ್ಲಿ ಹಿಂದೆ ಹಾಗೂ ಇಂದಿನ ಅವಧಿಯಲ್ಲಿ ಎಂದಿಗೂ ಮೀಸಲಾತಿಗಳನ್ನು ಬದಲಾಯಿಸಿಲ್ಲ. ಕಳೆದ 30 ವರ್ಷಗಳಿಂದ ಮುಸಲ್ಮಾನರಿಗೆ 4% ಮೀಸಲಾತಿ ನೀಡಲಾಗುತ್ತಿದ್ದು, ಮೀಸಲಾತಿ ಬಗ್ಗೆ ಮೋದಿಯವರು ಸುಳ್ಳು ಹೇಳಿ, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

Written by - Prashobh Devanahalli | Edited by - Manjunath N | Last Updated : Apr 29, 2024, 10:45 AM IST
  • ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದ್ದಾರೆ ಎಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ.
  • ರಾಜ್ಯದಲ್ಲಿ ಹಿಂದೆ ಹಾಗೂ ಇಂದಿನ ಅವಧಿಯಲ್ಲಿ ಎಂದಿಗೂ ಮೀಸಲಾತಿಗಳನ್ನು ಬದಲಾಯಿಸಿಲ್ಲ.
  • ಮೀಸಲಾತಿ ಬಗ್ಗೆ ಮೋದಿಯವರು ಸುಳ್ಳು ಹೇಳಿ, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
 ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ‘ಪಕೋಡ ಮಾರಿ’ ಎಂದರು: ಸಿಎಂ ಸಿದ್ದರಾಮಯ್ಯ title=
file photo

PM Narendra Modi: ರಾಯಚೂರು (ಸಿಂಧನೂರು): ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ಪ್ರಧಾನ ಮಂತ್ರಿಗಳು ‘ಪಕೋಡ ಮಾರಿ’ ಎಂದರು ಎಂದು  ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಸಿಂಧನೂರು ನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ಯವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ವಿದೇಶದಿಂದ ಬಂದ ಕಪ್ಪು ಹಣವನ್ನು ತಂದು ದೇಶದ ಎಲ್ಲ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆ ಎಂದಿದ್ದ ಮೋದಿಯವರು ಹತ್ತು ವರ್ಷವಾದರೂ ಹಣ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಜನರಿಗೆ ಕೆಲಸ ನೀಡುತ್ತೇನೆ ಎಂದಿದ್ದರು. ಇದನ್ನು ನಂಬಿ ದೇಶದ ಯುವಜನತೆ ‘ಮೋದಿ , ಮೋದಿ’ ಎಂದು ನಂಬಿದ್ದರೆ, ಮೋದಿಯವರು ‘ಪಕೋಡ ಮಾರಲಿ’ ಎಂದು ಯುವಜನರಿಗೆ ಹೇಳಿದ್ದು, ಮೋದಿಯವರ ಬೇಜವಾಬ್ದಾರಿಯನ್ನು ತೋರುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಸುಳ್ಳನ್ನು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಮೋದಿಯವರು ರೂಪಾಯಿ ಮೌಲ್ಯವನ್ನು ಹೆಚ್ಚಿಸುತ್ತೇನೆ ಎಂದು ಸುಳ್ಳು ಹೇಳಿ, ಡಾಲರ್ ಮೌಲ್ಯವನ್ನು ಹೆಚ್ಚಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಅವರು ಎಲ್ಲ ಸುಳ್ಳು ಭರವಸೆಗಳನ್ನು ನೀಡಿ, ಮೋದಿಯವರು ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 2014 ಹಾಗೂ 2019 ರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿ, ಈಗ ಜನರಿಗೆ ಅವರ ಮಾತುಗಳನ್ನು ಸುಳ್ಳು ಎಂದು ತಿಳಿದಿದ್ದಾರೆ ಎಂದರು.

ಇದನ್ನೂ ಓದಿ: ಉಪ್ಪಿಗೆ ಈ ಎಲೆಯ ರಸ ಮಿಕ್ಸ್ ಮಾಡಿ ಹಚ್ಚಿ: ಕ್ಷಣಾರ್ಧದಲ್ಲಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು! ಸೊಂಪಾಗಿ ಉದ್ದವಾಗಿ ಬೆಳೆಯುತ್ತೆ ಸಹ

ಮೀಸಲಾತಿ ಬಗ್ಗೆ ಮೋದಿ ಸುಳ್ಳು ಹೇಳುತ್ತಿದ್ದಾರೆ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದ್ದಾರೆ ಎಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ.  ರಾಜ್ಯದಲ್ಲಿ ಹಿಂದೆ ಹಾಗೂ ಇಂದಿನ ಅವಧಿಯಲ್ಲಿ ಎಂದಿಗೂ ಮೀಸಲಾತಿಗಳನ್ನು ಬದಲಾಯಿಸಿಲ್ಲ. ಕಳೆದ 30 ವರ್ಷಗಳಿಂದ ಮುಸಲ್ಮಾನರಿಗೆ 4% ಮೀಸಲಾತಿ ನೀಡಲಾಗುತ್ತಿದ್ದು, ಮೀಸಲಾತಿ ಬಗ್ಗೆ ಮೋದಿಯವರು ಸುಳ್ಳು ಹೇಳಿ, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ಮುಸಲ್ಮಾನರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋದಾಗ, ಮೀಸಲಾತಿಯನ್ನು ಯಥಾವತ್ತು ಮುಂದುವರೆಸುವುದಾಗಿ ಬಿಜೆಪಿ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದರು.

ಸುಳ್ಳು ಹೇಳಿ ಜನರ ದಾರಿತಪ್ಪಿಸಬಹುದೆಂಬುದು ಮೋದಿಯವರ ಭ್ರಮೆ

ನಾನು ರಾಜಕೀಯದಲ್ಲಿ 45 ವರ್ಷದಿಂದ ಇದ್ದೇನೆ, ಆದರೆ ನನ್ನ ಅನುಭವದಲ್ಲಿ ಇಷ್ಟು ಸುಳ್ಳು ಹೇಳುವ ಮೋದಿಯಂತಹ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ. ಸುಳ್ಳು ಹೇಳಿ ಜನರ ದಾರಿತಪ್ಪಿಸಲು ಸಾಧ್ಯವಿಲ್ಲ. ಹಾಗೆ ತಿಳಿದಿದ್ದಲ್ಲಿ ಅದು ಮೋದಿಯವರ ಭ್ರಮೆ.

ಮೋದಿಯವರು ಬಡಜನರಿಗೆ ಶಕ್ತಿ ತುಂಬಲಿಲ್ಲ

ಶಿವಾಜಿಯವರನ್ನು ಹಾಗೂ ಕಿತ್ತೂರು ರಾಣಿ ಚೆನ್ನಮ್ಮನನ್ನು ಕಾಂಗ್ರೆಸ್ ಸರ್ಕಾರ ಅವಮಾನಿಸಿದೆ ಎಂದು ಮೋದಿಯವರು ಸುಳ್ಳು ಹೇಳಿದ್ದಾರೆ. ಆದರೆ ನನ್ನ ಅವಧಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಹಾಗೂ ವಿಶ್ವಗುರು ಬಸವಣ್ಣನವರನ್ನು ವಿಶ್ವ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರವೇ ಘೋಷಿಸಿದ್ದು, ಮೋದಿಯವರು ಸುಳ್ಳು ನುಡಿಯುತ್ತಿದ್ದಾರೆ. ಈ ಕಾರ್ಯವನ್ನು ಯಡಿಯೂರಪ್ಪನವರಾಗಲಿ ಅಥವಾ ಬೊಮ್ಮಾಯಿಯವರು ಮಾಡಲಿಲ್ಲ. ಮೋದಿಯವರು ಅಧಿಕಾರದಲ್ಲಿದ್ದಾಗ ಬಡಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News